21 ವರ್ಷದ ಯುವತಿಯ ಮೇಲೆ ಅತ್ಯಾಚಾರ ಆರೋಪ ಪ್ರಕರಣದಕ್ಕೆ ಸಂಬಂಧಿಸಿದಂತೆ ಖ್ಯಾತ ನೃತ ನಿರ್ದೇಶಕ ಜಾನಿ ಮಾಸ್ಟರ್ ಅವರನ್ನು ಬಂಧಿಸಲಾಗಿದೆ. ಘಟನೆಯ ಬಳಿಕ ತಲೆಮರೆಸಿಕೊಂಡಿದ್ದ ಜಾನಿ ಮಾಸ್ಟರ್ ಅವನ್ನು ಗೋವಾದಲ್ಲಿ ಹೈದರಾಬಾದ್ ಪೊಲೀಸರು ಬಂಧಿಸಿದ್ದಾರೆ. ಬಂಧನದ ವಿಷ್ಯ ಗೊತ್ತಾಗುತ್ತಿದ್ದಂತೆಯೇ ಜಾನಿ ಮಾಸ್ಟರ್ ಪತ್ನಿ ಆಯೇಷಾ ಪೊಲೀಸ್ ಸ್ಟೇಶನ್ ಗೆ ಬಂದು ಗಂಡನ ಬಂಧನದ ಬಗ್ಗೆ ವಿಚಾರಿಸಿದ್ದು, ನನ್ನ ಗಂಡನನ್ನು ನೋಡಬೇಕು ಅಂತ ಡ್ರಾಮಾ ಶುರುಮಾಡಿಕೊಂಡಿದ್ದರು.
ಪತಿಯನ್ನು ಬಂಧಿಸಲಾಗಿದೆ ಎಂಬ ವಿಷಯ ತಿಳಿಯುತ್ತಿದ್ದಂತೆ ಸ್ಟೇಷನ್ ಗೆ ಓಡೋಡಿ ಬಂದಿ ಆಯೇಷ ಎಲ್ಲಿ ನನ್ನ ಪತಿ ಎಂದು ಕೂಗಾಡಿದ್ದಾರೆ. ಈ ವೇಳೆ ಪೊಲೀಸರು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದು ನಿಮ್ಮ ಪತಿಯನ್ನು ಗೋವಾದಲ್ಲಿ ಬಂಧಿಸಲಾಗಿದ್ದು ಹೈದ್ರಾಬಾದ್ಗೆ ಕರೆತರಲಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲಿಂದ ಇಲ್ಲಿಯವರೆಗೆ ಬರಲು ಸಮಯ ಬೇಕು ನೀವು ಹೊರಡಿ ಎಂದು ಮನವಿಯನ್ನೂ ಮಾಡಿಕೊಂಡಿದ್ದಾರೆ. ಆ ನಂತರ ಪೊಲೀಸ್ ಠಾಣೆಯಿಂದ ಹೊರ ಬಂದ ಆಯೇಷಾ ಅಲ್ಲಿದ್ದ ಮಾಧ್ಯಮದವರ ಮೇಲೆ ಕೂಡ ಕಿಡಿ ಕಾರಿದ್ದಾರೆ. ನನ್ನನ್ನೂ ನೀವು ಕ್ಯಾಮರಾದಲ್ಲಿ ಸೆರೆ ಹಿಡಿದರೆ ನಾನು ನಿಮ್ಮ ಮೇಲೆ ಕೇಸ್ ಹಾಕುತ್ತೇನೆ ಎಂದು ಬೆದರಿಕೆಯನ್ನೂ ಹಾಕಿ, ಪ್ರಕರಣಕ್ಕೆ ಸಂಬಂಧಿಸಿದಂತೆ ಯಾವುದೇ ಪ್ರತಿಕ್ರಿಯೆಯನ್ನು ನೀಡದೇ ಅಲ್ಲಿಂದ ಹೋಗಿದ್ದಾರೆ.
ಅತ್ಯಾಚಾರ ಪ್ರಕರಣದಲ್ಲಿ ಯುವತಿ ಜಾನಿ ಮಾಸ್ಟರ್ ಜೊತೆಗೆ ಆತನ ಪತ್ನಿಯ ಮೇಲೂ ದೂರು ನೀಡಿದ್ದಾರೆ. ಗಂಡನ ಜೊತೆ ಸೇರಿ ಆಯೇಷಾ ಕೂಡ ನನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ದೂರು ಸಲ್ಲಿಸದ್ದಾರೆ. ದೂರು ನೀಡಿರುವ ಯುವತಿಗೆ ಈಗ 21 ವರ್ಷ. ಆದರೆ ಜಾನಿ ಮಾಸ್ಟರ್ ನನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಯುವತಿ ಈ ಘಟನೆ ನಡೆದಾಗ ಅಪ್ರಾಪ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ಪೊಲೀಸರು ಜಾನಿ ಮಾಸ್ಟರ್ ವಿರುದ್ಧ ಪೋಕ್ಸೊ ಕಾಯ್ದೆಯಡಿ ಪ್ರಕರಣವನ್ನು ದಾಖಲಿಸಿಕೊಂಡಿದ್ಧಾರೆ. ಸೆಕ್ಷನ್ 376, 506, 323 (2) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ವಿಚಾರಣೆ ವೇಳೆ ತಮ್ಮ ಧರ್ಮಕ್ಕೆ ಮತಾಂತರಗೊಳ್ಳುವಂತೆ ಕೂಡ ಜಾನಿ ಮಾಸ್ಟರ್ ಪೀಡಿಸುತ್ತಿದ್ದ ಎಂಬ ಆರೋಪವನ್ನೂ ಕೂಡ ಯುವತಿ ಮಾಡಿದ್ದಾರೆ ಸಂತ್ರಸ್ತ ಯುವತಿಗೆ ತೆಲುಗು ಚಿತ್ರರಂಗ ಅನೇಕರು ಬೆಂಬಲ ಸೂಚಿಸಿದ್ದಾರೆ. ಟಾಲಿವುಡ್ನ ಸ್ಟಾರ್ ಅಲ್ಲು ಅರ್ಜುನ್ ತಮ್ಮ ಎಲ್ಲ ಚಿತ್ರಗಳಲ್ಲಿಯೂ ಸಂತ್ರಸ್ತ ಯುವತಿಗೆ ಕೆಲಸ ಕೊಡುವುದಾಗಿ ಭರವಸೆಯನ್ನು ಕೂಡ ನೀಡಿದ್ದಾರೆ. ಅಲ್ಲು ಅರ್ಜುನ್ ಅವರಲ್ಲದೇ ಅನೇಕ ನಿರ್ದೇಶಕರು ಮತ್ತು ನಟಿಯರು ಕೂಡ ಯುವತಿ ಪರ ನಿಂತಿದ್ದಾರೆ.
ಇನ್ನೂ ಈ ಪ್ರಕರಣವನ್ನು ತೆಲುಗಿನ ನೃತ್ಯ ನಿರ್ದೇಶಕ ಸಂಘ ಕೂಡ ಗಂಭೀರವಾಗಿ ಪರಿಗಣಿಸಿದ್ದು, ಪವನ್ ಕಲ್ಯಾಣ್ ಅವರ ಜನಸೇನಾ ಪಕ್ಷದ ಸದಸ್ಯತ್ವವನ್ನು ಕೂಡ ಜಾನಿ ಮಾಸ್ಟರ್ನಿಂದ ಹಿಂಪಡೆಯಲಾಗಿದೆ.