ಬೆಂಗಳೂರು: ದರ್ಶನ್, ಪವಿತ್ರಾ ಗೌಡ, ವಿನಯ್, ಪ್ರದೋಶ್ ಮುಂತಾದವರು ರೇಣುಕಾ ಸ್ವಾಮಿ ಕೊಲೆ ಆರೋಪ ಎದುರಿಸುತ್ತಿದ್ದಾರೆ. ಈ ಪ್ರಕರಣದಲ್ಲಿ ಪ್ರಮುಖವಾಗಿರುವ ಮತ್ತೋರ್ವ ವ್ಯಕ್ತಿ ಇದ್ದಾರೆ. ಪ್ರಕರಣದಲ್ಲಿ ಕಾಮಾಕ್ಷಿಪಾಳ್ಯ ಠಾಣೆಯ ಪಿಎಸ್ಐ ಪಿಎಸ್ಐ ವಿನಯ್ ಪಾತ್ರ ಏನು? ಅನುಮಾನಕ್ಕೆ ಕಾರಣವಾಗಿದೆ ತನಿಖೆ ವೇಳೆ ಪ್ರದೂಶ್ ನಡೆ ಪ್ರತಿ ಹಂತದಲ್ಲೂ ಓರ್ವನ ಪಾತ್ರ ಹೆಚ್ಚಿದೆ. ಅಷ್ಟಕ್ಕೂ ಆತ ಯಾರು? ಇಲ್ಲಿದೆ ಡಿಟೇಲ್ಸ್.
ಇದೇ ಪಿಎಸ್ಐ ವಿನಯ್ ಜೊತೆಗೆ ಪ್ರದೂಷ್ ಸಂಪರ್ಕ ಹೊಂದಿದ್ದು ಪ್ರಕರಣದಲ್ಲಿ ಎ14 ಆರೋಪಿಯಾಗಿರುವ ಪ್ರದೂಷ್ಜೂನ್ 8ರಿಂದ 10ರವರೆಗೆ ಇಬ್ಬರ ಮಧ್ಯೆ ಸಂಪರ್ಕಪ್ರದೂಷ್ ಮತ್ತು ವಿನಯ್ ಮಧ್ಯೆ ವ್ಯಾಟ್ಸಾಪ್ ಚಾಟ್122 ಬಾರಿ ವ್ಯಾಟ್ಸಾಪ್ ಚಾಟ್ ಮಾಡಿದ್ದು ಪತ್ತೆ ಚಾಟ್ನ ಕೆಲವು ಅಂಶಗಳು ಮೊಬೈಲ್ನಿಂದ ಡಿಲೀಟ್
ಜೂನ್ 9ರಂದು ಬೆಳಿಗ್ಗೆ ರೇಣುಕಾಸ್ವಾಮಿ ಮೃತದೇಹ ಪತ್ತೆ ಸಂಜೆ 6.28 ನಿಮಿಷಕ್ಕೆ ಪ್ರದೂಷ್ಗೆ ವಿಡಿಯೋ ರವಾನೆ ಸಿಸಿಟಿವಿ ವಿಡಿಯೋ ಕ್ಲಿಪ್ ಕಳುಹಿಸಿದ್ದ ಪಿಎಸ್ಐ ವಿನಯ್ ಅಪಾರ್ಟ್ಮೆಂಟ್ ಮುಂಭಾಗದ ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವಿಡಿಯೋ ಬಿಳಿ ಬಣ್ಣದ ಸ್ಕಾರ್ಪಿಯೋ ಕಾರು ಹೋಗ್ತಿರುವ ವಿಡಿಯೋ ಮೃತದೇಹ ಎಸೆದ ಬಳಿಕ ವಾಪಾಸ್ ಹೋಗ್ತಿದ್ದ ಆರೋಪಿಗಳು
ಈ ವಿಡಿಯೋನ ಪಿಎಸ್ಐ ವಿನಯ್ ಪ್ರದೂಷ್ಗೆ ಕಳುಹಿಸಿದ್ದ ಅನುಮಾನಕ್ಕೆ ಕಾರಣವಾದ ಹಲವು ವಿಚಾರಗಳು ಜೂನ್ 8ರಿಂದ 10ರ ಮಧ್ಯೆ ಏನೇನ್ ಚಾಟ್ ಮಾಡಿದ್ರು ಪಿಎಸ್ಐ ವಿನಯ್ಗೆ ಘಟನೆಯ ಬಗ್ಗೆ ಗೊತ್ತಿತ್ತಾ? ಪ್ರದೂಷ್ ಮೊದಲೇ ಎಲ್ಲಾ ವಿಚಾರ ಚರ್ಚೆ ಮಾಡಿದ್ರಾ? ಇಬ್ಬರ ಮಧ್ಯೆ ನಡೆದ 122 ವ್ಯಾಟ್ಸಾಪ್ ಚಾಟ್ ಏನು?
