ಬೆಂಗಳೂರು:- ರಾಜಧಾನಿ ಬೆಂಗಳೂರು ನಲ್ಲಿ ಮತ್ತೆ ಗನ್ ಸೌಂಡ್ ಕೇಳಿ ಬಂದಿದ್ದು, ರೌಡಿಶೀಟರ್ ಓರ್ವನ ಕಾಲಿಗೆ ಫೈರಿಂಗ್ ಮಾಡಲಾಗಿದೆ. ಜ್ಞಾನಭಾರತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಜರುಗಿದೆ.
ಯುವಕನ ಬಟ್ಟೆ ಬಿಚ್ಚಿಸಿ ರೌಡಿಶೀಟರ್ ಪವನ್ @ಕಡಬು ಹಲ್ಲೆ ಮಾಡಿದ್ದ. ಈ ಸಂಬಂಧ ದೂರು ಆಧರಿಸಿ ಬಂಧಿಸಲು ಹೋದ ವೇಳೆ ಪೊಲೀಸರ ಮೇಲೆ ಅಟ್ಯಾಕ್ ಗೆ ಮುಂದಾಗಿದ್ದಾನೆ.
ಹೆಡ್ ಕಾನ್ಸ್ಟೇಬಲ್ ವೆಂಕಟೇಶ್ ಮೇಲೆ ಡ್ರಾಗಾರ್ ನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಹೀಗಾಗಿ ಪ್ರಾಣ ರಕ್ಷಣೆಗಾಗಿ ಪವನ್ ಕಾಲಿಗೆ ಪೊಲೀಸರು ಗುಂಡು ನುಗ್ಗಿಸಿದ್ದಾರೆ. ಕಾಮಾಕ್ಷಿಪಾಳ್ಯ ಇನ್ಸ್ಪೆಕ್ಟರ್ ನಾಗಶ್ ಹಾಗೂ ಗೋವಿಂದ ರಾಜ್ ನಗರ ಇನ್ಸ್ಪೆಕ್ಟರ್ ಸುಬ್ರಮಣ್ಯರಿಂದ ಶೂಟ್ಔಟ್ ನಡೆದಿದೆ.
ಆರೋಪಿ ಪವನ್ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.