ರಾಯಚೂರು ಜಿಲ್ಲೆ ಮಾನ್ವಿಯ ಶಾಲಾ ವಾಹನ ಅಪಘಾತ ಬೆನ್ನಲ್ಲೆ ರಾಜ್ಯದ ಎಲ್ಲಾ ಖಾಸಗಿ ಶಾಲೆಗಳ ವಾಹನಗಳಿಗೆ ಆಂಬ್ಯುಲೆನ್ಸ್ ಮಾನ್ಯತೆಗಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ ಕರ್ನಾಟಕ ಖಾಸಗಿ ಶಿಕ್ಷಣ ಸಂಸ್ಥೆ.
ಮಾನ್ವಿಯ ಶಾಲಾ ಬಸ್ ಹಾಗೂ KSRTC ಬಸ್ ಮಧ್ಯೆ ಆದ ಅಪಘಾತ ಇದೇ ತಿಂಗಳ 5ರಂದು ನಡೆದಿದ್ದ ಭೀಕರ ಅಪಘಾತ ಅಪಘಾತದಲ್ಲಿ ಇಬ್ಬರು ಮಕ್ಕಳು ಸಾವನ್ನಪ್ಪದ್ರು ಮೂರ್ನಾಲ್ಕು ಮಕ್ಕಳ ಕೈ ಕಾಲು ಕಟ್ ಆಗಿದ್ದವು.
ಇದರಿಂದ ರಾಜ್ಯದ ಎಲ್ಲಾ ಪೋಷಕರಿಗೆ, ಮತ್ತು ಸಾರ್ವಜನಿಕರಿಗೆ, ದೊಡ್ಡ ಆಘಾತ ಉಂಟಾಗಿದೆ ಈ ರೀತಿಯ ಅವಘಡ ಮತ್ತೆ ಆಗದಂತೆ ಸರ್ಕಾರ ಕೂಡಲೇ ಕ್ರಮಕ್ಕೆ ಮುಂದಾಗುವಂತೆ ಒತ್ತಾಯ ಕೃಪ ಸಂಘಟನೆಯಿಂದ ಸರ್ಕಾರಕ್ಕೆ ಒತ್ತಾಯ
ಮಕ್ಕಳು ಶಾಲೆಗಳಿಗೆ ಸುರಕ್ಷಿತವಾಗಿ ಸಂಚರಿಸಲು ಹಾಗೂ ಪೋಷಕರ ಆತಂಕ ನಿವಾರಿಸಬೇಕು ಶಾಲಾ ಆಡಳಿತ ಮಂಡಳಿ, ಸಾರಿಗೆ ಇಲಾಖೆ, ಪೊಲೀಸ್ ಇಲಾಖೆ ಹಾಗೂ ಪೋಷಕರ ಸಂಘಟನೆಗಳ ಸದಸ್ಯರೊಂದಿಗ ಸಭೆ ಮಾಡಿ, ಕಾನೂನಿನಡಿ ಕ್ರಮಕ್ಕೆ ಒತ್ತಾಯ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಗೆ ಪತ್ರದ ಮೂಲಕ ಮನವಿ
ಪ್ರಸ್ತುತ ಸಮಸ್ಯೆಗಳು
ಬೆಂಗಳೂರಿನಂತಹ ನಗರಗಳಲ್ಲಿ ಯಾವುದೇ ಕನಿಷ್ಠ ಸುರಕ್ಷತೆ ಪಾಲಿಸದೆ ಆಟೋಗಳಲ್ಲಿ ಮಕ್ಕಳನ್ನ ಸಾಗಾಟ ಮಾಡಲಾಗ್ತಿದೆ ಇಂತಹ ಮಿತಿಮೀರಿದ ವಾಹನ ದಟ್ಟಣೆಯಲ್ಲಿ ಮಕ್ಕಳನ್ನು ತುಂಬಿಕೊಂಡು ಹೋಗೋದು ಸೂಕ್ತವಲ್ಲ ಜೊತೆಗೆ ಇಂತಹ ಶಾಲೆಗಳ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಶಾಲಾ ವಾಹನಗಳ ಸಂಚಾರಕ್ಕೆ ಅಂಬ್ಯುಲೆನ್ಸ್ ಮಾದರಿಯ ಮಾನ್ಯತೆ ನೀಡಬೇಕು
ಶಾಲಾ ವಾಹನಗಳ ದಕ್ಷತೆ ಹಾಗೂ ಇನ್ಷೂರೆನ್ಸ್ ಇತ್ಯಾದಿ ಸಮಸ್ಯೆಗಳನ್ನು ಬಗೆಹರಿಸುವ ಏಕ ಕಿಂಡಿ (ಸಿಂಗಲ್ ವಿಂಡೋ) ವ್ಯವಸ್ಥೆ ಮಾಡಬೇಕು ಶಾಲಾ ವಾಹನಗಳಿಗೆ ವಾರ್ಷಿಕವಾಗಿ ವಿಧಿಸುವ ಟ್ಯಾಕ್ಸ್(ಶುಲ್ಕ) ಕಡಿತ ಮಾಡಬೇಕು ಮೂರು ಪಟ್ಟು ಜಾಸ್ತಿ ಆಗಿರುವುದು ಪೋಷಕರಿಗೆ ಹೊರೆ ಆಗಿದೆ. ಪರಿಣಾಮ ಪೋಷಕರು ಸುರಕ್ಷಿತವಲ್ಲದ ವಾಹನಗಳ ಮೊರೆ ಹೋಗಲು ಕಾರಣ ಆಗಿದೆ