ಬೀದರ್: ತಮಿಳು, ಮಹಾರಾಷ್ಟ್ರ, ತೆಲುಗು, ಹಿಂದಿ,ಕನ್ನಡ , ಉರ್ದು,ಇಂಗ್ಲಿಷ್ ಸೇರಿದಂತೆ ವಿವಿಧ ಭಾಷೆಯಲ್ಲಿ ಸುಮಾರು 40 ನಮೂನೆಯ ಕಳಪೆ ಗುಟ್ಕಾ, ಪಾನಮಸಲಾ ತಂಬಾಕು ತಯಾರಿಸಿ ವಿವಿಧ ರಾಜ್ಯಕ್ಕೆ ಸಾಗಿಸುತ್ತಿರುವ ಅಡ್ಡೆ ಮೇಲೆ ಬೀದರ್ ವಾಣಿಜ್ಯ ತೆರಿಗೆ ಇಲಾಖೆ ಅಧಿಕಾರಿಗಳು ಭರ್ಜರಿ ಕಾರ್ಯಾಚರಣೆ ನಡೆಸಿ ದಾಳಿ ಮಾಡಿದ್ದಾರೆ.
ವಾಣಿಜ್ಯ ತೆರಿಗೆ ಇಲಾಖೆ ಸಹಾಯಕ ಆಯುಕ್ತ ಮಹೇಶ ಪಾಟೀಲ್ ನೇತೃತ್ವದಲ್ಲಿ ದಾಳಿ ಮಾಡಿ ಒಂದು ಕೋಟಿ ಗೂ ಅಧಿಕ ಮೌಲ್ಯದ ಪಾನಪಸಾಲ ತಯಾರಿಕೆ ಕಚ್ಚಾವಸ್ತುಗಳು ಹಾಗೂ ಗುಟ್ಕಾ ಹಾಗೂ ಪಾನ ಮಸಾಲಾವನ್ನು ವಶಕ್ಕೆ ಪಡೆದಿದ್ದಾರೆ.
ಬೀದರನ ಕೋಳಾರ ಕೈಗಾರಿಕೆ ಪ್ರದೇಶದಲ್ಲಿರುವ ಗೋದಾಮಿನಲ್ಲಿ ನಕಲಿ ವಿವಿಧ ಬ್ಯ್ಯಾಂಡ್ ಹೆಸರಲ್ಲಿ ಕಚ್ಚಾ ವಸ್ತುಗಳು ಪತ್ತೆ ಮಾಡಲಾಗಿದ್ದು, ಮಹಾರಾಷ್ಟ್ರ, ಗುಜರಾತ್, ತಮಿಳುನಾಡು, ತೆಲಂಗಾಣ ಹಾಗೂ ಆಂಧ್ರಪ್ರದೇಶಕ್ಕೆ ಇಲ್ಲಿ ತಯಾರಿಸುವ ಸುಮಾರು 40 ಕ್ಕೂ ಅಧಿಕ ನಮೂನೆಯ ಗುಟ್ಕಾ ಪಾನಮಸಲಾ ಸರಬರಾಜು ಮಾಡೋ ಮಾಹಿತಿ ಮೇರೆಗೆ ಮಧ್ಯ ರಾತ್ರಿ ಕಾರ್ಯಚರಣೆ ನಡೆಸಿದ ವಾಣಿಜ್ಯ ತೆರಿಗೆ ಅಧಿಕಾರಿಗಳು ಲಾರಿ ಚಾಲಕ ಹಾಗೂ ಕೆಲ ಸಿಬ್ಬಂದಿಗಳನ್ನ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳಕ್ಕೆ ಆಹಾರ ಸುರಕ್ಷತಾಧಿಕಾರಿ, ನ್ಯೂಟೌನ್ ಠಾಣೆ ಸಿಪಿಐ ವಿಜಯಕುಮಾರ್ ಹಾಗೂ ವಾಣಿಜ್ಯ ತೆರಿಗೆ ಅಧಿಕಾರಿಗಳಾದ ಮಹೇಶ ಪಾಟೀಲ್ ಹಾಗೂ ಶಿವಕುಮಾರ್ ಸ್ವಾಮಿ,ಅಶೋಕ ಹಾಗೂ ಮಹೇಶ ಮಾಶೆಟ್ಟೆ ಸೇರಿದಂತೆ ಅಧಿಕಾರಿಗಳ ತಂಡ ಗೋದಾಮಿನಲ್ಲಿ ಠಿಕಾಣಿ ಪರಿಶೀಲನೆ ಹೂಡಿ ಪರಿಶೀಲನೆ ನಡೆಸುತ್ತಿದ್ದಾರೆ