ಉತ್ತರ ಗಾಜಾದ ಶಾಲೆಯೊಂದರ ಮೇಲೆ ಇಸ್ರೇಲ್ ನಡೆಸಿದ ವೈಮಾನಿಕ ದಾಳಿಯಲ್ಲಿ 13 ಮಕ್ಕಳು ಸೇರಿದಂತೆ ಕನಿಷ್ಠ 22 ಜನ ಸಾವನ್ನಪ್ಪಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ.
ಹತ್ಯೆಗೀಡಾದವರಲ್ಲಿ 13 ಮಕ್ಕಳು, ಆರು ಮಹಿಳೆಯರು ಮತ್ತು ಮೂರು ತಿಂಗಳ ಮಗು ಸೇರಿದ್ದಾರೆ ಎಂದು ಗಾಜಾ ಸರ್ಕಾರಿ ಮಾಧ್ಯಮ ಕಚೇರಿ ಪ್ರಕಟಣೆಯಲ್ಲಿ ತಿಳಿಸಿದೆ. ಈ ದಾಳಿಯನ್ನು “ಭಯಾನಕ ಹತ್ಯಾಕಾಂಡ” ಎಂದು ಗಾಜಾ ಟೀಕಿಸಿದೆ.
ದಾಳಿಯಲ್ಲಿ ಕನಿಷ್ಠ 30 ಜನ ಗಾಯಗೊಂಡಿದ್ದಾರೆ, ಹಲವಾರು ಜನ ತೀವ್ರ ಸುಟ್ಟಗಾಯಗಳಿಂದ ಬಳಲುತ್ತಿದ್ದಾರೆ ಎಂದು ಸಚಿವಾಲಯ ಹೇಳಿದೆ. ಅಲ್ಲದೆ ಇನ್ನೂ ಇಬ್ಬರು ನಾಪತ್ತೆಯಾಗಿದ್ದಾರೆ ಎಂದು ಸಚಿವಾಲಯ ಹೇಳಿದೆ.
ಆದರೆ ಹಮಾಸ್ನ “ಕಮಾಂಡ್ ಮತ್ತು ಕಂಟ್ರೋಲ್ ಸೆಂಟರ್ ಅನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ಇಸ್ರೇಲಿ ಸೇನೆ ಹೇಳಿದೆ.
ಇದು ಹಿಂದೆ ಶಾಲೆಯಾಗಿ ಕಾರ್ಯನಿರ್ವಹಿಸುತ್ತಿದ್ದ ಕಾಂಪೌಂಡ್ನೊಳಗೆ ಯುದ್ಧಸಾಮಗ್ರಿಗಳ ಬಳಕೆ ಮತ್ತು ವೈಮಾನಿಕ ಕಣ್ಗಾವಲು ನಡೆಸಲಾಗುತ್ತಿತ್ತು. ಹಮಾಸ್ ಭಯೋತ್ಪಾದಕ ಸಂಘಟನೆಯು ಶಾಲೆಯಲ್ಲಿ ಕಲ್ಪಿಸಲಾಗಿರುವ ಮೂಲಸೌಕರ್ಯಗಳನ್ನು ಮಿಲಿಟರಿ ಉದ್ದೇಶಕ್ಕೆ ಬಳಸುವುದನ್ನು ಮುಂದುವರಿಸಿತ್ತು ಎಂದು ಇಸ್ರೇಲ್ ಸೇನೆ ಸ್ಪಷ್ಟಪಡಿಸಿದೆ.