ಇನ್ನೇನು ಕೆಲವೇ ದಿನಗಳಲ್ಲಿ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಬಿಗ್ ಬಾಸ್ ಸೀಸನ್ 11 ಆರಂಭವಾಗಲಿದೆ. ಈಗಾಗಲೇ ಬಿಗ್ ಬಾಸ್ ತೆಲುಗು, ಹಿಂದಿ ಬಿಗ್ ಬಾಸ್ ಸೀಸನ್ 18ರ ಪ್ರೋಮೋ ಕೂಡ ಔಟ್ ಆಗಿದೆ. ಕನ್ನಡದಲ್ಲಿ ಬಿಗ್ ಬಾಸ್ ಸೀಸ್ನ 11 ನೋಡಲು ಅಭಿಮಾನಿಗಳು ಕಾಯ್ತಿದ್ದಾರೆ. ಈ ಮಧ್ಯೆ ಫ್ಯಾನ್ಸ್ ಗೆ ಬೇಸರ ಸುದ್ದಿಯೊಂದು ಬಿಗ್ ಬಾಸ್ ಕಡೆಯಿಂದ ಕೇಳಿ ಬಂದಿದೆ.
ವರದಿಯ ಪ್ರಕಾರ ಈ ಬಾರಿ ಬಿಗ್ ಬಾಸ್ ಸೀಸನ್ 11 ಜಿಯೋ ಸಿನಿಮಾದಲ್ಲಿ ಸ್ಟ್ರೀಮಿಂಗ್ ಆಗುತ್ತಿಲ್ಲವಂತೆ. ಈ ಸೀಸನ್ನಲ್ಲಿ ಕಳೆದ ಬಾರಿಯಂತೆ 24 ಗಂಟೆಗಳ ಲೈವ್ ಇರುವುದಿಲ್ಲವಂತೆ. ಅಷ್ಟೇ ಅಲ್ಲ, ಕಾರ್ಯಕ್ರಮದ ಲೈವ್ ಮಿಸ್ ಮಾಡಿಕೊಂಡವರು ಅದನ್ನು ಜಿಯೋದಲ್ಲಿ ನೋಡುವ ಅವಕಾಶವಿತ್ತು. ಆದರೆ ಈ ಬಾರಿ ವಾಹಿನಿ ಜಿಯೋದಲ್ಲಿ ಕಾರ್ಯಕ್ರಮವನ್ನು ಪ್ರಸಾರ ಮಾಡದಿರಲು ನಿರ್ಧರಿಸಿದೆ ಎಂಬ ಸುದ್ದಿ ಕೇಳಿ ಬಂದಿದೆ.
ಮೂಲಗಳ ಪ್ರಕಾರ ಕಲರ್ಸ್ ಕನ್ನಡದಲ್ಲಿ ಇಷ್ಟೂ ದಿನ 1 ವರೆ ಗಂಟೆಗಳ ಕಾಲ ಹೇಗೆ ಬಿಗ್ ಬಾಸ್ ಪ್ರಸಾರ ಕಾಣುತ್ತಿತ್ತೋ ಅದೇ ರೀತಿ ಈ ಬಾರಿಯೂ ಒಂದೂವರೆ ಗಂಟೆಗಳ ಕಾಲ ಕಾರ್ಯಕ್ರಮ ಪ್ರಸಾರವಾಗಲಿದೆ ಎನ್ನಲಾಗಿದೆ.
ತಮಿಳು, ತೆಲುಗುವಿನ ಬಿಗ್ ಬಾಸ್ನಲ್ಲಿ ಹೋಸ್ಟ್ ಬದಲಾಗಿದ್ದಾರೆ. ಹೀಗಾಗಿ ಕನ್ನಡದಲ್ಲಿಯೂ ಅದೇ ರೀತಿ ಆಗತ್ತೆ ಎಂದು ಪ್ರೇಕ್ಷಕರು ಆತಂಕ ವ್ಯಕ್ತಪಡಿಸಿದ್ದು. ಆದರೆ ಕಲರ್ಸ್ ವಾಹಿನಿ ಪ್ರೋಮೋ ಹಂಚಿಕೊಂಡ ಬಳಿಕ ಈ ಬಾರಿಯೂ ಸುದೀಪ್ ಹೋಸ್ಟ್ ಮಾಡುತ್ತಿದ್ದಾರೆ ಎಂಬ ಸ್ಪಷ್ಟವಾಗಿದೆ.