ಹಿಂದೆ ನಡೆದ ಐರ್ಲೆಂಡ್ ವಿರುದ್ಧದ ಏಕದಿನ ಕ್ರಿಕೆಟ್ ಸರಣಿಯಿಂದ ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ವಿಶ್ರಾಂತಿ ತೆಗೆದುಕೊಂಡಿದ್ದರು. ಈಗ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಗೆ ತಂಡ ಸೇರಿಕೊಂಡಿರವುದು ಅಫಘಾನಿಸ್ತಾನದ ಪಡೆಯ ಬಲ ಹೆಚ್ಚಿಸಿದೆ. ಮೊಹಮ್ಮದ್ ನಬಿ ಮತ್ತು ಫಝಲ್ಹಕ್ ಫಾರೂಕಿ ಜೊತೆಗೂಡಿ ತಂಡದ ಬೌಲಿಂಗ್ ದಾಳಿಯನ್ನು ರಶೀದ್ ಖಾನ್ ಮುನ್ನಡೆಸಲಿದ್ದಾರೆ.
ಹೌದು ಯುನೈಟೆಡ್ ಅರಬ್ ಎಮಿರೇಟ್ಸ್ (ಯುಎಇ) ಆತಿಥ್ಯದಲ್ಲಿ ನಡೆಯಲಿರುವ ದಕ್ಷಿಣ ಆಫ್ರಿಕಾ ವಿರುದ್ಧದ 3 ಪಂದ್ಯಗಳ ಏಕದಿನ ಕ್ರಿಕೆಟ್ ಸರಣಿ ಸಲುವಾಗಿ ಅಫಘಾನಿಸ್ತಾನ ಕ್ರಿಕೆಟ್ ಮಂಡಳಿ (ಎಸಿಬಿ) ತನ್ನ 15 ಆಟಗಾರರ ಬಲಿಷ್ಠ ತಂಡವನ್ನು ಪ್ರಕಟ ಮಾಡಿದೆ. ಸರಣಿ ಆರಂಭಕ್ಕೂ ಮುನ್ನ ಗಾಯದ ಸಮಸ್ಯೆಗಳ ಕಾರಣ ಕೆಲ ಪ್ರಮುಖ ಆಟಗಾರರ ಸೇವೆಯನ್ನು ಅಫಘಾನಿಸ್ತಾನ ತಂಡ ಕಳೆದುಕೊಂಡಿದೆಯಾದರೂ, ಸ್ಟಾರ್ ಸ್ಪಿನ್ನರ್ ರಶೀದ್ ಖಾನ್ ಕಮ್ಬ್ಯಾಕ್ ಮಾಡಿರುವುದು ತಂಡದ ಬಲ ಹೆಚ್ಚುವಂತೆ ಮಾಡಿದೆ.
ಸ್ಟಾರ್ ಬ್ಯಾಟರ್ ಹಷ್ಮತ್ಉಲ್ಲಾ ಶಾಹಿದಿ ಅಫಘಾನಿಸ್ತಾನ ಒಡಿಐ ತಂಡವನ್ನು ಮುನ್ನಡೆಸಲಿದ್ದಾರೆ, ರೆಹಮತ್ ಶಾ ಅವರಿಗೆ ವೈಸ್ ಕ್ಯಾಪ್ಟನ್ ಜವಾಬ್ದಾರಿ ಹೊರಿಸಲಾಗಿದೆ. ಅಂದಹಾಗೆ ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಯ ಮೂರೂ ಪಂದ್ಯಗಳು ಐತಿಹಾಸಿಕ ಶಾರ್ಜಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಆಯೋಜನೆ ಆಗಲಿದ್ದು, ಮೊದಲ ಪಂದ್ಯ ಸೆಪ್ಟೆಂಬರ್ 18ರಂದು ನಡೆಯಲಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಒಡಿಐ ಸರಣಿಗೆ ಅಫಘಾನಿಸ್ತಾನ ತಂಡ
ಹಷ್ಮತ್ಉಲ್ಲಾ ಶಾಹಿದಿ (ನಾಯಕ), ರೆಹಮತ್ ಶಾ (ವೈಸ್ಕ್ಯಾಪ್ಟನ್), ರೆಹಮಾನುಲ್ಲಾ ಗುರ್ಬಝ್ (ವಿಕೆಟ್ಕೀಪರ್), ಇಕ್ರಮ್ ಅಲಿಖಿಲ್ (ವಿಕೆಟ್ಕೀಪರ್), ಅಬ್ದುಲ್ ಮಲಿಕ್, ರಿಯಾಝ್ ಹಸನ್, ಡಾರ್ವಿಷ್ ರಸೂಲಿ, ಅಝ್ಮತ್ಉಲ್ಲಾ ಒಮರ್ಝಾಯ್, ಮೊಹಮ್ಮದ್ ನಬಿ, ಗುಲ್ಬದಿನ್ ನೈಬ್, ರಶೀದ್ ಖಾನ್, ನಂಗ್ಯಾಲ್ ಖರೊಟಿ, ಅಲ್ಲಾ ಮೊಹಮ್ಮದ್ ಘಝಾನ್ಫರ್, ಫಝಲ್ ಹಕ್ ಫಾರೂಕಿ, ಬಿಲಾಲ್ ಸಮಿ, ನವೀದ್ ಝದ್ರಾನ್ ಮತ್ತು ಫರೀದಿ ಅಹ್ಮದ್ ಮಲಿಕ್.