ಪಿಎಸ್ಐ ವಿನಯ್ ಕಡೆಯಿಂದ ಹೇಳಿಕೆ ದಾಖಲು ಮಾಡಿಕೊಂಡಿರುವ ಪೊಲೀಸರು ಜನವರಿ 2024ರಿಂದ ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ಕೆಲಸ 2016ರಿಂದ 2021ರವರೆಗೆ ಗಿರಿನಗರ ಠಾಣೆಯಲ್ಲಿ ಪಿಎಸ್ಐ ಇದೇ ಸಮಯದಲ್ಲಿ ಆರೋಪಿ ಪ್ರದೂಷ್ ಪರಿಚಯವಾಗಿದ್ದ ಜೂನ್ 2ರಂದು ಪ್ರದೂಷ್ ಮಗನ ನಾಮಕರಣ ಇತ್ತುನಾಮಕರಣ ಕಾರ್ಯಕ್ರಮಕ್ಕೂ ಪ್ರದೂಷ್ ಬಂದು ಹೋಗಿದ್ದ ಜೂನ್ 6 ರಿಂದ ರಜೆ ಮೇಲೆ ತೆರಳಿದ್ದ ಪಿಎಸ್ಐ ವಿನಯ್ ಕುಟುಂಬ ಸದಸ್ಯರ ಜೊತೆ ಕಬಿನಿ, ಕೇರಳ ಪ್ರವಾಸ
ಜೂನ್ 8ರಂದು ರಾತ್ರಿ 8.30ಕ್ಕೆ ವಿನಯ್ಗೆ ಫೋನ್ ಕಾಲ್ ಆರೋಪಿ ಪ್ರದೂಷ್ ಕಡೆಯಿಂದ ನಾರ್ಮಲ್ ಕಾಲ್ ಹಣಕಾಸಿನ ವಿಚಾರದಲ್ಲಿ ಗೊತ್ತಿರುವವರ ಮಧ್ಯೆ ಗಲಾಟೆ ಮತ್ತೆ ಕಾಲ್ ಮಾಡ್ತೀನಿ ನಿಮ್ಮ ಸಲಹೆ ಬೇಕು ಎಂದಿದ್ದ 15 ನಿಮಿಷ ಬಿಟ್ಟು ಮತ್ತೆ ಕರೆ ಮಾಡಿದ್ದ ಪ್ರದೂಷ್ ಅರ್ಧ ಗಂಟೆ ಬಳಿಕ ವ್ಯಾಟ್ಸಾಪ್ ಕಾಲ್ ಮಾಡಿದ್ದ ಪ್ರದೂಷ್ ದರ್ಶನ್ ಅಭಿಮಾನಿ ಸಂಘದ ರಘು ಹೆಸರು ಹೇಳಿದ್ದ
ಇದಾದ ಬಳಿಕ ಮತ್ತೆ 15 ನಿಮಿಷದ ನಂತರ ಕಾಲ್ ಬಳಿಕ ಮಧ್ಯರಾತ್ರಿ ಹಲವು ಬಾರಿ ಕಾಲ್ ಮಾಡಿದ್ದ ಪ್ರದೂಷ್ ಮಧ್ಯರಾತ್ರಿ 2.30ಕ್ಕೆ ವಾಪಾಸ್ ಕಾಲ್ ಮಾಡಿದ್ದ ವಿನಯ್ ಗಲಾಟೆಯಲ್ಲಿ ಓರ್ವನ ಗುಪ್ತಾಂಗಕ್ಕೆ ಒದ್ದು ಸತ್ತೋಗಿದ್ದಾನೆ ಏನ್ ಮಾಡೋದು ಇವಾಗ ಅಂತ ಕೇಳಿದ್ದ ಪ್ರದೂಷ್ ತಕ್ಷಣವೇ ಸಮೀಪದ ಸ್ಟೇಷನ್ಗೆ ಹೋಗಿ ಸರೆಂಡರ್ ಆಗಿ ಪಿಎಸ್ಐ ವಿನಯ್ ಕಡೆಯಿಂದ ಪ್ರದೂಷ್ಗೆ ಸಲಹೆ ನೀಡಿದ್ದ.
