ಹುಬ್ಬಳ್ಳಿ: ಯುಗ ಎಂದರೆ ಹೊಸ, ಆದಿ ಎಂದರೆ ಆರಂಭ. ಒಂದು ಹೊಸ ಪರ್ವದ ಆರಂಭ ಎಂದೂ ಈ ಹಬ್ಬವನ್ನು ಕರೆಯಲಾಗುತ್ತದೆ. ಸಂವತ್ಸರದಿ ಯುಗಾದಿ ಎಂದು ಕರೆಯಲ್ಪಡುವ ಈ ಹಬ್ಬ ರೈತರ ಪಾಲಿಗೂ ವಿಶೇಷ ದಿನ. ಹೊಸ ಬೆಳೆಯ ಖುಷಿಯಲ್ಲಿಯೂ ಈ ಹಬ್ಬದ ಸಂಭ್ರಮ ರೈತಾಪಿ ವರ್ಗದಲ್ಲಿ ಇಮ್ಮಡಿಯಾಗಿರುತ್ತದೆ.
ಹಿಂದೂ ಕ್ಯಾಲೆಂಡರ್ ಪ್ರಕಾರ ಚೈತ್ರ ಮಾಸದ ಮೊದಲ ದಿನದಂದು ಯುಗಾದಿ ಆಚರಿಸಲಾಗುತ್ತದೆ. ಈ ಯುಗಾದಿ ಹಬ್ಬದಂದು ಸೂರ್ಯೋದಯದ ನಂತರ ಪ್ರಾರಂಭವಾಗುವ ದಿನವನ್ನು ಭಾರತದ ಮೊದಲ ದಿನವೆಂದು ಪರಿಗಣಿಸಲಾಗುತ್ತದೆ.ಯುಗಾದಿ ಹಬ್ಬವು ವಸಂತ ಋತುವಿನ ವಿಷುವತ್ ಸಂಕ್ರಾಂತಿಯ ನಂತರ ಅಮಾವಾಸ್ಯೆಯ ದಿನದಂದು ಪ್ರಾರಂಭವಾಗುತ್ತದೆ.
ಈ ಹಿನ್ನೆಲೆಯಲ್ಲಿ ಹುಬ್ಬಳ್ಳಿ ಧಾರವಾಡ ಸೇರಿದಂತೆ ತಾಲೂಕಿನ ಗ್ರಾಮಗಳಲ್ಲಿ ರೈತರು ಟ್ರ್ಯಾಕ್ಟರ್ ಮತ್ತು ಎತ್ತುಗಳ ತೆಗೆದುಕೊಂಡು ಹೋಗಿ ಸೂರ್ಯ ಉದಯವಾಗುವ ಸಮಯದಲ್ಲಿ ಭೂತಾಯಿಗೆ ನಮಸ್ಕರಿಸಿ ಹೊಲ ಹುಳುವುದು ವಾಡಿಕೆ ಇರುತ್ತದೆ ಅದರಂತೆ ರೈತರು ತಮ್ಮ ತಮ್ಮ ಜಮೀನುಗಳಿಗೆ ಹೋಗಿ ಉಳಿಮೆ ಮಾಡುತ್ತಾನೆ.
ರೈತರಿಗೆ ಇವತ್ತಿನಿಂದ ಹೊಸ ವರ್ಷದ ಯುಗಾದಿ ದಿನ ಪಾಡ್ಯದ ದಿನದಂದು ಸಾಂಕೇತಿಕವಾಗಿ ಉಳುಮೆ ಮಾಡಿ ಕೃಷಿ ಚಟುವಟಿಕೆ ಆರಂಭಕ್ಕೆ ಮುನ್ನುಡಿ ಬರೆಯುತ್ತಾರೆ.