ಬಾಗಲಕೋಟೆ: ರಬಕವಿ ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಮನೆಮನೆಗೆ ತೆರಳಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದರು.
ನಗರದ ವಾರ್ಡಗಳಲ್ಲಿ ಮನೆ ಮನೆಗೆ ಕಾಂಗ್ರೆಸ್ ಪಕ್ಷದ ಯೋಜನೆಗಳ ಗೃಹಜ್ಯೋತಿ ಪ್ರತಿ ತಿಂಗಳ 200 ಯೂನಿಟ್ ಹಾಗೂ ಗೃಹಲಕ್ಷ್ಮೀ ಪ್ರತಿ ಬಿ ಪಿ ಎಲ್ ಕುಟುಂಬಕ್ಕೆ ಪ್ರತಿ ತಿಂಗಳು 2000 ಸಾವಿರ ರೂ ಗಳು ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಿಸಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರದ ಹಗರಣಗಳಿಂದ ಜನರು ಬೇಸರಗೊಂಡಿದ್ದಾರೆ. ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ರಚನೆಯಾಗುವದು ಖಚಿತವೆಂದು ತೇರದಾಳ ಮತಕ್ಷೇತ್ರದ ಕಾಂಗ್ರೆಸ್ ಪಕ್ಷದ ಟಿಕೆಟ್ ಆಕಾಂಕ್ಷಿ ಡಾ.ಪದ್ಮಜೀತ ನಾಡಗೌಡ ಪಾಟೀಲ. ಹೇಳಿದರು. ಬಿಜೆಪಿ ಸರ್ಕಾರ ರಾಜ್ಯದ ಸಂಪತ್ತನ್ನು ಕೊಳ್ಳೆ ಹೊಡೆದು ಜನರ ತೆರಿಗೆಯಲ್ಲಿ ಜನರ ಅಭಿವೃದ್ಧಿ ಬದಲಾಗಿ ತಾವೇ ಅಭಿವೃದ್ಧಿ ಹೊಂದಿ ಇಡೀ ರಾಜ್ಯವನ್ನೆ ಹಾಳು ಮಾಡುತ್ತಿದೆ.
ಪ್ರಸಕ್ತ ವರ್ಷದ ಚುನಾವಣೆಯಲ್ಲಿ ಜನತೆ ಕಾಂಗ್ರೆಸ್ ಪಕ್ಷಕ್ಕೆ ಆರ್ಶಿವದಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಶಂಕರ ಸೋರಗಾಂವಿ.ಮಾಳು ಹಿಪ್ಪರಗಿ. ಗಂಗಪ್ಪ ಮಂಟೂರ.ರವಿ ಬಾಡಗಿ.ಕುಮಾರ ಬಿಳ್ಳೂರ. ಸಂಜಯ ಅಮ್ಮನಿಗಿಮಠ. ಮಲ್ಲಿಕ ನದಾಫ. ಸೇರಿದಂತೆ ಕಾಂಗ್ರೆಸ್ ಪಕ್ಷದ ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.