ಲೆಬನಾನ್ ನಾದ್ಯಂತ ಹಿಜ್ಬುಲ್ಲಾಗಳು ಬಳಕೆ ಮಾಡುತ್ತಿದ್ದ ಪೇಜರ್ ಗಳು ಏಕಕಾಲಕ್ಕೆ ಸ್ಫೋಟಗೊಂಡು 11 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 2800ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು 200ಕ್ಕೂ ಅಧಿಕ ಮಂದಿಯ ಸ್ಥಿತಿ ಗಂಭೀರವಾಗಿದೆ. ಈ ಬೆನ್ನಲ್ಲೇ ಹಿಜ್ಬುಲ್ಲಾಗಳು ಬಳಸುವ ಬೆನ್ನಲ್ಲೇ ವಾಕಿ-ಟಾಕಿಗಳೂ ಸ್ಫೋಟಗೊಳ್ಳಲು ಆರಂಭವಾಗಿವೆ. ವಾಕಿ-ಟಾಕಿಗಳ ಸ್ಫೋಟದ ಪರಿಣಾಮವಾಗಿ 14 ಮಂದಿ ಸಾವನ್ನಪ್ಪಿದ್ದು, 450 ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.
“ಸೊಹ್ಮೋರ್ ಪಟ್ಟಣದಲ್ಲಿ ಸಾಧನಗಳು ಸ್ಫೋಟಗೊಂಡ ನಂತರ ಮೂವರು ಸಾವನ್ನಪ್ಪಿದ್ದಾರೆ” ಎಂದು ಸರ್ಕಾರಿ ರಾಷ್ಟ್ರೀಯ ಸುದ್ದಿ ಸಂಸ್ಥೆ ಹೇಳಿದೆ. ದೇಶದ ಅನೇಕ ಪ್ರದೇಶಗಳಲ್ಲಿ ಎಲೆಕ್ಟ್ರಾನಿಕ್ ಸಾಧನಗಳು ಸ್ಫೋಟಗೊಂಡಿರುವ ಇತ್ತೀಚಿನ ಪ್ರಕರಣಗಳಲ್ಲಿ 450 ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಲೆಬನಾನ್ ಸರ್ಕಾರ ತಿಳಿಸಿದೆ.
5 ತಿಂಗಳ ಹಿಂದೆ ವಾಕಿ ಟಾಕಿ ಉಪಕರಣಗಳನ್ನು ಹೆಜ್ಬೊಲ್ಲಾಗಳು ಖರೀದಿಸಿದ್ದರು. ಪೇಜರ್ಗಳನ್ನೂ ಅದೇ ಸಮಯದಲ್ಲಿ ಖರೀದಿಸಿದ್ದಾರೆ ಎಂದು ಭದ್ರತಾ ಮೂಲವೊಂದು ಈಗ ಬಹಿರಂಗಪಡಿಸಿದೆ. ಪೂರ್ವ ಮತ್ತು ದಕ್ಷಿಣದ ಹೆಜ್ಬೊಲ್ಲಾಹ್ ಭದ್ರಕೋಟೆಗಳಲ್ಲಿ ಪೇಜರ್ಗಳು ಮತ್ತು “ಸಾಧನಗಳು” ಸ್ಫೋಟಗೊಂಡಿವೆ ಎಂದು ರಾಜ್ಯ ಸುದ್ದಿ ಸಂಸ್ಥೆ ಹೇಳಿದೆ.