ಕನ್ನಡದ ಖ್ಯಾತ ಹಿರಿಯ ನಟಿ ತಾರಾ ಅನುರಾಧಾ ವಿಶೇಷ ಫೋಟೋ ಶೂಟ್ ಮಾಡಿಸಿದ್ದು ಥೇಟ್ ರಾಜಮಾತೆಯಂತೆ ಕಂಗೊಳಿಸಿದ್ದಾರೆ. ಮೈಸೂರಿನ ಮಹಾರಾಣಿಯ ರೀತಿ ಫೋಟೋ ಶೂಟ್ ಮಾಡಿಸಿದ್ದು ನಟಿಯ ಲುಕ್ ಗೆ ಪ್ರತಿಯೊಬ್ಬರು ಕ್ಲೀನ್ ಬೋಲ್ಡ್ ಆಗಿದ್ದಾರೆ.
ವಿಶೇಷ ಫೋಟೋ ಶೂಟ್ ಮೂಲಕ ನಟಿ ತಾರಾ ಅನುರಾಧಾ ಗೌರಿ ಗಣೇಶ ಹಬ್ಬಕ್ಕೆ ನಾಡಿನ ಜನತೆಗೆ ವಿಶೇಷವಾಗಿಯೆ ಶುಭಾಷಯ ತಿಳಿಸಿದ್ದಾರೆ.
ತಾರಾ ಅನುರಾಧಾ ತೇಟ ಮಹಾರಾಣಿಯ ರೂಪದಲ್ಲಿಯೇ ಕಂಗೊಳಿಸಿದ್ದಾರೆ. ಹಬ್ಬದ ದಿನವೇ ಈ ಒಂದು ಲುಕ್ನ ರಿವೀಲ್ ಆಗಿದೆ. ಹಾಗೆ ಈ ಬಗ್ಗೆ ತಾರಾ ಅನುರಾಧಾ ತಮ್ಮ ಈ ವಿಶೇಷ ಫೋಟೋದ ಹಿಂದಿನ ಸೀಕ್ರೆಟ್ ಕೂಡ ಬಿಚ್ಚಿಟ್ಟಿದ್ದಾರೆ. ಅದರ ಜೊತೆಗೆ ಒಂದಷ್ಟು ಫೋಟೋಗಳನ್ನು ಕೂಡ ಶೇರ್ ಮಾಡಿದ್ದಾರೆ.
ಮೈಸೂರಿನ ರಾಜಮಾತೆಯ ಲುಕ್ ಅನ್ನೇ ಇಲ್ಲಿ ರೀ-ಕ್ರಿಯೇಟ್ ಮಾಡಲಾಗಿದೆ. ಹಾಗಾಗಿಯೇ ತಾರಾ ಅನುರಾಧಾ ಅವರು ಮಹಾರಾಣಿಯಂತೆ ಕಾಣಿಸುತ್ತಿದ್ದಾರೆ. ಇದನ್ನ ನೋಡಿದ ಅಭಿಮಾನಿಗಳೂ ಕೂಡ ತಾರಾ ಅವರನ್ನ ರಾಜ ಮಾತೆ ಅಂತಲೂ ಕರೆದಿದ್ದಾರೆ.
ತಾರಾ ಅನುರಾಧಾ ಅವರು ತಮ್ಮ ಈ ಒಂದು ಲುಕ್ಗಾಗಿಯೇ ಶ್ರಮಿಸಿದವರಿಗೆ ಥ್ಯಾಂಕ್ಸ್ ಹೇಳಿದ್ದಾರೆ. ಅವರ ಬಗ್ಗೇನು ಬರೆದುಕೊಂಡಿದ್ದಾರೆ. ಮೇಕ್ಅಪ್ ಮಾಡಿರೋದು ಯಾರು.? ಕಾಸ್ಟೂಮ್ ಪ್ಲಾನ್ ಮಾಡಿರೋದು ಮತ್ಯಾರು? ಹೀಗೆ ಹಲವು ವಿಚಾರಗಳನ್ನ ಬರೆದುಕೊಂಡಿದ್ದಾರೆ.
ಸಮಸ್ತರಿಗೆ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯಗಳು. ಮನಸಿಗೆ ಬಹಳ ಹತ್ತಿರವಾದ ಸುಂದರ ಪಟಗಳು ಇವು ಎನ್ನುವ ಭಾವನೆ ಏಕೆಂದರೆ ಮೈಸೂರು ಸಂಸ್ಥಾನದ ಎಲ್ಲಾ ಹಿರಿಯರು ನನಗೆ ದೇವತಾ ಸ್ವರೂಪಿಗಳು. ಈ ಚಿತ್ರಪಟ ಎಷ್ಟು ಸುಂದರವಾಗಿ ಬರಲು ಕೆಲವು ಮಹಿಳೆಯರು ಮುಖ್ಯ ಪಾತ್ರ ವಹಿಸಿದ್ದಾರೆ ಅವರಿಗೆ ಖಂಡಿತವಾಗಿಯೂ ಧನ್ಯವಾದ ಹೇಳಲೇಬೇಕು.
ಮೊದಲಿಗೆ ಅವಿರ ಉಡುಪು ಇದರ ಮಾಲೀಕರು ಕಾರುಣ್ಯ ಇಂತಹ ಸುಂದರವಾದ ಸೀರೆಯನ್ನು ವಿನ್ಯಾಸ ಮಾಡಿಕೊಟ್ಟಿದ್ದಕ್ಕಾಗಿ. ಮತ್ತೆ ಅಷ್ಟೇ ಸುಂದರವಾಗಿ ವಸ್ತ್ರ ವಿನ್ಯಾಸಕಿ ವಿನ್ಯಾಸಕಿ ಶ್ರೀಮತಿ ಲಕ್ಷ್ಮಿ ಕೃಷ್ಣ ಅವರ ನೈಪುಣ್ಯ. ಮಾನಸ ವಿಹಾನ ರವರ ಪ್ರಸಾದನ ಕಲೆ, ಆಭರಣ ವಿನ್ಯಾಸಕರು ಭವಾನಿ ಸ್ಟೋರ್ಸ್ ಹಾಗೂ ಸ್ಪಟಿಕ ಮಯೂರವರು. ಇದಕ್ಕೆಲ್ಲ ಕಳಸ ವಿಟ್ಟಂತೆ ಈ ಚಿತ್ರಪಟಗಳ ಛಾಯಾಗ್ರಹಿಕಿ ಶ್ರೀಮತಿ ಹೇಮಾ ಎಲ್ಲರಿಗೂ ಧನ್ಯವಾದಗಳು ಅಂತಲೇ ತಾರಾ ಅನುರಾಧಾ ಹೇಳಿದ್ದಾರೆ.