ಮಂಡ್ಯ:- ನಾಗಮಂಗಲಕ್ಕೆ ಕುಮಾರಸ್ವಾಮಿ ಭೇಟಿ ವಿಚಾರವಾಗಿ ಸಚಿವ ಚಲುವರಾಯಸ್ವಾಮಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು,ನಾಗಮಂಗಲ ಗಲಭೆ ಈಗ ಮುಗಿದುಹೋಗಿರುವ ವಿಚಾರ ಅದನ್ನು ಇಲ್ಲಗೆ ಬಿಡುವುದು ಒಳ್ಳೆಯದು. ಪದೇ ಪದೇ ಹೋಗುವುದರಿಂದ ಏನು ಪ್ರಯೋಜನ.
ಪರಿಹಾರ ಕೊಡಿಸುವ ವಿಚಾರವಾಗಿ ಕೆಲಸ ಮಾಡ್ತೇವೆ. ಸೈಲೆಂಟ್ ಆಗಿರೋದನ್ನ ದಿನಾ ಬೆಳಿಗ್ಗೆ ಎದು ಕೆದಕುತ್ತಿದ್ದರೆ ನಾನು ಏನು ಮಾಡೋಕ್ಕಾಗುತ್ತೆ ಎಂದರು.
ಅವರಿಗೆ ಅವರೇ ಪರಿಹಾರ ಹುಡಿಕೊಳ್ಳಬೇಕು. ಬೇಲ್ ಕೊಡಿಸೋದಕ್ಕೆ ನಮ್ಮ ಹುಡುಗರು ಕೆಲಸ ಮಾಡ್ತಿದ್ದಾರೆ. ಮತ್ತೆ ಯಾರನ್ನೂ ಅರೆಸ್ಟ್ ಮಾಡಿಲ್ಲ. ಮುಸ್ಲಿಂ-ಹಿಂದೂ ಒಗ್ಗಟ್ಟಿನಿಂದ ಇದ್ದಾರೆ. ಶಾಂತಿ ಸಭೆ ಇದೆ, ಪದೆ ಪದೆ ಹೋಗುವುದು ಸರಿಯಲ್ಲ. ಅವರು ಜಿಲ್ಲೆಯ ಎಂಪಿ ಬರಬೇಡಿ ಅನ್ನೋಕೆ ಆಗುತ್ತಾ ಎಂದರು. ನಾಗಮಂಗಲದಲ್ಲಿ ಬಾಂಗ್ಲಾದೇಶದವರು ಇರುವ ವಿಚಾರ, ಎಸ್ಪಿ ಅವರಿಗೆ ಹೇಳಿದ್ದೇನೆ. ಈ ಬಗ್ಗೆ ಮಾತನಾಡಿರುವ ಮಾಜಿ ಶಾಸಕರಿಗೆ ನೋಟಿಸ್ ಕೊಟ್ಟು, ವಿವರಣೆ ಕೇಳಲು ಹೇಳಿದ್ದೇನೆ. ಬಾಂಗ್ಲಾದೇಶದಿಂದ ಬಂದಿದ್ದಾರೆ ಅಂದ್ರೆ ಅದರ ವೈಫಲ್ಯ ಕೇಂದ್ರ ಸರ್ಕಾರ. ಮೋದಿ ಹಾಗೂ ಕೇಂದ್ರಮಂತ್ರಿ ಕುಮಾರಸ್ವಾಮಿ ಉತ್ತರ ಕೊಡಬೇಕಾಗುತ್ತೆ ಎಂದರು.
ಸಿಎಂ ಅಸಹಾಯಕತೆ, ಚಲುವರಾಯಸ್ವಾಮಿ ರಾಜೀನಾಮೆಗೆ ಕುಮಾರಸ್ವಾಮಿ ಆಗ್ರಹ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ಅವರು ಹೇಳಿದ ಮೇಲೆ ನಾನು ರಾಜಿನಾಮೆ ಕೊಡಬೇಕಲ್ಲ. ನನ್ನ ಶಾಸಕ, ಮಂತ್ರಿ ಮಾಡಿದ್ದು ಅವರೇ ಅಲ್ವಾ ಎಂದು ವ್ಯಂಗ್ಯವಾಡಿದರು.
ಸಿಎಂ ವಿರುದ್ದ ಹಿಟ್ಲರ್ ಎಂಬ ಶೋಭಾಕರಂದ್ಲಾಜೆ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಕೇಂದ್ರದ ಸಚಿವೆ ತೂಕವಾಗಿ ಮಾತನಾಡಬಹುದು. ಅವರಿಗೆ ನಾವು ಉತ್ತರ ಕೊಡಬಹುದು ಕೊಟ್ಟರೆ ನಮ್ಮ ವ್ಯಕ್ತಿತ್ವ ಹಾಳಾಗುತ್ತೆ. ಶೋಭಾ, ಅಶೋಕ್ ಗೆ ಬೇಕಿರೋದು ಸಾರ್ವಜನಿಕರ ಹಿತ, ಶಾಂತಿ ಅಲ್ಲ. ಅವರ ಬಗ್ಗೆ ಮಾತಾಡಿದರೆ ನಮ್ಮ ವ್ಯಕ್ತಿತ್ವ ಹಾಳಾಗಲಿದೆ. ಅವರ ಬಗ್ಗೆ ಮಾತಾಡೋಕೆ ಹೋಗಬಾರದು. ಇಬ್ಬರೂ ಸೇರಿ ಕೆರಗೋಡು ಗ್ರಾಮದಲ್ಲಿ ಶುರು ಮಾಡಿದರು. ಕೆ.ಆರ್.ಪೇಟೆಯಲ್ಲಿ, ಪಾಂಡವಪುರದಲ್ಲಿ ಪ್ರಯತ್ನ ಮಾಡಿದರು. ಅದ್ಯಾವುದು ಸಕ್ಸಸ್ ಆಗಲಿಲ್ಲ. ಈಗ ಮತ್ತೆ ನಾಗಮಂಗಲಕ್ಕೆ ಪದೇ ಪದೇ ಬರ್ತಿದ್ದಾರೆ. ಘರ್ಷಣೆಗೆ ಜೆಡಿಎಸ್ನ ಕೆಲವರು ಕುಮ್ಮಕ್ಕು ಕೊಡಲು ನಿಂತಿದ್ದಾರೆ ಎಂದರು.