ಬಾಲಿವುಡ್ ಚಿತ್ರರಂಗದ ಖ್ಯಾತ ನಟ ಗೋವಿಂದ್ ಇಂದಿಗೂ ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಗೋವಿಂದ್ ಗೆ ಅದ್ಯಾವ ಮಟ್ಟಿಗೆ ಅಭಿಮಾನಿಳು ಇದ್ದರು ಅನ್ನೋದನ್ನು ಗೋವಿಂದ್ ಪತ್ನಿ ಸುನೀತಾ ಹೇಳಿದ್ದಾರೆ. ಗೋವಿಂದ್ ಮೇಲಿನ ಪ್ರೀತಿಯಿಂದ ಮಿನಿಸ್ಟರ್ ಮಗಳು 20 ದಿನಗಳ ಕಾಲ ತಮ್ಮ ಮನೆಯಲ್ಲಿ ಇದ್ದರು ಎಂಬುದನ್ನು ಸುನೀತಾ ರಿವೀಲ್ ಮಾಡಿದ್ದಾರೆ.
ನಟ ಗೋವಿಂದ ಅವರಿಗೆ ಮಹಿಳಾ ಅಭಿಮಾನಿಗಳು ಹೆಚ್ಚು. ಹೀಗೆಯೇ ಅಭಿಮಾನಿಯೊಬ್ಬರು ನಟ ಗೋವಿಂದ ಮನೆಗೆ ಬಂದು ನಾನು ಮನೆಗೆಲಸ ಮಾಡುತ್ತೇನೆ ಎಂದು ಬಂದು ಅವರ ಮನೆ ಸೇರಿಕೊಳ್ಳುತ್ತಾರೆ. ಆ ಯುವತಿಯನ್ನು ನೋಡಿದ ಸುನಿತಾ ಅವರಿಗೆ ಏನೋ ಒಂದು ಅನುಮಾನ ಬರುತ್ತದೆ. ಹುಡುಗಿ ನೋಡಲು ಒಳ್ಳೆಯ ಮನೆತನದಿಂದ ಬಂದಂತಿದೆ. ಮನೆಗೆಲಸಕ್ಕೆ ಬರುತ್ತೇನೆ ಎಂದು ಮನೆಗೆ ಆಗಮಿಸಿದ ಆಕೆಗೆ ಅಸಲಿಗೆ ಮನೆಗೆಲಸ ಹೇಗೆ ಮಾಡುವುದು ಅಂತಲೇ ಗೊತ್ತಿರುವುದಿಲ್ಲ. ಆದರೂ ಅವರ ಜೊತೆ 20 ರಿಂದ 22 ದಿನಗಳ ಕಾಲ ಇದ್ದು ಹೋಗಿದ್ದಾರೆ. ಕೊನೆಗೆ ಗೊತ್ತಾಗಿದ್ದು ಆ ಯುವತಿ ಮಿನಿಸ್ಟರ್ ಒಬ್ಬರ ಪುತ್ರಿ ಹಾಗೂ ನಟ ಗೋವಿಂದ ಅವರ ಅಪ್ಪಟ ಅಭಿಮಾನಿಯೆಂದು.
ಸಂದರ್ಶನವೊಂದರಲ್ಲಿ ಸುನೀತಾ ಈ ಮಾಹಿತಿನ್ನು ಹಂಚಿಕೊಂಡಿದ್ದಾರೆ.ಈ ಘಟನೆಯನ್ನು ನೆನಪಿಸಿಕೊಂಡಿದ್ದಾರೆ 90ರ ದಶಕದಲ್ಲಿ ಗೋವಿಂದ ಮನೆಗೆ ಬಂದ ಯುವತಿಯ ನಡೆಯನ್ನು ಕಂಡು ಸುನೀತಾರಿಗೆ ಅನುಮಾನ ಬರಲು ಶುರುವಾಗುತ್ತದೆ. ನಿತ್ಯವೂ ತಡವಾಗಿ ಎದ್ದು ಗೋವಿಂದ ಬರುವವುದನ್ನೇ ಆ ಯುವತಿ ಕಾಯುತ್ತಿರುತ್ತಾಳೆ. ಆಗ ನನ್ನದು ಚಿಕ್ಕ ವಯಸ್ಸು ಹೀಗಾಗಿ ಏನೋ ಒಂದು ಅನುಮಾನ ಬಂದು ಆಕೆಯನ್ನು ಹಿಡಿದು ನಿಜ ಹೇಳು ಯಾರು ನೀನು ಅಂತ ಜೋರು ಮಾಡಿ ಕೇಳಿದಾಗ ಆ ಹುಡುಗಿ ಅಳುತ್ತಲೇ ತನ್ನ ಕುಟುಂಬದ ಮಾಹಿತಿಯನ್ನು ನೀಡಿ ನಾನು ಗೋವಿಂದ ಅವರ ಅಪ್ಪಟ ಅಭಿಮಾನಿ ಅವರಿಗಾಗಿ ಹೀಗೆ ಸುಳ್ಳು ಹೇಳಿ ಬಂದು ನಿಮ್ಮ ಮನೆ ಸೇರಿಕೊಂಡೆ ನಾನು ಮಿನಿಸ್ಟರ್ ಮಗಳು ಎಂದು ಹೇಳಿಕೊಂಡಿದ್ದಾಳೆ. ಕೊನೆಗೆ ಅವರ ತಂದೆ ನಾಲ್ಕು ಕಾರ್ಗಳೊಂದಿಗೆ ನಮ್ಮ ಮನೆಗೆ ಬಂದು ತಮ್ಮ ಮಗಳನ್ನು ಕರೆದುಕೊಂಡು ಹೋದರು ಎಂದು ಸುನೀತಾ ಹೇಳಿದ್ದಾರೆ.
ಸುನೀತಾ ಹಾಗೂ ಗೋವಿಂದ 1987ರಲ್ಲಿ ಮದುವೆಯಾಗಿದ್ದರು. ಗೋವಿಂದ ಸಿನಿಮಾಗೆ ಪದಾರ್ಪಣೆ ಮಾಡಿ ಕೇವಲ ಒಂದೇ ವರ್ಷ ಆಗಿತ್ತು. ಅವರು ತಮ್ಮ ಇಬ್ಬರ ಮದುವೆಯನ್ನೂ ಕೂಡ ಮೊದಲ ಮಗು ಆಗುವರೆಗೂ ರಹಸ್ಯವಾಗಿಯೇ ಇಟ್ಟಿದ್ದರು. ಈ ಎಲ್ಲಾ ನೆನಪುಗಳನ್ನು ಗೋವಿಂದ ಪತ್ನಿ ಸುನೀತಾ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.