ಕಲಬುರ್ಗಿ:- ಜಿಲ್ಲೆಯ ಆಳಂದ ತಾಲ್ಲೂಕಿನ ಮಾಡ್ಯಾಳ ಬಳಿ ಮಾಜಿ ಗ್ರಾಂ ಸದಸ್ಯ ವಿಶ್ವನಾಥ್ ಜಮಾದಾರ್ ಹತ್ಯೆ ಪ್ರಕರಣದ ಕೊಲೆ ಆರೋಪಿ ಲಕ್ಷ್ಮಣ ಪೂಜಾರಿ ಕಾಲಿಗೆ ಪೊಲೀಸ್ ಫೈರಿಂಗ್ ಮಾಡಿದ್ದಾರೆ.
ಪಿಎಸ್ಐ ಇಂದುಮತಿ ಅವರು, ಲಕ್ಷ್ಮಣ ಪೂಜಾರಿ ಬಲಗಾಲಿಗೆ ಪೈರಿಂಗ್ ಮಾಡಿದ್ದಾರೆ. ಕೊಲೆ ಕೇಸ್ ನಲ್ಲಿ ಗನ್ ರಿಕವರಿ ಸಲುವಾಗಿ ತೇರಳಿದ್ದ ವೇಳೆ ಪೊಲೀಸರ ಮೇಲೆ ಆರೋಪಿ ಹಲ್ಲೆಗೆ ಯತ್ನಿಸಿದ್ದಾನೆ.
ಈ ವೇಳೆ ಆತ್ಮರಕ್ಷಣೆಗೆ ಪೊಲೀಸರು ಫೈರಿಂಗ್ ಮಾಡಿದ್ದಾರೆ. ಇನ್ನೂ ಕಳೆದ 13 ರಂದು ಆಳಂದ ತಾಲ್ಲೂಕಿನ ಖಾನಾಪುರ ಕ್ರಾಸ್ ಬಳಿ ಗ್ರಾಂ ಸದಸ್ಯ ವಿಶ್ವನಾಥ್ ಪೂಜಾರಿ ಮೇಲೆ ಮೂರು ಬಾರಿ ಗುಂಡಿನ ದಾಳಿ ನಡೆಸಿ ಕೊಲೆ ಮಾಡಲಾಗಿತ್ತು. ಇನ್ನೂ ಕೊಲೆ ಆರೋಪಿ ಲಕ್ಷ್ಮಣ್ ಪೂಜಾರಿ ಮೇಲೆ 11 ಪ್ರಕರಣಗಳು ದಾಖಲಾಗಿರುವುದು ತಿಳಿದು ಬಂದಿದೆ.