ಬೆಂಗಳೂರು: ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್ ಗೆ ರಾಜಾತಿಥ್ಯ ಪ್ರಕರಣ ಬೆಳಕಿಗೆ ಬಂದ ಬಳಿಕ ಸೆಕ್ಯೂರಿಟಿ ಟೈಟ್ ಆಗಿದೆ. ಆದ್ರೆ ಟೈಟ್ ಸೆಕ್ಯೂರಿಟಿ ಹೆಸರಿನಲ್ಲಿ ಜೈಲು ಅಧಿಕಾರಿಗಳ ನೂತನ ಕ್ರಮಗಳ ವಿರುದ್ಧ ಸಿಡಿದೆದ್ದ ಸಿಎಆರ್ ಪೊಲೀಸರು ಪ್ರತಿಭಟನೆ ನಡೆಸಿ ಬೇಸರ ವ್ಯಕ್ತಪಡಿಸಿದ್ದಾರೆ.
ಅಷ್ಟಕ್ಕೂ ಸಿಎಆರ್ ಪೊಲೀಸರ ಪ್ರತಿಭಟನೆ ಕಾರಣವಾದ್ರೂ ಏನೂ ಅಂತೀರಾ….? ಇಲ್ಲಿದೆ ನೋಡಿ ಡಿಟೇಲ್ಸ್…
ಹೌದು ಅಕ್ರಮ ಚಟುವಟಿಕೆಗಳ ಅಡಗು ತಾಣ ಎಂದು ಖ್ಯಾತಿ ಗಳಿಸಿದ್ದ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಕೊಲೆ ಆರೋಪಿ ನಟ ದರ್ಶನ್ ರಾಜಾತಿಥ್ಯ ಕೇಸ್ ಬಳಿಕ ಎಲ್ಲವೂ ಬದಲಾಗಿದೆ. ಅಧಿಕಾರಿಗಳ ತಲೆದಂಡ, ಕೊಲೆ ಆರೋಪಿಗಳ ಬೇರೆಡೆ ಸ್ಥಳಾಂತರದ ಬಳಿಕ ಪರಪ್ಪನ ಅಗ್ರಹಾರ ಜೈಲಿನಲ್ಲಿ ಹಲವು ಕಟ್ಟುನಿಟ್ಟಿನ ಕ್ರಮಗಳನ್ನು ಜಾರಿಗೆ ತರಲಾಗಿದೆ. ಅದ್ರಲ್ಲಿ ನ್ಯಾಯಾಲಯದಲ್ಲಿ ವಿಚಾರಣೆಗೆ ವಿಚಾರಣಾಧೀನ ಬಂಧಿಗಳನ್ನು ಕರೆದೊಯ್ಯುವ ಸಿಟಿ ರಿಸರ್ವ್ ಪೊಲೀಸರಿಗೂ ಕೆಲವು ಕ್ರಮಗಳನ್ನು ಅನ್ವಯಿಸಲಾಗಿದೆ. ವಿಚಾರಣಾಧೀನ ಬಂಧಿಗಳನ್ನು ಕರೆದೊಯ್ಯುವ ವೇಳೆ ಮತ್ತು ವಾಪರ್ ಮರಳಿ ಜೈಲಿಗೆ ಒಳ ಬಿಡುವ ವೇಳೆ ಶೂ ಮತ್ತು ಬೆಲ್ಟ್ ಬಿಚ್ಚಿ ಪರಿಶೀಲನೆ ನಡೆಸುತ್ತಾರೆಂದು ಸಿಎಆರ್ ಪೊಲೀಸರು ಇಂದು ಜೈಲು ಮುಂಭಾಗ ಕೆಲಕಾಲ ಪ್ರತಿಭಟನೆ ನಡೆಸಿದ್ದಾರೆ.
ಇನ್ನೂ ವಿಚಾರಣಾಧೀನ ಖೈದಿಗಳಂತೆ ಸಿಎಆರ್ ಪೊಲೀಸರನ್ನು ಜೈಲು ಸಿಬ್ಬಂದಿ ಕಳ್ಳರಂತೆ ಶೂ ಬಿಚ್ಚಿ ಬೆಲ್ಟ್ ಬಿಚ್ಚಿಸಿ ಪರಿಶೀಲನೆ ನಡೆಸುತ್ತಾರೆ. ಜೈಲು ಸಿಬ್ಬಂದಿ ಅಕ್ರಮಗಳನ್ನು ತಡೆಯುವಲ್ಲಿ ವಿಫಲವಾಗಿದ್ದಾರೆ. ಪರಿಣಾಮವಾಗಿ ಜೈಲಿನಲ್ಲಿ ಇತ್ತೀಚೆಗೆ ಆಂಡ್ರಾಯ್ಡ್ ಮೊಬೈಲ್ ಸೇರಿದಂತೆ ನಗದು ಸಹ ಪತ್ತೆಯಾಗಿದೆ. ತಮ್ಮ ತಪ್ಪನ್ನು ಮರೆಮಾಚಲು ಸಿಎಆರ್ ಪೊಲೀಸರನ್ನು ತಪಾಸಣೆ ಮಾಡುವುದು ಸರಿಯಲ್ಲ ಎಂದು ಹೆಸರು ಹೇಳಲಿಚ್ಚಿಸದ ಸಿಎಆರ್ ಪೊಲೀಸರು ಬೇಸರ ವ್ಯಕ್ತಪಡಿಸಿದ್ದಾರೆ. ಜೈಲಿನ ಸಿಬ್ಬಂದಿ ಮತ್ತು ಅಧಿಕಾರಿಗಳು ಪ್ರಮಾಣಿಕವಾಗಿ ಕಾರ್ಯ ನಿರ್ವಹಿಸಿದರೆ ಜೈಲಿನೊಳಗೆ ಸೊಳ್ಳೆ ಕೂಡ ಒಳ ಹೋಗದಂತೆ ತಡೆಯಬಹುದು. ಆದ್ರೆ ತಮ್ಮ ತಟ್ಟಯಲ್ಲಿ ಹೆಗ್ಗಣ್ಣ ಬಿದ್ದಿದ್ದರೆ ನಮ್ಮಗಳ ತಟ್ಟೆಯಲ್ಲಿ ಇಲಿ ಹುಡುಕುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಇದರ ನಡುವೆ ಕೊಲೆ ಆರೋಪಿ ನಟ ದರ್ಶನ್ಗೆ ರಾಜಾತಿಥ್ಯ ಮತ್ತು 15 ಮೊಬೈಲ್ಗಳು ಪತ್ತೆ ಹಿನ್ನೆಲೆ ವಿಲ್ಸನ್ ಗಾರ್ಡನ್ ನಾಗನ ವಿಚಾರಣೆ ಕೂಡ ನಡೆಸಿದ ಸಿಸಿಬಿ ಜಂಟಿ ಆಯುಕ್ತ ಚಂದ್ರಗುಪ್ತ ಜೈಲಿನ ಕೆಲ ಸಿಬ್ಬಂದಿಯನ್ನು ವಿಚಾರಣೆ ನಡೆಸಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಮಂದಿ ಜೈಲು ಸಿಬ್ಬಂದಿ ತಲೆದಂಡ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.