ಕೆಲ ಸಮಯದ ಹಿಂದೆ ಶಾಂತವಾಗಿದ್ದ ವಿಯೆಟ್ನಾ ಹಠಾತ್ ಪ್ರವಾಹಕ್ಕೆ ನಲುಗಿ ಹೋಗಿದೆ. ಮಳೆ ಗಾಳಿ ಅಬ್ಬರಕ್ಕೆ ಜನ ಜೀವನ ಅಸ್ತವ್ಯಸ್ಥವಾಗಿದ್ದು 226ಜನ ಮೃತಪಟ್ಟಿದ್ದಾರೆ. ಅಲ್ಲದೆ ಘಟನೆಯಲ್ಲಿ 134ಕ್ಕೂ ಅಧಿಕ ಮಂದಿ ನಾಪತ್ತೆಯಾಗಿದ್ದು ಅವರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ.
ಗಂಟೆಗೆ 149 ಕಿಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು 1,40,000ಕ್ಕೂ ಹೆಚ್ಚು ಮನೆಗಳು ನಾಶವಾಗಿವೆ. ಚಂಡಮಾರುತ ಉತ್ತರ ವಿಯೆಟ್ನಾಂವನ್ನ ಇನ್ನಿಲ್ಲದಂತೆ ಕಾಡುತ್ತಿದೆ. ಇದು ಈ ವರ್ಷ ಏಷ್ಯಾದ ಅತ್ಯಂತ ಶಕ್ತಿಶಾಲಿ ಚಂಡಮಾರುತ ಎಂದು ಹೇಳಲಾಗುತ್ತಿದೆ. ಉತ್ತರ ವಿಯೆಟ್ನಾಂ ಹಠಾತ್ ಪ್ರವಾಹ ಮತ್ತು ಭೂಕುಸಿತದಿಂದ ತತ್ತರಿಸಿದ್ದು ಜನ ಮನೆ, ಮಠ, ಪ್ರಾಣ ಕಳೆದುಕೊಂಡು ಬೀದಿಗೆ ಬಂದಿದ್ದಾರೆ.
ನಿಂತಲ್ಲೆ ನೆಲ ಕುಸಿಯುತ್ತಿದ್ದು ಸೇನಾ ಸಿಬ್ಬಂದಿ ರಕ್ಷಣೆ ಕಾರ್ಯದಲ್ಲಿ ತೊಡಗಿದ್ದು ರಕ್ಷಣೆಗೆ ಹರಸಾಹಸ ಪಡುತ್ತಿದೆ. ವಿಯೇಟ್ನಾಂ ರಾಜಧಾನಿ ಹನೋಯಿ ನಗರದಲ್ಲಿ ಎಲ್ಲಿ ನೋಡಿದರು ಮಳೆ ನೀರು. ಅಬ್ಬರಿಸಿದ ಮಳೆಯಿಂದಾಗಿ ಅಕ್ಷರಶಃ ನರಕ ಸದೃಶ್ಯವೇ ಸೃಷ್ಟಿಸ್ತಿದೆ. ಬೀದಿಗಳು ನದಿಗಳಾಗಿ ರೂಪಾಂತರಗೊಂಡಿವೆ. ಅದೇ ರಸ್ತೆ ಮೇಲೆ ದೋಣಿಗಳ ಮೂಲಕ ಸಂಚರಿಸುವ ಸ್ಥಿತಿ ನಿರ್ಮಾಣ ಆಗಿದೆ.