ಸಮುದ್ರದತ್ತ ಉತ್ತರ ಕೊರಿಯಾವು ಅಲ್ಪ-ಶ್ರೇಣಿಯ ಖಂಡಾಂತರ ಕ್ಷಿಪಣಿಗಳನ್ನು ಉಡಾಯಿಸಿವೆ ಎಂದು ದಕ್ಷಿಣ ಕೊರಿಯಾದ ಮಿಲಿಟರಿ ತಿಳಿಸಿದೆ.
ಯುದ್ಧ ಸಿದ್ಧತೆಗಾಗಿ ಪರಮಾಣು ಬಲವನ್ನು ಸಂಪೂರ್ಣವಾಗಿ ಸಜ್ಜುಗೊಳಿಸುವುದಾಗಿ ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಹೇಳಿಕೆ ನೀಡಿರುವ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ.
ಖಂಡಾಂತರ ಕ್ಷಿಪಣಿಗಳು ಕೊರಿಯನ್ ಪೆನಿನ್ಸುಲಾ ಹಾಗೂ ಜಪಾನ್ ಮಧ್ಯದ ಸಮುದ್ರ ಪ್ರದೇಶದಲ್ಲಿ ಅಪ್ಪಳಿಸಿದ್ದು ಅವುಗಳನ್ನು ಪತ್ತೆಹಚ್ಚಿರುವುದಾಗಿ ದಕ್ಷಿಣ ಕೊರಿಯಾದ ಚೀಫ್ ಆಫ್ ಸ್ಟಾಫ್ ಜಂಟಿ ಮುಖ್ಯಸ್ಥರು ಹೇಳಿದ್ದಾರೆ.
ಯಾವುದೇ ಹಾನಿಯ ಬಗ್ಗೆ ತಕ್ಷಣಕ್ಕೆ ವರದಿ ಲಭ್ಯವಾಗಿಲ್ಲ. ಆದರೆ ಹಡಗು ಹಾಗೂ ಯುದ್ಧ ವಿಮಾನಗಳು ಸಜ್ಜಾಗಿರುವಂತೆ ಜಪಾನ್ನ ಪ್ರಧಾನಿ ಫ್ಯೂಮಿಯೊ ಕಿಶಿಡಾ ಸೂಚನೆ ನೀಡಿದ್ದಾರೆ.
ಸುಮಾರು 360 ಕಿ.ಮೀ. ಹಾರಿ ಬಂದ ಕ್ಷಿಪಣಿ ದಕ್ಷಿಣ ಕೊರಿಯಾದ ಮೇಲೆ ದಾಳಿ ಮಾಡಲು ಯೋಜಿಸಲಾಗಿದೆ. ಕೊರಿಯನ್ ಪೆನಿನ್ಸುಲಾದಲ್ಲಿ ಶಾಂತಿಯ ವಾತಾವರಣಕ್ಕೆ ಬೆದರಿಕೆ ಉಂಟು ಮಾಡಲು ಮತ್ತು ಪ್ರಚೋದನೆಯನ್ನು ದಕ್ಷಿಣ ಕೊರಿಯಾ ತೀವ್ರವಾಗಿ ಖಂಡಿಸಿದೆ.
ಅಮೆರಿಕ, ದಕ್ಷಿಣ ಕೊರಿಯಾ ಮತ್ತು ಉತ್ತರ ಕೊರಿಯಾ ಮಧ್ಯೆ ಮಿಲಿಟರಿ ಸಂಘರ್ಷ ಹಾಗೂ ಶೀತಲಸಮರ ಮುಂದುವರಿದಿದೆ. ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ಜಪಾನ್ನ ಮಿಲಿಟರಿ ತಾಲೀಮಿಗೆ ಪ್ರತಿಯಾಗಿ ಉತ್ತರ ಕೊರಿಯಾ ನಿರಂತರವಾಗಿ ಶಸ್ತ್ರಾಸ್ತ್ರ, ಕ್ಷಿಪಣಿಗಳ ಪರೀಕ್ಷೆ ನಡೆಸುತ್ತಿರುವುದು