ಯುದ್ಧ ನಡೆಯುತ್ತಿರುವ ಹಿನ್ನೆಲೆಯಲ್ಲಿ ತಕ್ಷಣ ಸ್ಥಳಾಂತರಗೊಳ್ಳುವಂತೆ ದಕ್ಷಿಣ ಲೆಬನಾನ್ ನಿವಾಸಿಗಳಿಗೆ ಆದೇಶಿಸುವ ಕರಪತ್ರಗಳನ್ನು ಲೆಬನಾನ್ ಗಡಿಭಾಗದ ಗ್ರಾಮದಲ್ಲಿ ಇಸ್ರೇಲ್ ಡ್ರೋನ್ ಗಳ ಮೂಲಕ ಬೀಳಿಸಿದೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ.
ಆದರೆ ಕರಪತ್ರಗಳನ್ನು ಸೇನೆಯ ತುಕಡಿಯೊಂದು ಅನುಮತಿ ಪಡೆಯದೆ ಉದುರಿಸಿದೆ ಎಂದು ಇಸ್ರೇಲ್ ಸೇನೆ ಪ್ರತಿಕ್ರಿಯಿಸಿದೆ. ಗಾಝಾದಲ್ಲಿ 11 ತಿಂಗಳಿಂದ ಮುಂದುವರಿದಿರುವ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ದಕ್ಷಿಣ ಲೆಬನಾನ್ನಿ ನಿವಾಸಿಗಳಿಗೆ ಸ್ಥಳಾಂತರಗೊಳ್ಳಲು ಇಸ್ರೇಲ್ ಆದೇಶಿಸಿದೆ.
`ಇಸ್ರೇಲಿ ಶತ್ರುಗಳು ವಝಾನಿ ನಗರದಲ್ಲಿ ಕರಪತ್ರಗಳನ್ನು ಉದುರಿಸಿ ನಗರ ಹಾಗೂ ಸುತ್ತಮುತ್ತಲಿನ ಪ್ರದೇಶದವರು ತಕ್ಷಣ ಸ್ಥಳಾಂತರಗೊಳ್ಳಲು ಸೂಚಿಸಿದ್ದಾರೆ. ಕರಪತ್ರದಲ್ಲಿ ಪ್ರದೇಶದ ನಕ್ಷೆ ಹಾಗೂ ಸ್ಥಳಾಂತರಗೊಳ್ಳಬೇಕಾದ ಪ್ರದೇಶವನ್ನು ಕೆಂಪು ಬಣ್ಣದಲ್ಲಿ ಗುರುತಿಸಲಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಿದೆ.