ಸಾಮಾನ್ಯವಾಗಿ ದಂತ ವೈದ್ಯರ ಬಳಿಕ ಹಲ್ಲು ಕೀಳಿಸಲು ಹೋದಕ್ಕೆ ಒಂದೋ ಅಥವಾ ಎರಡು ಹಲ್ಲೋ ಕೀಳುತ್ತಾರೆ. ಆದರೆ ಇಲ್ಲೊಬ್ಬ ವೈದ್ಯ ಒಂದೇ ದಿನ 23 ಹಲ್ಲುಗಳನ್ನು ಕಿತ್ತು 12 ಹೊಸ ಹಲ್ಲುಗಳನ್ನು ಫಿಕ್ಸ್ ಮಾಡಿದ್ದಾನೆ. ಇದರಿಂದ ನೋವು ತಾಳಲಾರದೆ ವ್ಯಕ್ತಿ ಮೃತಪಟ್ಟ ಘಟನೆ ಪೂರ್ವ ಚೀನಾದ ಝೆಜಿಯಾಂಗ್ ಪ್ರಾಂತ್ಯದ ಜಿನ್ಹುವಾದಲ್ಲಿ ನಡೆದಿದೆ.
ಈ ಬಗ್ಗೆ ಯುವತಿ ಆನ್ಲೈನ್ ಪೋಸ್ಟ್ ಮೂಲಕ ತಿಳಿಸಿದ್ದಾರೆ. ಯುವತಿಯ ತಂದೆ ಹುವಾಂಗ್ ಅವರು ಆಗಸ್ಟ್ 14 ರಂದು ಯೋಂಗ್ಕಾಂಗ್ ಡ್ಯೂ ಡೆಂಟಲ್ ಆಸ್ಪತ್ರೆಯಲ್ಲಿ ಸುದೀರ್ಘ ದಂತ ಚಿಕಿತ್ಸೆಗೆ ಒಳಗಾಗಿದ್ದರು. ಅಲ್ಲಿನ ದಂತ ಶಸ್ತ್ರಚಿಕಿತ್ಸಕರು “ತಕ್ಷಣದ ಮರುಸ್ಥಾಪನೆ” ವಿಧಾನವನ್ನು ಅನುಸರಿಸಿದರು.
ಈ ಕಾರ್ಯವಿಧಾನದ ಭಾಗವಾಗಿ 23 ಹಲ್ಲುಗಳನ್ನು ಹೊರತೆಗೆಯಲಾಯಿತು. ಇದಲ್ಲದೇ 12 ಹೊಸ ಹಲ್ಲುಗಳನ್ನು ಅಳವಡಿಸಲಾಗಿದೆ. ಶಸ್ತ್ರಚಿಕಿತ್ಸೆ ನಡೆಸಿದ ಶಸ್ತ್ರಚಿಕಿತ್ಸಕ ಐದು ವರ್ಷಗಳ ಸೇವೆಯಲ್ಲಿ ಅನುಭವ ಹೊಂದಿದ್ದಾರೆ ಎಂದು ತಿಳಿದುಬಂದಿದೆ. ರೂಟ್ ಕೆನಾಲ್ ಚಿಕಿತ್ಸೆ, ಹೊರತೆಗೆಯುವಿಕೆ ಮತ್ತು ಇತರ ಹಲ್ಲಿನ ಚಿಕಿತ್ಸೆಗಳಲ್ಲಿ ಹೆಚ್ಚು ನುರಿತ. ಆದರೆ ಚಿಕಿತ್ಸೆಯ ನಂತರ, ಹುವಾಂಗ್ ನೋವಿನಿಂದ ಬಳಲುತ್ತಿದ್ದರು. ಹದಿಮೂರು ದಿನಗಳ ನಂತರ ಅವರು ಹಠಾತ್ ಹೃದಯಾಘಾತದಿಂದ ನಿಧನರಾದರು ಎಂದು ಯುವತಿ ತಿಳಿಸಿದ್ದಾಳೆ.
ಒಂದು ಸೆಷನ್ನಲ್ಲಿ ಎಷ್ಟು ಹಲ್ಲುಗಳನ್ನು ತೆಗೆಯಬೇಕು ಎಂಬುದು ರೋಗಿಯ ಆರೋಗ್ಯದ ಮೇಲೆ ಅವಲಂಬಿತವಾಗಿರುತ್ತದೆ ಮತ್ತು ಸಲಹೆ ನೀಡುವ ವೈದ್ಯರು ಅದನ್ನು ನಿರ್ಧರಿಸುತ್ತಾರೆ ಎಂದು ಅವರಿಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯ ಸಿಬ್ಬಂದಿ ಹೇಳಿದರು. ಸಾಮಾನ್ಯವಾಗಿ ಒಂದೇ ದಿನದಲ್ಲಿ ಮುಂಭಾಗದ ಹಲ್ಲುಗಳನ್ನು ಹೊರತೆಗೆಯಬಹುದು ಎಂದು ಅಲ್ಲಿರುವ ಸಿಬ್ಬಂದಿಯೊಬ್ಬರು ಹೇಳಿದರು. ಆದಾಗ್ಯೂ, ಅವರು ಸಹಿ ಮಾಡಿದ ಒಪ್ಪಿಗೆ ದಾಖಲೆಯ ಪ್ರಕಾರ ಅದೇ ದಿನ ಹುವಾಂಗ್ ಅವರಿಗೆ ಹಲ್ಲುಗಳನ್ನು ಸಹ ಅಳವಡಿಸಲಾಯಿತು. ಹಲ್ಲಿನ ಪ್ರಕ್ರಿಯೆ ಮತ್ತು ಹುವಾಂಗ್ ಸಾವಿನ ನಡುವೆ 13 ದಿನಗಳ ಅಂತರವಿರುವುದರಿಂದ ಪ್ರಕರಣವನ್ನು ಇನ್ನೂ ಆಳವಾಗಿ ತನಿಖೆ ಮಾಡಲಾಗುತ್ತಿದೆ ಎಂದು ಅಲ್ಲಿನ ಆರೋಗ್ಯ ಇಲಾಖೆ ತಿಳಿಸಿದೆ.