ಗದಗ:- ನಗರದ ಕೆ ಸಿ ರಾಣಿ ರಸ್ತೆಯ ಮಸಾರಿ ಏರಿಯಾದ ಯುವಕರೆಲ್ಲಾ ಸೇರಿ 30 ವರ್ಷಗಳ ಹಿಂದೆ ಸಮಾಜಕ್ಕೆ ಎಲ್ಲರೂ ಆದರ್ಶವಾಗಿದ್ದು ಆದರ್ಶ ಏರಿಯಾವನ್ನ ಮಾಡೋ ಇಚ್ಛೆಯೊಂದಿಗೆ ಆದರ್ಶ ಗಜಾನನ ಸಮಿತಿಯನ್ನ ಮಾಡಿ ಗಣಪತಿ ಕೂರಿಸೋ ಸಂಕಲ್ಪ ಮಾಡಿದ್ರು.
ಅದರಂತೆ ಪ್ರತಿವರ್ಷ ಆಯಾ ವರ್ಷಗಳಲ್ಲಿ ನಡೆದ ಘಟನಾವಳಿಗಳನ್ನ ಆಧರಿಸಿ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡ್ತಾ ಬಂದಿದ್ದಾರೆ. ಇದೀಗ ಅಯೋಧ್ಯೆ ಬಾಲರಾಮನ ಹೋಲುವ ಥೇಟ್ ಬಾಲ ಗಣಪನ ಗಣೇಶ ಪ್ರತಿಷ್ಠಾಪಿಸಿದ್ದು ಈ ಬಾರಿ 31 ನೇ ವರ್ಷದ ಗಣಪತಿ ಕೂರಿಸೋ ಮೂಲಕ ತಮ್ಮ ಗೆಳೆಯರ ಬಳಗದ ಪರಂಪರೆ ಮುಂದುವರೆಸುತ್ತಿದ್ದಾರೆ.
ಗಣೇಶ ಮೂರ್ತಿಯನ್ನ ಇವರು ಕೊಂಡುಕೊಳ್ಳದೇ ಇರೋದು ವಿಶೇಷ. ಆದರ್ಶ ಗಜಾನನ ಸಮಿತಿಯವರೇ ಆದ ವಿಜಯ್ ಸೋಮನಕಟ್ಟಿ ಅವರು 28 ವರ್ಷಗಳ ಕಾಲ ಸೇವೆಯ ರೂಪದಲ್ಲಿ ಗಣೇಶ ವಿಗ್ರಹ ಮಾಡುತ್ತಾ ಬಂದಿದ್ರು, ಇದೀಗ ವಿರೇಶ ಹೊಸಮಠ 3 ವರ್ಷಗಳಿಂದ ಗಣೇಶ ವಿಗ್ರಹ ಮಾಡುತ್ತಿದ್ದಾರೆ. ಆದರ್ಶ ಗಣೇಶ ಬಿಟ್ಟು ಬೇರೆ ಯಾವುದೇ ಗಣೇಶನ ವಿಗ್ರಹ ಇವರು ಮಾಡೋದಿಲ್ಲ ಯಾವುದೇ ಫಲಾಪೇಕ್ಷೆ ಇಲ್ಲದೇ ಪರಿಸರ ಸ್ನೇಹಿ ಗಣೇಶನ ವಿಗ್ರಹ ಮಾಡೋ ಸೇವೆ ಮಾಡೋದು ವಿಶೇಷ.
ಒಂಭತ್ತು ದಿನಗಳ ಕಾಲ ಗಣೇಶ ಪ್ರತಿಷ್ಠಾಪನೆಯನ್ನ ಮಾಡೋ ಆದರ್ಶ ಗಜಾನನ ಸಮಿತಿಯ ಸದಸ್ಯರು ಒಂಭತ್ತು ದಿನಗಳ ಕಾಲ ಪ್ರತಿನಿತ್ಯ ಬೆಳಿಗ್ಗೆ ಮತ್ತು ಸಂಜೆ ವಿಶೇಷ ಪೂಜೆ ನೆರವೇರಿಸುತ್ತಾರೆ. ಏಳನೇ ದಿನ ಮಹಾ ಅನ್ನಸಂತರ್ಪಣೆಯನ್ನ ಏರ್ಪಡಿಸಿ ಸಾವಿರಾರು ಜನರಿಗೆ ಭೋಜನದ ವ್ಯವಸ್ಥೆ ಮಾಡುತ್ತಾರೆ. ಏರಿಯಾದ ಹಿರಿಯರು, ಯುವಕರು, ಯುವತಿಯರು, ಮಹಿಳೆಯರು ಈ ಗಣೇಶೋತ್ಸವದಲ್ಲಿ ಪಾಲ್ಗೊಂಡು
ತಮ್ಮ ಭಕ್ತಿಸೇವೆಯನ್ನ ಮಾಡ್ತಾರೆ.
ಒಂಭತ್ತನೇ ದಿನ ವಿವಿಧ ವಾದ್ಯ ಮೇಳಗಳೊಂದಿಗೆ ಗಣೇಶನ ವಿಸರ್ಜನೆ ನೆರವೇರಿಸುತ್ತಾರೆ. ಆ ಮೂಲಕ ವಿಘ್ನ ನಿವಾರಕ ವಿಘ್ನೇಶ್ವರನ ಕೃಪೆಗೆ ಪಾತ್ರರಾಗ್ತಾರೆ.