ಬೆಂಗಳೂರು:- ನಮ್ಮ ಪಾರ್ಟಿ, ನಮ್ಮ ಲೀಡರ್, ನನ್ನಿಷ್ಟ ಎಂದು ಹೇಳುವ ಮೂಲಕ ವಿದೇಶದಲ್ಲಿ ರಾಹುಲ್ ಗಾಂಧಿ ಭೇಟಿ ಬಗ್ಗೆ ಡಿಸಿಎಂ ಪ್ರತಿಕ್ರಿಯೆ ಕೊಟ್ಟಿದ್ದಾರೆ.ವಿದೇಶದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರನ್ನು ಭೇಟಿಯಾದ ವಿಚಾರವಾಗಿ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದರು.
ಈ ವೇಳೆ ನಾನು ಯಾರ ಬಳಿ ಮಾತಾಡಬೇಕು? ಏನು ಮಾಡಬೇಕು? ಎಲ್ಲವನ್ನೂ ನಿಮ್ಮ ಬಳಿ ಹೇಳ್ಕೋಬೇಕಾ? ನನ್ನ ತಮ್ಮ, ತಂಗಿ, ಕುಟುಂಬದ ಜೊತೆ ಏನು ಮಾತಾಡ್ತೇನೆ ಎಲ್ಲಾ ಹೇಳಬೇಕಾ ಎಂದು ಪ್ರಶ್ನಿಸಿದ್ದಾರೆ.
ಶಾಸಕ ಮುನಿರತ್ನ ಅವರ ಬಂಧನದ ವಿಚಾರವಾಗಿ, ಈ ಬಗ್ಗೆ ನನಗೆ ಸರಿಯಾದ ಮಾಹಿತಿ ಇಲ್ಲ. ಈ ಬಗ್ಗೆ ಬಿಜೆಪಿಯ ಆರ್.ಆಶೋಕ್, ವಿಜಯೇಂದ್ರ, ಇನ್ನೂ ದೊಡ್ಡ ದೊಡ್ಡ ನಾಯಕರು ಇದ್ದಾರೆ. ಅಲ್ಲದೇ ಆ ಸಮುದಾಯದ ಮುಖ್ಯಸ್ಥರು, ಸ್ವಾಮಿಗಳು ಅವರೆಲ್ಲ ಮಾತಾಡಬೇಕು. ಸರಿ ಇದ್ದರೆ ಸರಿ, ತಪ್ಪಿದ್ದರೆ ತಪ್ಪು ಎಂದು ಹೇಳಬೇಕು. ಈ ಬಗ್ಗೆ ಇನ್ನಷ್ಟು ಮಾಹಿತಿ ಪಡೆದುಕೊಂಡು ಬಳಿಕ ಮಾತನಾಡುತ್ತೇನೆ ಎಂದಿದ್ದಾರೆ.