ಭಾರತದ ಪ್ರತಿಷ್ಠಿತ ಉದ್ಯಮಿ ಗೌತಮ್ ಅದಾನಿ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಅದಾನಿ ಗ್ರೂಪ್ಗೆ ಸೇರಿದ 6 ಸ್ವಿಸ್ ಬ್ಯಾಂಕ್ ಅಕೌಂಟ್ಗಳನ್ನು ಸೀಜ್ ಮಾಡಲಾಗಿದೆ ಎಂದು ಅಮೆರಿಕದ ಶಾರ್ಟ್ ಸೆಲ್ಲಿಂಗ್ ಹಿಂಡೆನ್ಬರ್ಗ್ ಸಂಸ್ಥೆ ಆರೋಪ ಮಾಡಿದ್ದು ಈ ಆರೋಪಕ್ಕೆ ಪ್ರತಿಕ್ರಿಯಿಸಿರೋ ಅದಾನಿ ಗ್ರೂಪ್ ಇದೆಲ್ಲ ಸುಳ್ಳು ಎಂದಿದೆ.
ಅದಾನಿ ಗ್ರೂಪ್ಗೆ ಸಂಬಂಧಿಸಿದ ಸ್ವಿಸ್ ಬ್ಯಾಂಕ್ನಲ್ಲಿನ 6 ಅಕೌಂಟ್ಗಳಲ್ಲಿ 310 ಮಿಲಿಯನ್ ಡಾಲರ್ ಅಂದರೆ 26,017,353,260 ರೂಪಾಯಿ ಹಣವನ್ನು ಸೀಜ್ ಮಾಡಲಾಗಿದೆ ಎಂದು ಮಾಹಿತಿ ಇದೆ. 2021ರ ಮನಿ ಲಾಂಡರಿಂಗ್ ಹಾಗೂ ಸೆಕ್ಯುರಿಟೀಸ್ ಫೋರ್ಜರಿ ಆರೋಪಗಳ ತನಿಖೆಗೆ ಸಂಬಂಧಿಸಿದಂತೆ ಅಕೌಂಟ್ಗಳನ್ನು ಸ್ವಿಸ್ ಅಧಿಕಾರಿಗಳು ಸೀಜ್ ಮಾಡಿದ್ದಾರೆ ಹಿಂಡೆನ್ಬರ್ಗ್ ಸಂಸ್ಥೆ ಆರೋಪ ಮಾಡಿದೆ. ಇದರಿಂದ ಅದಾನಿ ಗ್ರೂಪ್ಗೆ ಮತ್ತೊಂದು ಸಂಕಷ್ಟ ಎದುರಾಗಿದೆ.
ಅದಾನಿ ಅವರ ಕೇಸ್ ಅನ್ನು ಜಿನೀವಾ ಪಬ್ಲಿಕ್ ಪ್ರಾಸಿಕ್ಯೂಟರ್ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ. ಇದರ ಆಧಾರದ ಮೇಲೆ ಹಾಗೂ ಸ್ವಿಸ್ ಕ್ರಿಮಿನಲ್ ನ್ಯಾಯಾಲಯದ ದಾಖಲೆಗಳನ್ನ ಉಲ್ಲೇಖಿಸಿ ಹಿಂಡೆನ್ಬರ್ಗ್ ಸಂಸ್ಥೆ ಆರೋಪಿಸಿದೆ. ಇನ್ನು ಆರು ಸ್ವಿಸ್ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸುತ್ತಿದ್ದಂತೆ ಸ್ವಿಟ್ಜರ್ಲೆಂಡ್ನ ಅಟಾರ್ನಿ ಜನರಲ್ ಕಚೇರಿ ಕೂಡ ತನಿಖೆಗೆ ಮುಂದಾಗಿದೆ.
ಆರೋಪವನ್ನು ತಳ್ಳಿ ಹಾಕಿರುವ ಅದಾನಿ ಗ್ರೂಪ್ ನಮ್ಮ ವಿರುದ್ಧ ಪಿತೂರಿ ನಡೆಯುತ್ತಿದೆ. ನಾವು ಸ್ವಿಸ್ ಬ್ಯಾಂಕ್ನಲ್ಲಿ ಯಾವುದೇ ಖಾತೆಯನ್ನು ಹೊಂದಿಲ್ಲ. ಇದೊಂದು ಷಡ್ಯಂತ್ರ ಎಂದಿದೆ.