ಪರಪ್ಪನ ಅಗ್ರಹಾರ ಜೈಲಿನಲ್ಲಿ ಅರಾಮಾಗಿದ್ದ ದರ್ಶನ್ ಗೆ ಬಳ್ಳಾರಿ ಜೈಲಿನ ವಾಸ ನಿತ್ಯ ನರಕವಾಗಿದೆ. ಸರಿಯಾಗಿ ಊಟ ತಿಂಡಿ ಸೇರದೆ, ನಿದ್ದೆ ಬರದೆ ದರ್ಶನ್ ಪರಿತಪಿಸುತ್ತಿದ್ದಾರೆ. ಇದರಿಂದ ಫುಲ್ ಟೆನ್ಷನ್ ಆದ ದಾಸ ಬಳ್ಳಾರಿ ಸೆಲ್ನಲ್ಲಿ ಜೈಲು ಸಿಬ್ಬಂದಿ ವಿರುದ್ಧವೇ ಗರಂ ಆಗಿದ್ದಾರೆ.
ದರ್ಶನ್ ರನ್ನು ಫುಲ್ ಹೈ ಸೆಕ್ಯೂರಿಟಿ ಸೆಲ್ ನಲ್ಲಿ ಇಡಲಾಗಿದ್ದು ಅಕ್ಕ ಪಕ್ಕದ ಸೆಲ್ ಗಳು ಖಾಲಿಯಾಗಿವೆ. ಇದರಿಂದಾಗಿ ದರ್ಶನ್ ಯಾರ ಜೊತೆಯೂ ಬೆರೆಯಲೂ ಸಾಧ್ಯವಾಗುತ್ತಿಲ್ಲ. ಅಲ್ಲದೆ ದರ್ಶನ್ ಟಿ.ವಿಗಾಗಿ ಪರದಾಡುವಂತಹ ಸ್ಥಿತಿ ಬಂದಿದೆ. ಆದರೆ ಜೈಲು ಸಿಬ್ಬಂದಿ ತಂದುಕೊಟ್ಟ ಟಿ.ವಿ ಕೂಡ ಸರಿಯಾಗಿ ವರ್ಕ್ ಆಗ್ತಿಲ್ಲ. ಹೀಗಾಗಿ ಫುಲ್ ಟೆನ್ಷನ್ ಆಗಿರೋ ದರ್ಶನ್, ಟಿ.ವಿ ವಿಚಾರಕ್ಕೆ ಜೈಲು ಸಿಬ್ಬಂದಿ ಜೊತೆ ಕಿರಿಕ್ ಮಾಡ್ಕೊಂಡಿದ್ದಾರೆ ಎನ್ನಲಾಗುತ್ತಿದೆ.
ನಾನು ಆರೋಪಿ, ಅಪರಾಧಿಯಲ್ಲ ಎಂದಿರುವ ದರ್ಶನ್ ಅವರು ವಿಚಾರಣಾಧೀನ ಕೈದಿಗಳಿಗೆ ಟಿ.ವಿ ಕೊಡುವಂತೆ ಜೈಲು ನಿಯಮವೇ ಇದೆ. ಆದ್ರೂ ಕೊಡ್ತಿಲ್ಲ ಯಾಕೆ. ಅದಕ್ಕೂ ಕೋರ್ಟ್ಗೆ ಅಪ್ಲಿಕೇಷನ್ ಹಾಕ್ಬೇಕಾ ಅಂತ ದರ್ಶನ್ ಫುಲ್ ಗರಂ ಆಗಿದ್ದಾರಂತೆ. ಕೊಡೋದಿದ್ದರೆ ಒಳ್ಳೆ ಟಿ.ವಿ ಕೊಡಿ. ನಾನಿನ್ನೂ ಆರೋಪಿ ಅಪರಾಧಿ ಅಲ್ಲ. ಇಷ್ಟೊಂದು ಸ್ಟ್ರಿಕ್ಡ್ ರೂಲ್ಸ್ ಮಾಡ್ಬೇಡಿ ಎಂದು ದರ್ಶನ್ ಸಿಟ್ಟಾಗಿದ್ದಾರಂತೆ. ಜೈಲು ಅಧೀಕ್ಷಕಿ ಜೊತೆ ಮಾತನಾಡಬೇಕು ಎಂದು ಆರೋಪಿ ದರ್ಶನ್ ಕೇಳಿದ್ದಾರೆ ಎಂದು ಜೈಲು ಮೂಲಗಳು ತಿಳಿಸಿವೆ.
ಡಿ ಗ್ಯಾಂಗ್ ಸದಸ್ಯರ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನಲೆ ಎಲ್ಲಾ ಆರೋಪಿಗಳನ್ನ ವಿಡಿಯೋ ಕಾನ್ಫರೆನ್ಸ್ ಮೂಲಕ ಕೋರ್ಟ್ಗೆ ಹಾಜರು ಪಡಿಸಲಾಗಿತ್ತು. ವಿಚಾರಣೆ ನಡೆಸಿದ 24ನೇ ಎಸಿಎಂಎಂ ಕೋರ್ಟ್ ಸೆಪ್ಟೆಂಬರ್ 17ರವರೆಗೆ ಮತ್ತೆ ವಿಸ್ತರಣೆ ಮಾಡಿ ಆದೇಶ ನೀಡಿದೆ. ಕೇಸ್ಗೆ ಸಂಬಂಧಪಟ್ಟ ಟೆಕ್ನಿಕಲ್ ಎವಿಡೆನ್ಸ್ಗಳನ್ನ ಮುಂದಿನ ವಾರ ಸಲ್ಲಿಕೆ ಮಾಡ್ತೀವಿ ಅಂತಾ ಎಸ್ಪಿಪಿ ಪರ ವಕೀಲರು ತಿಳಿಸಿದ್ದಾರೆ.