ರಾಜಧಾನಿ ಬೆಂಗಳೂರಿನ ಹಲವೆಡೆ ನಾಳೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ ಎಂದು ಬೆಸ್ಕಾಂ ತಿಳಿಸಿದೆ
ನಾಳೆ ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 4 ಗಂಟೆಯವರೆಗೆ 220/66/11 ಕೆ.ವಿ ಹೆಬ್ಬಾಳ ಸ್ವೀಕರಣಾ ಕೇಂದ್ರದಲ್ಲಿ ತುರ್ತುನಿರ್ವಹಣಾ ಕೆಲಸಗಳನ್ನು ಕೈಗೊಳ್ಳಲಾಗುತ್ತಿದೆ. ಈ ಸಂದರ್ಭದಲ್ಲಿ ಸ್ವೀಕರಣಾ ಕೇಂದ್ರದಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ತಿಳಿಸಲಾಗಿದೆ.
ಎಲ್ಲೆಲ್ಲಿ ವಿದ್ಯುತ್ ವ್ಯತ್ಯಯ?
ಮಂಗಳವಾರ ಜಯಮಹಲ್ ವಿಸ್ತರಣೆ, ನಂದಿ ದುರ್ಗಾ, ದೂರದರ್ಶನ, ಜಯಮಹಲ್ ರಸ್ತೆ, ಮುನಿರೆಡ್ಡಿ ಪಾಳ್ಯ, ಜೆ.ಸಿ.ನಗರ, ಮಾರಪ್ಪ ಗಾರ್ಡನ್, ಚಿನಪ್ಪ ಗಾರ್ಡನ್, ಎನ್.ಡಿ.ರಸ್ತೆ ಏರ್ಟೆಲ್ ಸಮೀಪದ ಬಡಾವಣೆಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
ಬೆಸ್ಕಾಂ ವಿದ್ಯುತ್ ಸ್ಟೇಷನ್ ಕಾಮಗಾರಿ ಹಿನ್ನೆಲೆ ನಾಳೆ ಕರೆಂಟ್ ಇರುವುದಿಲ್ಲ ಎಂದು ಬೆಸ್ಕಾಂ ತಿಳಿಸಿದೆ.
ಕವಿಪ್ರನಿನಿ ಬೃಹತ್ ಕಾಮಗಾರಿ ವಿಭಾಗದವರು ಸೆಪ್ಟೆಂಬರ್ 18 ರಿಂದ ಅಕ್ಟೋಬರ್ 1 ರವರೆಗೆ ಚಿಂತಾಮಣಿ-ತಳಗವಾರ ಮಾರ್ಗದಲ್ಲಿನಾನಾ ಕಾಮಗಾರಿಗಳನ್ನು ನಿರ್ವಹಿಸಲಾಗುತ್ತಿದೆ. ಆದುದರಿಂದ 66 / 11 ಕೆವಿ 66 / 11 ಕೆವಿ ಚೀಮಂಗಲ, ವೇಮಗಲ್, ಕ್ಯಾಲನೂರು, ತಲಗುಂದ ಮತ್ತು ತಳಗವಾರ ವಿದ್ಯುತ್ ಉಪಕೇಂದ್ರದಿಂದ ವಿದ್ಯುತ್ ಸರಬರಾಜಾಗುವ ಎಲ್ಲಾಕೃಷಿ ವಿದ್ಯುತ್ ಮಾರ್ಗಗಳ 3 ಫೇಸ್ ವಿದ್ಯುತ್ ಅನ್ನು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯೊಳಗೆ ಪೂರೈಸಲಾಗುವುದು. ಗ್ರಾಹಕರು ಬೆವಿಕಂ ಜತೆ ಸಹಕರಿಸಬೇಕೆಂದು ಕೋಲಾರ ಬೆಸ್ಕಾಂ ವಾಣಿಜ್ಯ, ಕಾರ್ಯ ಮತ್ತು ಪಾಲನಾ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ (ವಿ) ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ 2 ಬೆಸ್ಕಾಂ ವಿಭಾಗದ ವ್ಯಾಪ್ತಿಯಲ್ಲಿ ಪೂರ್ವ ಮುಂಗಾರು, ಮುಂಗಾರು ಅವಧಿಯಲ್ಲಿಸಾಕಷ್ಟು ಪ್ರಮಾಣದಲ್ಲಿವಿದ್ಯುತ್ ಕಂಬಗಳು, ಟ್ರಾನ್ಸ್ಫಾರ್ಮರ್ಗಳು ಹಾನಿಗೊಳಗಾಗಿವೆ. ಏ 1 ರಿಂದ ಮೇ 31 ಪೂರ್ವ ಮುಂಗಾರಿನ ಅವಧಿಯಲ್ಲಿ ಜಿಲ್ಲೆಯ 2 ವಿಭಾಗಗಳಲ್ಲಿ ಒಟ್ಟು 326 ವಿದ್ಯುತ್ ಕಂಬಗಳು ಹಾನಿಗೊಳಗಾಗಿವೆ. ಜತೆಗೆ 82 ಟ್ರಾನ್ಸ್ಫಾರ್ಮ್ಗಳಿಗೂ ಹಾನಿಯಾಗಿದೆ. ನಂತರದಲ್ಲಿ ಜೂನ್ 1 ರಿಂದ ಆಗಸ್ಟ್ ಅಂತ್ಯದವರೆಗಿನ ಮುಂಗಾರು ಅವಧಿಯಲ್ಲಿ 121 ವಿದ್ಯುತ್ ಕಂಬಗಳು ಹಾನಿಯಾಗುವ ಮೂಲಕ ಒಟ್ಟು 447 ಕಂಬಗಳು ಹಾನಿಗೊಂಡಿವೆ. ಜತೆಗೆ ಮುಂಗಾರು ಅವಧಿಯಲ್ಲಿಯೇ ಒಟ್ಟು 45 ಟ್ರಾನ್ಸ್ಫಾರ್ಮರ್ಗಳು ಕೂಡ ಹಾನಿಗೊಳಗಾಗಿವೆ ಎಂದು ಬೆಸ್ಕಾಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.