ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ನಟ ಸಿದ್ದಾರ್ಥ್ ಹಾಗೂ ನಟಿ ಅದಿತಿ ರಾವ್ ಹೈದರಿ ಇತ್ತೀಚಿಗಷ್ಟೇ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಅಂದ ಹಾಗೆ ಇಬ್ಬರಿಗೂ ಇದು ಎರಡನೇ ಮದುವೆಯಾಗಿದೆ.
ಸಿದ್ದಾರ್ಥ್ ಹಾಗೂ ಅದಿತಿ ಪ್ರೀತಿಸುತ್ತಿದ್ದು ಕೆಲ ತಿಂಗಳ ಹಿಂದೆ ಎಂಗೇಜ್ ಮೆಂಟ್ ಮಾಡಿಕೊಂಡಿದ್ದರು. ಸಿದ್ದಾರ್ಥ್ ಹಾಗೂ ಅದಿತಿ ಮಹಾ ಸಮುದ್ರಂ ಚಿತ್ರದಲ್ಲಿ ಒಟ್ಟಿಗೆ ನಟಿಸಿದ್ದು ಈ ವೇಳೆ ಇಬ್ಬರ ನಡುವೆ ಪ್ರೀತಿ ಶುರುವಾಗಿದೆ.
ಮಹಾ ಸಮುದ್ರಂ ಸಿನಿಮಾದ ಬಳಿಕ ಅಂದಿನಿಂದ ಎಲ್ಲೇ ಹೋದರೂ ಈ ಜೋಡಿ ಜೊತೆಯಾಗಿಯೇ ಕಾಣಿಸಿಕೊಳ್ತಿದ್ರು. ಇಬ್ಬರು ಲವ್ ಕನ್ಫಾರ್ಮ್ ಮಾಡಲಿಲ್ಲ. ಬಳಿಕ ಎಂಗೇಜ್ಮೆಂಟ್ ಮಾಡಿಕೊಂಡು ಫೋಟೋಗಳನ್ನು ಶೇರ್ ಮಾಡಿದ್ರು.
ಈ ಮೊದಲು ಅದಿತಿ ರಾವ್ ಹೈದರಿ ಜನಪ್ರಿಯ ನಟ ಸತ್ಯದೀಪ್ ಮಿಶ್ರಾ ಅವರನ್ನು 2002 ರಲ್ಲಿ ಮದುವೆಯಾಗಿದ್ದರು. ಹಲವು ವರ್ಷಗಳಿಂದ ಸಂದರ್ಶನಗಳಲ್ಲಿ ಎಲ್ಲಿಯೂ ತನ್ನ ಮದುವೆಯ ಬಗ್ಗೆ ಪ್ರಸ್ತಾಪಿಸದ ಅದಿತಿ, 2013 ರಲ್ಲಿ ಸಂದರ್ಶನವೊಂದರಲ್ಲಿ ತಾವು ವಿಚ್ಛೇದನ ಪಡೆದಿದ್ದೇವೆ ಎಂದು ತಿಳಿಸಿದ್ದರು.
ಅದಿತಿಯ ಮೊದಲ ಪತಿ, ಸತ್ಯದೀಪ್ ಮಿಶ್ರಾ, ಚಿತ್ರರಂಗಕ್ಕೆ ಪ್ರವೇಶಿಸುವ ಮೊದಲು ಭಾರತೀಯ ಕಂದಾಯ ಸೇವೆ ಅಧಿಕಾರಿ ಮತ್ತು ಕಾರ್ಪೊರೇಟ್ ವಕೀಲರಾಗಿ ದೀರ್ಘಕಾಲ ಕೆಲಸ ಮಾಡಿದರು.
ಇನ್ನೂ ನಟ ಸಿದ್ದಾರ್ಥ್ 2003ರಲ್ಲಿ ದೆಹಲಿಯಲ್ಲಿ ಪಕ್ಕದ ಮನೆಯಲ್ಲಿದ್ದ ಮೇಘನಾ ಎಂಬ ಯುವತಿಯನ್ನು ಮದುವೆ ಆಗಿದ್ರು, ಬಳಿಕ 2007ರಲ್ಲಿ ವಿಚ್ಛೇದನ ಪಡೆದು ದೂರವಾದ್ರು. ಅಂದಿನಿಂದ ಒಂಟಿಯಾಗಿದ್ದ ನಟ ಸಿದ್ದಾರ್ಥ್ ಇದೀಗ ಅದಿತಿ ಜೊತೆ ಹೊಸ ಜೀವನ ಆರಂಭಿಸಿದ್ದಾರೆ.
400 ವರ್ಷಗಳ ಹಳೆಯ ವನಪರ್ತಿಯ ದೇವಸ್ಥಾನದಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ಮದುವೆಯಾಗಿದ್ದಾರೆ. ಮದುವೆಯ ಕೆಲವು ಫೋಟೋಗಳನ್ನು ಅದಿತಿ ರಾವ್ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಹಂಚಿಕೊಂಡಿದ್ದಾರೆ.
ಮಾರ್ಚ್ ತಿಂಗಳಲ್ಲಿ ಅದಿತಿ ಮತ್ತು ಸಿದ್ಧಾರ್ಥ್ ರಹಸ್ಯವಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ರು, ಇದೀಗ ಗುಟ್ಟಾಗಿ ಮದುವೆ ಆಗಿದ್ದಾರೆ. ಇಬ್ಬರ ಮದುವೆ ಫೋಟೋಗಳು ಇದೀಗ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಕುಟುಂಬಸ್ಥರು ಹಾಗೂ ಸ್ನೇಹಿತರ ಸಮ್ಮುಖದಲ್ಲಿ ಸಿದ್ಧಾರ್ಥ್ , ಅದಿತಿ ಮದುವೆ ನಡೆದಿದೆ.