ತಮಿಳಿನ ಖ್ಯಾತ ನಟ ಜಯಂ ರವಿ ಪತ್ನಿ ಆರತಿಗೆ ವಿಚ್ಛೇದನ ಘೋಷಿಸಿದ್ದಾರೆ. 15 ವರ್ಷಗಳ ವೈವಾಹಿಕ ಜೀವನಕ್ಕೆ ಫುಲ್ ಸ್ಟಾಪ್ ಇಟ್ಟ ಜಯಂ ರವಿ ಹೆಸರು ಬೆಂಗಳೂರು ಮೂಲದ ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗಿನ ಕೇಳಿ ಬಂದಿದೆ. ಇದೀಗ ವದಂತಿಗಳಿಗೆ ಜಯಂ ರವಿ ಪ್ರತಿಕ್ರಿಯಿಸಿದ್ದಾರೆ.
ಚೆನ್ನೈನ ಸತ್ಯಂ ಥಿಯೇಟರ್ನ ಹೊರಗೆ ಮಾಧ್ಯಮದವರೊಂದಿಗೆ ಮಾತನಾಡಿದ ಜಯಂ ರವಿ, ಗಾಸಿಪ್ಗಳ ನಡುವೆ ಕೆನಿಶಾ ಅವರ ಖ್ಯಾತಿಯನ್ನು ಹಾಳು ಮಾಡಬೇಡಿ ಎಂದು ಜನರನ್ನು ಒತ್ತಾಯಿಸಿದರು. “ಬದುಕಿ ಮತ್ತು ಬದುಕಲು ಬಿಡಿ. ಇಲ್ಲಿ ಯಾರ ಹೆಸರನ್ನೂ ಎಳೆಯಬೇಡಿ. ಜನರು ರ್ಯಾಂಡಮ್ ಆಗಿ ಮಾತನಾಡುತ್ತಿದ್ದಾರೆ. ಅಂತಹ ಕೆಲಸದಲ್ಲಿ ತೊಡಗಬೇಡಿ. ನಿಮ್ಮ ವೈಯಕ್ತಿಕ ಜೀವನವು ವೈಯಕ್ತಿಕವಾಗಿರಲಿ” ಎಂದಿದ್ದಾರೆ.
ಈ ವೇಳೆ, ಗಾಯಕಿ ಕೆನಿಶಾ ಫ್ರಾನ್ಸಿಸ್ ಸಾಧನೆಗಳನ್ನು ಒತ್ತಿ ಹೇಳಿದರು. “ಅವರು 600 ಸ್ಟೇಜ್ ಶೋಗಳಲ್ಲಿ ಹಾಡಿರುವ ಜನಪ್ರಿಯ ಗಾಯಕಿ. ಅವರು ತಮ್ಮ ಕಠಿಣ ಪರಿಶ್ರಮದಿಂದ ಉನ್ನತ ಸ್ಥಾನಕ್ಕೇರಿದವರು. ಅವರು ಅನೇಕ ಜೀವಗಳನ್ನು ಗುಣಪಡಿಸಿದವರು. ಅವರು ಪರವಾನಗಿ ಪಡೆದ ಮನಶ್ಶಾಸ್ತ್ರಜ್ಞರು. ದಯವಿಟ್ಟು ಅವರ ಹೆಸರನ್ನು ಇಲ್ಲಿ ತರಬೇಡಿ” ಎಂದು ಮನವಿ ಮಾಡಿದರು.