ಕಿರಿಕ್ ಪಾರ್ಟಿ ಸಿನಿಮಾದ ಮೂಲಕ ಸಿನಿಮಾಗೆ ಎಂಟ್ರಿಕೊಟ್ಟ ನಟಿ ರಶ್ಮಿಕಾ ಮಂದಣ್ಣ ಸದ್ಯ ಬಾಲಿವುಡ್ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಮಂದಣ್ಣ ಹೆಸರು ಕೇಳ್ತಿದ್ದಂತೆ ಅವರ ಕ್ಯೂಟ್ ಸ್ಮೈಲ್ ಕಣ್ ಮುಂದೆ ಬರುತ್ತೆ. ಅಷ್ಟುಕ್ಕೂ ರಶ್ಮಿಕಾ ಇಷ್ಟು ಚಂದದ ನಗುವಿಗಾಗಿ ಏನ್ಮಾಡ್ತಾರೆ ಗೊತ್ತಾ?
ಸಾಮಾನ್ಯವಾಗಿ ಹೆಚ್ಚಿನವರು ಬಿಳಿ ಅಥವಾ ಕೆಂಪು ಬಣ್ಣದ ಟೂತ್ ಪೇಸ್ಟ್ ಬಳಸುತ್ತಾರೆ. ಆದರೆ ರಶ್ಮಿಕಾ ಬಳಸೋದು ನೇರಳೆ ಬಣ್ಣದ ಟೂತ್ ಪೇಸ್ಟ್ ಅನ್ನು. ಇತ್ತೀಚೆಗೆ ರಶ್ಮಿಕಾ ಇನ್ಸ್ಟಾಗ್ರಾಮ್ನಲ್ಲಿ ವಿಡಿಯೋ ಶೇರ್ ಮಾಡಿದ್ದರು. ಅದರಲ್ಲಿ ನಟಿ ಬ್ರಶ್ ಮಾಡುವುದು, ರೆಡಿಯಾಗುವುದನ್ನು ತೋರಿಸಿದ್ದಾರೆ. ಈ ವೇಳೆ ನಟಿ ಪರ್ಪಲ್ ಬಣ್ಣದ ಟೂತ್ಪೇಸ್ಟ್ ಬಳಸಿದ್ದು ಸೋಷಿಯಲ್ ಮೀಡಿಯಾದ್ಯಂತ ವೈರಲ್ ಆಗಿದೆ. ಇದು ಜಾಹೀರಾತು ಭಾಗವೇ ಎನ್ನುವುದು ಖಚಿತವಾಗಿಲ್ಲ.
ನಟಿ ಇತ್ತೀಚೆಗೆ ತಾವು ಕಾಲ್ಗೇಟ್ ವಿಸಿಬಲ್ ವೈಟ್ ಪರ್ಪಲ್ ಟೂತ್ಪೇಸ್ಟ್ ಬಳಸುವುದಾಗಿ ರಿವೀಲ್ ಮಾಡಿದ್ದಾರೆ. ಇದರ ಬೆಲೆ 152 ರೂಪಾಯಿ ಇದೆ. ಅಂದ ಹಾಗೆ ನಟಿ ನಿತ್ಯವೂ ಹಲ್ಲುಜ್ಜಲು ಇದೇ ಪೇಸ್ಟ್ ಬಳಸೋದಾಗಿ ಹೇಳಿಕೊಂಡಿದ್ದಾರೆ.
ಬ್ರಶ್ ಮಾಡುವುದು, ಕ್ಲೀನಿಂಗ್, ಮಾಯ್ಚರೈಸಿಂಗ್, ಸನ್ ಸ್ಕ್ರೀನ್ ಹಾಕುವುದು, ಲಿಪ್ ಬಾಮ್ ನನ್ನ ನಿತ್ಯದ ಅಗತ್ಯ. ಇದು ತುಂಬಾ ಬೇಸಿಕ್, ಆದರೆ ಆ ಕಾಂತಿಗೆ ಇದುವೇ ಕಾರಣ. ಕಲರ್ ಥೆರಪಿಯಲ್ಲಿ ಮ್ಯಾಜಿಕ್ ಇದೆ. ಪರ್ಪಲ್ ಹಳದಿಯನ್ನು ಓಡಿಸುತ್ತದೆ ಎಂದು ನಟಿ ಪೋಸ್ಟ್ಗೆ ಕ್ಯಾಪ್ಶನ್ ಬರೆದುಕೊಂಡಿದ್ದರು.