ಏಲಕ್ಕಿಯ ಸುವಾಸನೆ ನಾವು ಸ್ವಲ್ಪ ದೂರದಲ್ಲಿದ್ದರೂ ನಮ್ಮ ಮೂಗಿಗೆ ಬಡಿಯುತ್ತದೆ. ಅಡುಗೆ ಎಲ್ಲೂ ಕೂಡ ಇದರ ಬಳಕೆಯಿಂದ ಆಹಾರದ ರುಚಿ ಮತ್ತು ಪರಿಮಳ ಹೆಚ್ಚಾಗುತ್ತದೆ. ಇದಕ್ಕೆ ಅನುಗುಣವಾಗಿಯೇ ಏಲಕ್ಕಿಯಲ್ಲಿ ಸಾಕಷ್ಟು ಆರೋಗ್ಯ ಪ್ರಯೋಜನಗಳು ನಮಗೆ ಲಭ್ಯವಿವೆ.
ಹಾಗಾಗಿಯೇ ಏಲಕ್ಕಿಗೆ ಆಯುರ್ವೇದ ಪದ್ಧತಿಯಲ್ಲಿ ಕೂಡ ಒಂದು ವಿಶೇಷ ಸ್ಥಾನಮಾನವಿದೆ. ಏಲಕ್ಕಿಯ ಉಪಯೋಗದಿಂದ ಹಲವು ಬಗೆಯ ಕಾಯಿಲೆಗಳು ಮತ್ತು ಸಣ್ಣ ಪುಟ್ಟ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ಮನೆಯಲ್ಲಿನ ಹಿರಿಯರು ಹೇಳುತ್ತಾರೆ.
ಭಯ ದುರ್ವಾಸನೆಯನ್ನು ದೂರ ಮಾಡುವುದರ ಜೊತೆಗೆ ಜೀರ್ಣಾಂಗಕ್ಕೆ ಸಂಬಂಧ ಪಟ್ಟ ಕೆಲವು ಆರೋಗ್ಯ ಸಮಸ್ಯೆಗಳು ಕೂಡ ಏಲಕ್ಕಿಯಿಂದ ಇಲ್ಲವಾಗುತ್ತವೆ.
ಏಲಕ್ಕಿಯಲ್ಲಿ ಆಂಟಿ – ಮೈಕ್ರೋಬಿಯಲ್ ಚಟುವಟಿಕೆ ಕೂಡಿರುವ ಕಾರಣ ಆಹಾರದಲ್ಲಿ ಇದರ ಬಳಕೆಯಿಂದ ಸಾಕಷ್ಟು ಬಗೆಯ ಬ್ಯಾಕ್ಟೀರಿಯ ಮತ್ತು ಪಂಗಸ್ ಕಣಗಳು ಕೊಲ್ಲಲ್ಪಡುತ್ತವೆ.
ಒಂದು ಅಧ್ಯಯನ ಹೇಳುವ ಪ್ರಕಾರ ‘ ಕಾರ್ಡಮಮ್ ಎಸೆನ್ಶಿಯಲ್ ಆಯಿಲ್ ‘ ಬ್ಯಾಕ್ಟೇರಿಯಾ ಗಳನ್ನು ಮತ್ತು ಪಂಗಸ್ ರೋಗಾಣುಗಳನ್ನು ಕೊಲ್ಲುವುದರಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ.
ಸಂಶೋಧಕರು ಕೂಡ ತಾವು ಕೈಗೊಂಡ ಅಧ್ಯಯನದಲ್ಲಿ ಏಲಕ್ಕಿಯ ಎಣ್ಣೆಯಲ್ಲಿ ಬ್ಯಾಕ್ಟೀರಿಯಾದ ಹೊರಗಿನ ರಕ್ಷಾ ಕವಚವನ್ನು ನಾಶ ಪಡಿಸುವ ಶಕ್ತಿ ಇದೆ ಎಂದು ಹೇಳಿದ್ದಾರೆ.
ಹಾಗಾಗಿ ಎಲ್ಲಾ ಬಗೆಯ ಸೂಕ್ಷ್ಮಾಣುಗಳನ್ನು ಒಂದು ಹಂತದಲ್ಲಿ ನಾಶಪಡಿಸುವ ಆಂಟಿ – ಮೈಕ್ರೋಬಿಯಲ್ ಗುಣ ಲಕ್ಷಣಗಳು ಏಲಕ್ಕಿಯಲ್ಲಿ ಕಂಡು ಬರುತ್ತದೆ.