ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಸದ್ಯ ಹಾಲಿವುಡ್ ನಲ್ಲಿ ಸೆಟಲ್ ಆಗಿದ್ದಾರೆ. ಪತಿ ನಿಕ್ ಜೋನಾಸ್ ಹಾಗೂ ಮಗಳೂ ಮಾಲ್ತಿ ಜೊತೆ ವಿದೇಶದಲ್ಲಿ ಸೆಟಲ್ ಆಗಿರುವ ಪಿಗ್ಗಿ ಇತ್ತೀಚೆಗೆ ನಿಕ್ ಅವರ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ.
ನಿಕ್ ಅವರ ಸಂಗೀತ ಕಾರ್ಯಕ್ರಮದಲ್ಲಿ ಮಗಳ ಜೊತೆ ಸೇರಿಕೊಂಡು ಪ್ರಿಯಾಂಕ ಪತಿಯ ಬರ್ತಡೇ ಸೆಲೆಬ್ರೇಟ್ ಮಾಡಿದ್ದಾರೆ. ಅಪ್ಪನ ಹುಟ್ಟುಹಬ್ಬಕ್ಕೆ ಮಗಳು ಕೂಡ ಕೈಗೆ ಮೈಕ್ ಹಿಡಿದುಕೊಂಡು ಹಾಡಿದ್ದಾಳೆ.
ಅಪ್ಪನ ಸಂಗೀತ ಕಾರ್ಯಕ್ರಮದಲ್ಲಿ ಮಗಳು ಅಷ್ಟೇ ಉತ್ಸಾಹದಲ್ಲಿಯೇ ಕಾಣಿಸಿಕೊಂಡಿದ್ದಳು. ಸ್ಟೇಜ್ ಹತ್ತಿ ಮೈಕ್ ಹಿಡಿದು ಏನೋ ಹೇಳೋ ಪ್ರಯತ್ನ ಮಾಡಿದ್ದಾಳೆ ಮಾಲ್ತಿ. ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಾಸ್ ಅಂತೂ ತಮ್ಮದೇ ರೀತಿಯಲ್ಲಿಯೇ ಇಲ್ಲಿ ಗಮನ ಸೆಳೆದಿದ್ದಾರೆ.
ನಿಕ್ ಜೋನಾಸ್ ಜನ್ಮ ದಿನದ ಹಿನ್ನೆಲೆಯಲ್ಲಿ ಪ್ರಿಯಾಂಕಾ ಮತ್ತು ನಿಕ್ ಪರಸ್ಪರ ಲಿಪ್ ಕಿಸ್ ಮಾಡಿದ್ದಾರೆ. ಈ ವೇಳೆ ಪ್ರಿಯಾಂಕಾ ಮಗಳನ್ನ ಎತ್ತುಕೊಂಡಿದ್ದರು. ಆದರೆ ಅಪ್ಪ ಮತ್ತು ಅಮ್ಮನ ಕಿಸಿಂಗ್ ನೋಡಿದ ಮಗಳು ತನ್ನ ಎರಡು ಕೈಗಳನ್ನ ಕಣ್ಣು ಮುಂದೆ ಹಿಡಿದು ಕಣ್ಣು ಮುಂಚ್ಚಿಕೊಂಡಿದ್ದಾಳೆ.
ಪ್ರಿಯಾಂಕಾ ಚೋಪ್ರಾ ಮಗಳ ಈ ಒಂದು ರಿಯಾಕ್ಷನ್ ಫೋಟೋ ಹೆಚ್ಚು ಗಮನ ಸೆಳೆಯುತ್ತಿವೆ. ಇದನ್ನ ಸ್ವತಃ ಪ್ರಿಯಾಂಕಾ ಚೋಪ್ರಾ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಅನೇಕರು ಮಾಲ್ತಿಯನ್ನು ಹೊಗಳಿದ್ದಾರೆ.
ಪತಿಯೊಂದಿಗಿನ ಫೋಟೋ ಹಂಚಿಕೊಂಡಿರುವ ಪ್ರಿಯಾಂಕ, ಒಳ್ಳೆ ಗಂಡ, ಒಳ್ಳೆ ಅಪ್ಪನಿಗೆ ಹುಟ್ಟುಹಬ್ಬದ ಶುಭಾಶಯಗಳು ಎಂದು ಬರ್ತ್ ಡೇ ವಿಶ್ ಮಾಡಿದ್ದರು. ಈ ಮೂಲಕ ಬಾಲಿವುಡ್ ಈ ಹೀರೋಯಿನ್ ಪತಿಯ ಬರ್ತ್ಡೇಯನ್ನ ವಿಶೇಷವಾಗಿಯೇ ಸೆಲೆಬ್ರೇಟ್ ಮಾಡಿದ್ದರು.
ಮೊನ್ನೆ ಮೊನ್ನೆ ಅನ್ನುವ ಹಾಗೆ ಪ್ರಿಯಾಂಕಾ, ನಿಕ್ ಮತ್ತು ಮಗಳು ಹೀಗೆ ಎಲ್ಲರೂ ಸಖತ್ ಟೂರ್ ಮಾಡಿದ್ದಾರೆ. ಕ್ರೂಸ್ನಲ್ಲಿಯೇ ಹೆಚ್ಚು ಸಮಯ ಕಳೆದ ಈ ಫ್ಯಾಮಿಲಿ ಎಲ್ಲರೂ ಗಮನ ಸೆಳೆಯೋ ರೀತಿನೇ ಕಾಣಿಸಿಕೊಂಡಿದ್ದರು. ಬಿಕಿನಿ ತೊಟ್ಟು ಪ್ರಿಯಾಂಕಾ ಚೋಪ್ರಾ ಸಖತ್ ಪೋಸ್ ಕೊಟ್ಟಿದ್ದರು.