ರೇಣುಕಾಸ್ವಾಮಿ ಕೊಲೆ ಕೇಸ್ ನಲ್ಲಿ ಜೈಲು ಸೇರಿರುವ ನಟ ದರ್ಶನ್ ಗೆ ನಿತ್ಯ ನರಕವಾಗಿದೆ. ಬಳ್ಳಾರಿ ಜೈಲಿಗೆ ಹೊಂದಿಕೊಳ್ಳಲು ಸಾಧ್ಯವಾಗದೆ ಪರಿತಪಿಸುತ್ತಿದ್ದಾರೆ. ಚಾರ್ಜ್ಶೀಟ್ ಸಲ್ಲಿಕೆ ಆದ ಬಳಿಕ ದರ್ಶನ್ ಸ್ಥಿತಿ ಮತ್ತಷ್ಟು ಕಷ್ಟ ಆಗಿದೆ. ಜಾಮೀನು ಪಡೆಯುವ ಪ್ರಯತ್ನವೂ ಕೈಗೂಡುತ್ತಿಲ್ಲ. ಇದು ಕೊಲೆ ಆರೋಪ ಆದ್ದರಿಂದ ಅಷ್ಟು ಸುಲಭಕ್ಕೆ ಜಾಮೀನು ಸಿಗುವುದಿಲ್ಲ. ಅಲ್ಲದೇ, ಈಗ ಅವರು ನ್ಯಾಯಾಂಗ ಬಂಧನದ ಅವಧಿ ಕೂಡ ವಿಸ್ತರಣೆ ಆಗಿರುವುದರಿಂದ ಬಳ್ಳಾರಿ ಜೈಲಿನಲ್ಲಿ ಮಾಂಸದೂಟ ನೀಡಿದರು ಸೇವಿಸದೆ ದರ್ಶನ್ ಮಂಕಾಗಿದ್ದಾರೆ.
ದರ್ಶನ್ ಎಂಡ್ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನ ಮತ್ತೆ ವಿಸ್ತರಣೆ ಮಾಡಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ಆರೋಪಿಗಳು ಕೋರ್ಟ್ಗೆ ಹಾಜರಾಗಿದ್ದು, ಸೆಪ್ಟೆಂಬರ್ 17ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ನ್ಯಾಯಾಧೀಶರು ಆದೇಶ ಹೊರಡಿಸಿದ್ದಾರೆ. ನ್ಯಾಯಾಂಗ ಬಂಧನದ ಅವಧಿ ವಿಸ್ತರಣೆ ಆದ ಹಿನ್ನೆಲೆಯನ್ನು ದರ್ಶನ್ ಮತ್ತಷ್ಟು ಚಿಂತಾಕ್ರಾಂತರಾಗಿದ್ದಾರೆ.
ಜೈಲಿನ ಮೆನು ಪ್ರಕಾರ ಇಂದು ದರ್ಶನ್ಗೆ ಮಟನ್ ಊಟ ನೀಡಲಾಯಿತು. ಜಾಮೀನು ಸಿಗದೇ ಟೆನ್ಷನ್ ಆಗಿರುವ ದರ್ಶನ್ ಮಟನ್ ಊಟ ಸೇವಿಸಿಲ್ಲ. ಜಾಮೀನು ಅರ್ಜಿ ಸಲ್ಲಿಕೆ ವಿಚಾರವಾಗಿ ವಕೀಲರ ಜೊತೆ ಅವರು ಚರ್ಚೆ ಮಾಡಿದ್ದಾರೆ ಎನ್ನಲಾಗುತ್ತಿದೆ.
ಹೈಸೆಕ್ಯೂರಿಟಿ ಸೆಲ್ನಲ್ಲಿ ದರ್ಶನ್ ಚಡಪಡಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್ ಮುಗಿಯುತ್ತಿದ್ದಂತೆಯೇ ಸೆಲ್ನಲ್ಲಿ ಅತ್ತಿಂದಿತ್ತ ದರ್ಶನ್ ಓಡಾಡಿದ್ದಾರೆ. ಜೈಲಿನಿಂದ ಹೊರ ಬರುವ ಮತ್ತಷ್ಟು ದಾರಿಗಳನ್ನು ದರ್ಶನ್ ಹುಡುಕುತ್ತಿದ್ದಾರೆ.