ಬಾಗಲಕೋಟೆ: ಇತ್ತೀಚಿಗೆ ಈದ್ ಮಿಲಾದ್ ಮೆರಣಿಗೆಯಲ್ಲಿ ಪಾಕ್, ಪ್ಯಾಲಿಸ್ತಾನ್ ಧ್ವಜ ಹಿಡಿದು ಹಾರಾಡಿಸಿರುವ ಪ್ರಕರಣಗಳ ಬಗ್ಗೆ ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ.
ಮಾಧ್ಯಮಗಳ ಬಳಿ ಮಾತನಾಡಿದ ಅವರು, ಇವತ್ತು ಇಡೀ ದೇಶದಲ್ಲಿ ವಿಶ್ವನಾಯಕ ನರೇಂದ್ರ ಮೋದಿ ಅಗಿದ್ದನ್ನು ಇಡೀ ವಿಶ್ವ ಮೆಚ್ಚುತ್ತೆ.ಆದರೆ, ವಿದೇಶಿಯ ಅನೇಕ ದ್ರೋಹಿ ಚಟುವಟಿಕೆಗಳು ಉಗ್ರಗಾಮಿ ಚಟುವಟಿಕೆಗಳು ಭಯೋತ್ಪಾದಕರಿಗೆ ಬೆಂಬಲ ಕೊಡುವ ಚಟುವಟಿಕೆಗಳು ಈ ದೃಷ್ಕೃತ್ಯಗಳಿಗೆ ಬೆಂಬಲ ಕೊಡ್ತಿದ್ದಾರೆ. ಎಂದು ಮಾಜಿ ಡಿಸಿಎಂ ಈಶ್ವರಪ್ಪ ಹೇಳಿದ್ದಾರೆ.
ಹಾಗೆ ಬರೀ ಬಾಗಲಕೋಟೆ, ಬೆಳಗಾವಿ, ಮಂಗಳೂರ ಅನ್ಕೋಬೇಡಿ ಎಲ್ಲೆಲ್ಲಿ ಅವರಿಗೆ ಶಕ್ತಿ ಇದೆಯೋ ಅಲ್ಲೆಲ್ಲ ಮಾಡ್ತಾರೆ. ಇದನ್ನ ತಡೆಯುವುದು ಯಾರು? ರಾಜ್ಯ ಸರ್ಕಾರ ಸರ್ಕಾರ ಬರೀ ಮುಸ್ಲಿಂರಿಗೆ ನೆಮ್ಮದಿ ಕೊಡೋದಲ್ಲ. ಹಿಂದು, ಮುಸ್ಲಿಂ, ಕ್ರಿಶ್ಚನ್ ಸಮಾಜಕ್ಕೆ, ಕನ್ನಡಿಗರಿಗೆ ನೆಮ್ಮದಿ ಕೊಡಬೇಕು. ಈ ದಿಕ್ಕಿನಲ್ಲಿ ಸಿಎಂ ಪ್ರಯತ್ನ ಮಾಡಬೇಕು.
ಗಲಭೆ ಆದಾಗ ಒಬ್ಬರು ಸಣ್ಣ ಘಟನೆ ಅಂತಾರೆ, ಇನ್ನೊಬ್ಬರು ಪ್ಲಾಗ್ ಹಿಡಿದು ಹೋಗೊದು ತಪ್ಪೇನು ಅಂತಾರೆ. ಮುಖ್ಯಮಂತ್ರಿಗಳು ಬಿಜೆಪಿ ಮೇಲೆ ಹಾಕ್ತಾರೆ ನಾನು ಪ್ರಾರ್ಥನೆ ಮಾಡ್ತೇನೆ. ರಾಜ್ಯ ಸರ್ಕಾರದ ಕರ್ತವ್ಯ ಮರೆತು. ಅವರಿಗೆ(ಸಿಎಂ) ನೂರು ಸಮಸ್ಯೆ ಇವೆ. ಯಾವ ಕೇಸ್, ಯಾವ ಲಾಯರ್ ತರಬೇಕು, ಹೊರಬರಬೇಕು ಅಂತ ಯೋಚನೆ.
ನಾನು ವೈಯಕ್ತಿಕ ಟೀಕೆ ಇಷ್ಟರಮಟ್ಟಿಗೆ ಕೇಳಿದ್ದಿಲ್ಲ. ಅಯ್ಯೋ ಅಯ್ಯೋ ಈಗಿನ ಪರಿಸ್ಥಿತಿ. ಚಾರಿತ್ರ್ಯ, ಆ ಪದಗಳು ದೇವರೇ ಕಾಪಾಡಬೇಕು.ಅವನ ಕೈಲಿ ಆಗಲಿಕ್ಕಿಲ್ಲ. ಇಷ್ಟು ಅಸಹ್ಯೆ ರಾಜಕಾರಣದಲ್ಲಿ ಬಂದಿರೋದು ನೋವಿನಿಂದ ಹೇಳ್ತೇನೆ ಎಂದು ವಿಷಾದ ವ್ಯಕ್ತ ಪಡಿಸಿದರು.