ಜೂನ್ 9ರಂದು ಬೆಳಿಗ್ಗೆ 11 ಗಂಟೆಗೆ ಮತ್ತೆ ಕಾಲ್ ಸುಮ್ಮನಹಳ್ಳಿ ಜಂಕ್ಷನ್ ಹತ್ತಿರ ಘಟನೆ ನಡೆದಿದೆ ಅಂದಹಾಗೆ ಸತ್ವ ಅಪಾರ್ಟ್ಮೆಂಟ್ ಹತ್ತಿರ ಮೋರಿ ಬಳಿ ಕೊಲೆ ನಡಿದಿದ್ದು ಹೀಗೆಂದು ಪ್ರದೂಷ್ ಹೇಳಿದ್ದಾಗಿ ವಿನಯ್ ಹೇಳಿದ್ದಾನೆ. ಇದರ ಬೆನ್ನಲ್ಲೇ ವಿನಯ್ನಿಂದ ಸರೆಂಡರ್ ಆಗಲು ಸೂಚನೆ ನೀಡಿದ್ದಿ ಕಾಮಾಕ್ಷಿಪಾಳ್ಯ ಠಾಣೆಗೆ ಹೋಗಿ ಸರೆಂಡರ್ ಆಗಲು ಸೂಚನೆ ನೀಡಿದ್ದ ನಾನು ರಜೆ ಮೇಲೆ ಇದ್ದೇನೆ, ಇಲ್ಲಾಂದ್ರೆ ನಾನೇ ಬರ್ತಿದ್ದೆ ಇಷ್ಟು ಹೇಳಿ ಕಾಲ್ ಕಟ್ ಮಾಡಿದ್ದ ಪಿಎಸ್ಐ ವಿನಯ್
ಇದದಾ ಬಳಿಕ ಇನ್ಸ್ಪೆಕ್ಟರ್ ಗಿರೀಶ್ ನಾಯ್ಕ್ಗೆ ಮಾಹಿತಿ ಖುದ್ದು ಪಿಎಸ್ಐ ವಿನಯ್ ಫೋನ್ ಮಾಡಿದ್ದಾಗಿ ಹೇಳಿಕೆ ಕೃತ್ಯ ನಡೆದ ಸ್ಥಳದಲ್ಲಿ ಸಿಸಿಟಿವಿ ಫೂಟೇಜ್ ದೊರಕಿತ್ತು ನಾನು ಈ ಫೂಟೇಜ್ ಪ್ರದೂಷ್ಗೆ ಕಳಿಸಿದ್ದಾಗಿ ಹೇಳಿಕೆ ಕೊಲೆ ನಡೆದಿದ್ದು ಪಟ್ಟಣಗೆರೆ ಬಳಿಯ ಶೆಡ್ನಲ್ಲಿ ಈ ಶೆಡ್ ಸಮೀಪದಲ್ಲೇ ಕೆಂಗೇರಿ ಮೋರಿ ಇದೆ ಬೇಕಿದ್ದರೇ ಅಲ್ಲೇ ಮೋರಿ ಹತ್ತಿರ ಎಸೆದು ಬರಬಹುದಿತ್ತು ಆದ್ರೆ ಅಲ್ಲಿಂದ ಸುಮ್ಮನಹಳ್ಳಿವರೆಗೆ ಬಂದಿದ್ದು ಯಾಕೆ..? ಯಾರ ಸೂಚನೆ ಪ್ರಕಾರ ಸುಮ್ಮನಹಳ್ಳಿಗೆ ಬಂದ್ರು..? ಮೋರಿಯ ಒಂದು ಸೈಡ್ ಕಾಮಾಕ್ಷಿಪಾಳ್ಯ ಲಿಮಿಟ್ಸ್ ಇನ್ನೊಂದು ಸೈಡ್ ಅನ್ನಪೂರ್ಣೇಶ್ವರಿ ನಗರ ಲಿಮಿಟ್ಸ್ ನಿರ್ದಿಷ್ಟವಾಗಿ ಕಾಮಾಕ್ಷಿಪಾಳ್ಯ ಲಿಮಿಟ್ಸ್ಗೆ ಯಾಕೆ ತಂದು ಹಾಕಿದ್ರು? ಹಲವು ಅನುಮಾನಗಳಿಗೆ ಕಾರಣವಾಗ್ತಿದೆ ಆರೋಪಿಗಳ ನಡೆ