ಕಿರುತೆರೆ ನಟ ಹಾಗೂ ಸೋಷಿಯಲ್ ಮೀಡಿಯಾ ಸ್ಟಾರ್ ವರುಣ್ ಅರಾಧ್ಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಬೃಂದಾವನ ಸೀರಿಯಲ್ನಲ್ಲಿ ನಟಿಸುತ್ತಿದ್ದ ವರುಣ್ ಆರಾಧ್ಯ ಅವರು ಸೀರಿಯಲ್ಗೆ ಎಂಟ್ರಿ ಕೊಡುವ ಸ್ವಲ್ಪ ಮುನ್ನ ವರ್ಷ ಕಾವೇರಿ ಜೊತೆ ಬ್ರೇಕ್ ಅಪ್ ಮಾಡಿ ಕೊಂಡಿದ್ದರು. ಆದರೆ ಇದೀಗ ವರುಣ್ ವಿರುದ್ಧ ವರ್ಷ ಕಾವೇರಿ ದೂರು ದಾಖಲಿಸಿದ್ದಾರೆ.
ಖಾಸಗಿ ವಿಡಿಯೋ ಮತ್ತು ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಮಾಡೋದಾಗಿ ಬೆದರಿಕೆಯ ಆರೋಪದಡಿ ವರುಣ್ ಆರಾಧ್ಯ ವಿರುದ್ಧ ವರ್ಷ ಕಾವೇರಿ ದೂರು ನೀಡಿದ್ದಾರೆ. ಯುವತಿ ಜೊತೆ ಎಂಗೇಜ್ ಆಗಿದ್ದಾಗಲೇ ಬೇರೆ ಅವರೊಂದಿಗೆ ವರುಣ್ ಅಫೇರ್ ಹೊಂದಿದ್ದರು. ಅದನ್ನು ಪ್ರಶ್ನಿಸಿದ ಯುವತಿಗೆ ಖಾಸಗಿ ಫೋಟೋ, ವಿಡಿಯೋವನ್ನು ಸೋಶಿಯಲ್ ಮೀಡಿಯಾದಲ್ಲಿ ಹಾಕುವುದಾಗಿ ವರುಣ್ ಬೆದರಿಸಿದ್ದ. ಮುಂದೆ ಬೇರೆಯವರನ್ನು ಮದುವೆಯಾದರೆ, ಅವನನ್ನು ಸಾಯಿಸಿ ನಿನ್ನನ್ನು ಸಾಯಿಸುತ್ತೇನೆ ಬೆದರಿಸಿದ್ದಾರೆ. ವಾಟ್ಸ್ ಆಪ್ಗೆ ಖಾಸಗಿ ಫೋಟೋ ಕಳುಹಿಸಿ ಅವಾಚ್ಯ ಪದಗಳಿಂದ ವರುಣ್ ನಿಂದಿಸಿರೋದಾಗಿ ವರ್ಷ ಕಾವೇರಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ವರುಣ್ ಆರಾಧ್ಯ ಹಾಗೂ ವರ್ಷ ಕಾವೇರಿ ಪ್ರೀತಿಸುತ್ತಿದ್ದು ಕಳೆದ ವರ್ಷ ಇಬ್ಬರೂ ಬ್ರೇಕಪ್ ಮಾಡಿಕೊಂಡಿದ್ದರು.