ಅಫ್ಘಾನಿಸ್ಥಾನದಲ್ಲಿ ಪೋಲಿಯೋ ಲಸಿಕೆ ಅಭಿಯಾನ ನಡೆಸದಂತೆ ತಾಲಿಬಾನ್ ನಿಷೇಧ ಹೇರಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ಪೋಲಿಯೋ ಕಾರಣದಿಂದ ಉಂಟಾಗಬಹುದಾದ ಪಾರ್ಶ್ವವಾಯು ಅಫ್ಘಾನಿಸ್ಥಾನದಲ್ಲಿ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಆದರೆ ಇದಕ್ಕೆ ಅಂತ್ಯ ಹಾಡಲು ಅಘ್ಘಾನಿಸ್ತಾನ ಸಮ್ಮತಿ ಸೂಚಿಸುತ್ತಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ.
ಪೋಲಿಯೋ ಕಾರಣದಿಂದ ಉಂಟಾಗಬಹುದಾದ ಪಾರ್ಶ್ವವಾಯುವಿಗೆ ಅಫ್ಘಾನಿಸ್ಥಾನದಲ್ಲಿ ಅಂತ್ಯ ಹಾಡಲು ವಿಶ್ವಸಂಸ್ಥೇ ನಿರ್ಧರಿಸಿತ್ತು. ಆದರೆ ಅದಕ್ಕೂ ಮೊದಲೇ ತಾಲಿಬಾನ್ ಈ ಘೋಷಣೆ ಮಾಡಿದೆ.
ಈ ನಿಷೇಧಕ್ಕೆ ತಾಲಿಬಾನ್ ಯಾವುದೇ ಕಾರಣ ನೀಡಿಲ್ಲ ಹಾಗೂ ಪ್ರತಿಕ್ರಿಯೆಗೂ ಲಭ್ಯವಿಲ್ಲ ಎಂದು ವಿಶ್ವಸಂಸ್ಥೆ ಹೇಳಿದೆ. ಅಫ್ಘಾನಿಸ್ಥಾನ ದಲ್ಲೂ ಪೋಲಿಯೋದಿಂದ ಹೆಚ್ಚು ಸಮಸ್ಯೆಗಳು ಸೃಷ್ಟಿಯಾಗುತ್ತಿವೆ. ಅಲ್ಲಿಯೂ ಈ ಅಭಿಯಾನಕ್ಕೆ ಹಿಂಸಾ ಚಾರಗಳು ತಡೆಯೊಡ್ಡುತ್ತಲೇ ಇರುತ್ತವೆ.