ಮುಂದಿನ 2025ರಿಂದ ಚೀನಾ ಸರ್ಕಾರ ನಿವೃತ್ತಿಯ ವಯಸ್ಸನ್ನು ಇನ್ನೂ 3 ವರ್ಷಗಳ ಕಾಲ ವಿಸ್ತರಿಸುವ ಪ್ರಸ್ತಾವನೆಯನ್ನು ಮುಂದಿಟ್ಟಿದೆ. ಆದರೆ ಈ ಪಸ್ತಾವನೆಗೆ ಯುವ ಉದ್ಯೋಗಿಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಚೀನಾದಲ್ಲಿ ಪುರುಷ ಕಾರ್ಮಿಕರ ಶಾಸನಬದ್ಧ ನಿವೃತ್ತಿ ವಯಸ್ಸನ್ನು 60 ರಿಂದ 63 ಕ್ಕೆ ಏರಿಸಲಾಗುವುದು ಎಂದು ಅಧಿಕಾರಿಗಳು ಘೋಷಿಸಿದ್ದಾರೆ. ಮಹಿಳಾ ಕಾರ್ಮಿಕರಿಗೆ ಇದು 50 ಅಥವಾ 55 ವರ್ಷದಿಂದ 55 ಮತ್ತು 58 ವರ್ಷಗಳಿಗೆ ಏರಿಕೆಯಾಗುವ ಸಾಧ್ಯತೆ ಇದೆ. ನಿವೃತ್ತಿ ವಯಸ್ಸನ್ನು ಜನವರಿ 1, 2025 ರಿಂದ 15 ವರ್ಷಗಳಲ್ಲಿ ಕ್ರಮೇಣ ಹೆಚ್ಚಿಸಲಾಗುವುದು ಎಂದು ರಾಜ್ಯ ಮಾಧ್ಯಮ ತಿಳಿಸಿದೆ.
ಚೀನಾದ ಯುವ ನಿರುದ್ಯೋಗವು ಜುಲೈನಲ್ಲಿ 17.1 ಪ್ರತಿಶತದಷ್ಟಿತ್ತು. ಪ್ರಸ್ತುತ ಉದ್ಯೋಗ ಮಾರುಕಟ್ಟೆಯ ಬಗ್ಗೆಯೂ ಕ್ಸಿನ್ ಜಿ ಆತಂಕ ವ್ಯಕ್ತಪಡಿಸಿದ್ದಾರೆ ಮತ್ತು ನಿವೃತ್ತಿಯ ವಯಸ್ಸಿನ ವಿಸ್ತರಣೆ ಮಕ್ಕಳನ್ನು ಹೊಂದುವ ಬಗ್ಗೆ ಜನರು ಮರುಪರಿಶೀಲಿಸುವಂತೆ ಮಾಡುತ್ತದೆ, ಚೀನಾದ ವಯಸ್ಸಾದ ಜನಸಂಖ್ಯೆಯ ಸಮಸ್ಯೆಯನ್ನು ಉಲ್ಬಣಗೊಳಿಸುತ್ತದೆ ಎಂದು ಸಾಕಷ್ಟು ಮಂದಿ ಆಕ್ರೋಶ ಹೊರ ಹಾಕಿದ್ದಾರೆ.
ಚೀನಾ ವೇಗವಾಗಿ ವಯಸ್ಸಾದ ಸಮಾಜವನ್ನು ಎದುರಿಸುತ್ತಿದೆ: ಚೀನಾದ ಜನಸಂಖ್ಯೆ 2023 ರಲ್ಲಿ ಸತತವಾಗಿ ಎರಡನೇ ವರ್ಷಕ್ಕೆ ಕುಸಿದಿದೆ. ಸೂಕ್ತ ಕ್ರಮವನ್ನು ತೆಗೆದುಕೊಳ್ಳದಿದ್ದರೆ ಆರ್ಥಿಕತೆ, ಆರೋಗ್ಯ ಮತ್ತು ಸಾಮಾಜಿಕ ಕಲ್ಯಾಣ ವ್ಯವಸ್ಥೆಗಳ ಮೇಲೆ ತೀವ್ರವಾದ ಪರಿಣಾಮ ಬೀರುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.