ತಮಿಳು ನಟ ದಳಪತಿ ವಿಜಯ್ ಸಿನಿಮಾ ರಂಗಕ್ಕೆ ಗುಡ್ ಬಾಯ್ ಹೇಳಿ ರಾಜಕೀಯಕ್ಕೆ ಎಂಟ್ರಿಕೊಡ್ತಿದ್ದಾರೆ. ಈ ಹಿನ್ನೆಲೆಯಲ್ಲಿ ವಿಜಯ್ ಗ್ರೀನ್ ಸಿಗ್ನಲ್ ನೀಡಿರುವ ಕೊನೆಯ ಸಿನಿಮಾ ‘Thalapathy 69’ ಚಿತ್ರಕ್ಕೆ ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ಕನ್ನಡದ ಖ್ಯಾತ ನಿರ್ಮಾಣ ಸಂಸ್ಥೆಯಾದ ಕೆವಿಎನ್ ಪ್ರೊಡಕ್ಷನ್ ಸಂಸ್ಥೆ ಬಂಡವಾಳ ಹೂಡುತ್ತಿದೆ.
ಯಶ್ ನಟನೆಯ ‘ಟಾಕ್ಸಿಕ್’ ಚಿತ್ರಕ್ಕೆ ಕನ್ನಡದ ‘ಕೆವಿಎನ್ ಪ್ರೊಡಕ್ಷನ್ಸ್’ ಸಂಸ್ಥೆಯ ವೆಂಕಟ್ ಅವರು ಬಂಡವಾಳ ಹೂಡತ್ತಿದ್ದಾರೆ. ಇದೇ ನಿರ್ಮಾಣ ಸಂಸ್ಥೆ ಮೂಲಕ ‘Thalapathy 69’ ಚಿತ್ರ ಸಿದ್ಧವಾಗಲಿದೆ. ಈ ಚಿತ್ರದ ಬಗ್ಗೆ ಇಂದು ಸಂಜೆ 5 ಗಂಟೆಗೆ ಅಪ್ಡೇಟ್ ಕೊಡೋದಾಗಿ ಕೆವಿಎನ್ ಸಂಸ್ಥೆ ತಿಳಿಸಿದೆ.
ದಳಪತಿ ವಿಜಯ್ ನಟನೆಯ ಈ ಹಿಂದಿನ ಸಿನಿಮಾಗಳ ದೃಶ್ಯವನ್ನು ಕಟ್ ಮಾಡಿ ಸೇರಿಸಿ ಟೀಸರ್ ಮಾಡಲಾಗಿದೆ. ‘ನಮ್ಮ ಮೊದಲ ತಮಿಳು ಸಿನಿಮಾ’ ಎಂದು ಕೆವಿಎನ್ ಹೇಳಿದೆ. ಸಂಜೆ ವೇಳೆಗೆ ಸಿನಿಮಾದ ಟೈಟಲ್, ಈ ಚಿತ್ರವನ್ನು ಯಾರು ನಿರ್ದೇಶನ ಮಾಡುತ್ತಾರೆ ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ಸಿಗಲಿದೆ.
ಕೆವಿಎನ್ ಪ್ರೊಡಕ್ಷನ್ ಏಕಕಾಲದಲ್ಲಿ ಹಲವು ಬಿಗ್ ಬಜೆಟ್ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಸದ್ಯ ಈ ಸಂಸ್ಥೆ ‘ಕೆಡಿ-ದಿ ಡೆವಿಲ್’, ‘ಟಾಕ್ಸಿಕ್’ ಸಿನಿಮಾಗಳನ್ನು ನಿರ್ಮಾಣ ಮಾಡುತ್ತಿದೆ. ಈಗ ಈ ಸಾಲಿಗೆ ದಳಪತಿ ವಿಜಯ್ ಅವರ 69ನೇ ಸಿನಿಮಾ ಕೂಡ ಸೇರ್ಪಡೆ ಆಗಿದೆ.
ದಳಪತಿ ವಿಜಯ್ ಅವರು ಈಗಾಗಲೇ ಪಕ್ಷ ಘೋಷಣೆ ಮಾಡಿದ್ದಾರೆ. 2026ರ ತಮಿಳುನಾಡು ಚುನಾವಣೆಗೆ ಅವರು ಸ್ಪರ್ಧೆ ಮಾಡಲಿದ್ದಾರೆ. ಅವರು ಪಕ್ಷ ಬೆಳೆಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಈಗ ಕೆವಿಎನ್ ಜೊತೆ ಮಾಡುತ್ತಿರುವುದು ಅವರ ವೃತ್ತಿ ಜೀವನದ ಕೊನೆಯ ಸಿನಿಮಾ ಆಗಲಿದೆ ಎಂದು ಹೇಳಲಾಗುತ್ತಿದೆ.