ಕಲಬುರಗಿ: ರಮೇಶ್ ಜಾರಕಿಹೊಳಿ ಬಾಯಲ್ಲೂ ಪಕ್ಷ, ಪಕ್ಷದ ಸಿದ್ಧಾಂತ ಬಂದಿರೋದು ಒಳ್ಳೆಯ ಬೆಳವಣಿಗೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿದ್ದಾರೆ. ಈ ಕುರಿತು ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಾಲ್ಮೀಕಿ ಹಗರಣ ಸಂಬಂಧ ಪಾದಯಾತ್ರೆ ಚರ್ಚೆಯ ಹಂತದಲ್ಲಿದೆ.
ಇನ್ನು ರಮೇಶ್ ಜಾರಕಿಹೊಳಿ ಹೇಳಿರುವ ವಿಜಯೇಂದ್ರ ನಾಯಕನಾಗಿ ಒಪ್ಪಿಕೊಳ್ಳೊದಿಲ್ಲ ಅನ್ನೋದು ಸ್ವಾಗತ ಮಾಡುತ್ತೇನೆ. ನಾನು ನಾಯಕನಾಗಲು ಹೊರಟಿಲ್ಲ. ನಮ್ಮ ಪಕ್ಷದ ಹಿರಿಯರು, ರಾಜ್ಯದ ಅಧ್ಯಕ್ಷನಾಗಿ ನೇಮಕ ಮಾಡಿದ್ದಾರೆ. ಸದ್ಯ ಭ್ರಷ್ಟ ಸರ್ಕಾರವನ್ನ ಒಂಟಿ ಕಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ದೇವೆ ಎಂದು ತಿರುಗೇಟು ನೀಡಿದ್ದಾರೆ.
ಸಿದ್ದರಾಮಯ್ಯ ಅವರ ಸಿಎಂ ಕುರ್ಚಿ ಅಲುಗಾಡುತ್ತಿದೆ. ಹೀಗಾಗಿ ಎಐಸಿಸಿ ಅಧ್ಯಕ್ಷರನ್ನು ಓಲೈಸಲು ಕಲಬುರಗಿಯಲ್ಲಿ ಕ್ಯಾಬಿನೆಟ್ ಸಭೆ ನಡೆಸಿದ್ದಾರೆ. ಅವರ ಸರ್ಕಾರ ಬಂದು ವರ್ಷವಾದರೂ ಈ ಭಾಗದ ನೆನಪಾಗಲಿಲ್ಲ. ಹೀಗಾಗಿ ಅಚಾನಕ್ಕಾಗಿ ಇದೀಗ ಈ ಭಾಗದ ನೆನಪಾಗಿ ಸಚಿವ ಸಂಪುಟ ಸಭೆ ನಡೆಸಿದರು. ಆದರೆ ಈ ಭಾಗಕ್ಕೆ ಏನು ಪ್ರಯೋಜನವಾಗಿಲ್ಲ.
ಹೀಗಾಗಿ ಬೆಂಗಳೂರು, ಮೈಸೂರು ಮುಖ್ಯಮಂತ್ರಿ ಎಂದು ಜನ ಹೇಳುತ್ತಿದ್ದಾರೆ ಎಂದು ಹೇಳಿದರು. ಶಿವಮೊಗ್ಗದಲ್ಲಿ ಪ್ಯಾಲೆಸ್ತೀನ್ ಧ್ವಜ ಹಾರಿಸಿರುವುದು ಅಷ್ಟೇ ಅಲ್ಲ, ಸಾಲು ಸಾಲು ದೇಶದ್ರೋಹಿಗಳ ಕೆಲಸ ನಡೆಯತ್ತಿದೆ. ಈ ಸರ್ಕಾರ ಬಂದ ಮೇಲೆ ಅವರಿಗೆ ಹೆಚ್ಚು ಶಕ್ತಿ ಸಿಗುತ್ತಿದೆ. ಬೆಂಕಿ ಹಚ್ಚುವ ಕೆಲಸ, ಹಚ್ಚಿಸಿಕೊಳ್ಳುವ ಕೆಲಸ ಮಾಡುವುದು ಕಾಂಗ್ರೆಸ್ ಪಕ್ಷದವರು. ಆದರೆ ಗೃಹ ಸಚಿವರು ಸಣ್ಣ ಘಟನೆ ಎಂದು ಹೇಳುತ್ತಾರೆ ಎಂದು ಕಿಡಿಕಾರಿದರು.