ನ್ಯಾಯಾಲಯದಲ್ಲಿ ಕೆಲಸ ಕೊಡಿಸೋದಾಗಿ ವಂಚನೆ ಆರೋಪದಡಿ ಜಡ್ಜ್ ಸಹಿಯನ್ನೇ ನಕಲು ಮಾಡ್ತಿದ್ದವನ ವಿರುದ್ಧ FIR ದಾಖಲು ಮಾಡಲಾಗಿದೆ
ಸಿದ್ದಲಿಂಗಯ್ಯ ಹಿರೇಮಠ ಎಂಬವನ ವಿರುದ್ಧ ವಂಚನೆ ಆರೋಪ ಮಾಡಲಾಗಿದೆ. ನ್ಯಾಯಾಲಯದಲ್ಲಿ ಪ್ರೋಸೆಸ್ ಸರ್ವರ್, ಜವಾನ ಹುದ್ದೆ ಖಾಲಿ ಇದೆ ಎಂದು ಜನರಿಗೆ ನಂಬಿಸುತ್ತಿದ್ದ. ಅಲ್ಲದೇ ಉದ್ಯೋಗ ಕೊಡಿಸುತ್ತೇನೆ ಎಂದು ಪ್ರತಿಯೊಬ್ಬರ ಬಳಿ 7 ಲಕ್ಷ ರೂ. ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಆರೋಪಿ ಹಣ ಪಡೆದವರಿಗೆ ನಕಲಿ ನೇಮಕಾತಿ ಪತ್ರ ಕೊಟ್ಟಿದ್ದಾನೆ. ಅಲ್ಲದೇ ನೇಮಕಾತಿ ಪತ್ರದಲ್ಲಿ ನ್ಯಾಯಮೂರ್ತಿಗಳ ಸಹಿಯನ್ನು ನಕಲಿ ಮಾಡಿದ್ದಾನೆ. ರಾಜ್ಯದ ಹಲವೆಡೆ ಇಂತಹ ಕೃತ್ಯ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.