ಸ್ಯಾಂಡಲ್ವುಡ್ ನಟಿ ಹರ್ಷಿಕಾ ಪೂಣಚ್ಚ ಹಾಗೂ ನಟ ಭುವನ್ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ತುಂಬು ಗರ್ಭಿಣಿ ಹರ್ಷಿಕಾ ಪೂಣಚ್ಚ ಅವರ ಬೇಬಿ ಶವರ್ ಪಾರ್ಟಿ ಇತ್ತೀಚೆಗೆ ಅದ್ದೂರಿಯಾಗಿ ನಡೆದಿದ್ದು ಈ ಪಾರ್ಟಿಯಲ್ಲಿ ಸ್ಯಾಂಡಲ್ ವುಡ್ ನ ಸಾಕಷ್ಟು ಸೆಲೆಬ್ರಿಟಿಗಳು ಭಾಗಿಯಾಗಿ ಶುಭ ಹಾರೈಸಿದ್ದಾರೆ.
ತುಂಬು ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ಗಣೇಶ್ ಸಪ್ರೈರ್ ಪಾರ್ಟಿ ಆಯೋಜಿಸಿದ್ದರು. ಬೇಬಿ ಶವರ್ ಪಾರ್ಟಿಯಲ್ಲಿ ಹರ್ಷಿಕಾ ಕೇಕ್ ಕತ್ತರಿಸಿ ಸಂಭ್ರಮಿಸಿದರು.
ಎಂಟು ತಿಂಗಳ ಗರ್ಭಿಣಿಯಾಗಿರುವ ಹರ್ಷಿಕಾ ಪೂಣಚ್ಚಾಗೆ ಗೋಲ್ಡನ್ ಸ್ಟಾರ್ ಗಣೇಶ್ ಹಾಗೂ ಶಿಲ್ಪಾ ದಂಪತಿಗಳು ಅದ್ಧೂರಿಯಾಗಿ ಬೇಬಿ ಶವರ್ ಪಾರ್ಟಿ ಮಾಡಿದ್ದಾರೆ. ಈ ಕಾರ್ಯಕ್ರಮ ಗಣೇಶ್ ಅವರ ಮನೆಯಲ್ಲಿ ನಡೆದಿದೆ.
ಗಣೇಶ್ ಮನೆಯನ್ನು ಅದ್ಧೂರಿಯಾಗಿ ಬಲೂನ್ ಗಳಿಂದ ಸಿಂಗರಿಸಿದ್ದು, ಬೇಬಿ ಶವರ್ ಗೆ ಸರಿ ಹೊಂದುವಂತಹ ನೀಲಿ ಮತ್ತು ಪಿಂಕ್ ಬಣ್ಣದ ಬಲೂನ್ ನಿಂದ ಸಿಂಗರಿಸಿದ್ದು, ಮರದ ಕೊಂಬೆಗೆ ಹಾಕಿದ ಜೋಕಾಲಿ ಮೇಲೆ ಮಗು ಮಲಗಿರುವ ಥೀಮ್ ನಲ್ಲಿ ಕೇಕ್ ರೆಡಿ ಮಾಡಿಸಿ, ಕತ್ತರಿಸಿ ಸಂಭ್ರಮಿಸಿದ್ದಾರೆ.
ಹರ್ಷಿಕಾ ಬೇಬಿ ಶವರ್ ಕಾರ್ಯಕ್ರಮದಲ್ಲಿ ನಟಿ ಅಮೂಲ್ಯ ಜಗದೀಶ್ ದಂಪತಿ, ಮಾಲಾಶ್ರೀ, ಆರಾಧನಾ, ಪ್ರಿಯಾಂಕಾ ಉಪೇಂದ್ರ, ಅನುಪ್ರಭಾಕರ್, ರಘು ಮುಖರ್ಜಿ, ಹಿರಿಯ ನಟಿ ಶ್ರುತಿ ಮತ್ತು ಅವರ ಪುತ್ರಿ ಗೌರಿ, ಶರಣ್ಯ ಶೆಟ್ಟಿ, ಸಂಗೀತಾ ಗುರುರಾಜ್, ನಿಖಿತಾ ನಾರಾಯಣ ಸೇರಿದಂತೆ ಅನೇಕರು ಭಾಗಿಯಾಗಿ ಹರ್ಷಿಕಾಗೆ ವಿಶ್ ಮಾಡಿದ್ದಾರೆ.
ಅಕ್ಟೋಬರ್ ತಿಂಗಳಲ್ಲಿ ಮಗುವಿನ ನಿರೀಕ್ಷೆಯಲ್ಲಿರುವ ಹರ್ಷಿಕಾ ಹಾಗೂ ಭುವನ್ ತಮ್ಮ ಸೋಶಿಯಲ್ ಮೀಡೀಯಾದಲ್ಲಿ ಬೇಬಿ ಶವರ್ ಫೋಟೊಗಳನ್ನು ಹಂಚಿಕೊಳ್ಳುವ ಮೂಲಕ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಶಿಲ್ಪಾ ದಂಪತಿಗಳಿಗೆ ಕೃತಜ್ಞತೆ ಸಲ್ಲಿಸಿದ್ದಾರೆ.
ಇದು ಜೀವಮಾನವಿಡೀ ನೆನಪಿನಲ್ಲಿಟ್ಟುಕೊಳ್ಳಬೇಕಾದ ಒಂದು ಬೇಬಿ ಶವರ್ !! ವಿನೋದ, ನಗು, ನಾನು ಹೆಚ್ಚು ಪ್ರೀತಿಸುವ ಜನರಿಂದ ನಿಜವಾದ ಆಶೀರ್ವಾದ ಸಿಕ್ಕಿದೆ ನನಗೆ. ನನಗಾಗಿ ಈ ಅದ್ಭುತವಾದ ಬೇಬಿ ಶವರ್ ಅನ್ನು ಆಯೋಜಿಸಿದ ಎಲ್ಲಾ ಕ್ರೆಡಿಟ್ ಗಣೇಶ್ ಸರ್ ಮತ್ತು ಅವರ ಪತ್ನಿ ಶಿಲ್ಪಾ ಮ್ಯಾಮ್ ಗೆ ಸಲ್ಲುತ್ತವೆ.
ಶಿಲ್ಪಾ ಮೇಡಂ ನೀವು ಸ್ನೇಹಿತೆ, ಮಾರ್ಗದರ್ಶಿ, ಹಿರಿಯ ಸಹೋದರಿ ಮತ್ತು ಕೆಲವೊಮ್ಮೆ ಹೆಚ್ಚು ಅಗತ್ಯವಿದ್ದಾಗಲೆಲ್ಲಾ ತಾಯಿಯಾಗಿದ್ದೀರಿ. ನಿಮಗೆ ಹೇಗೆ ಧನ್ಯವಾದ ಹೇಳಬೇಕೆಂದು ನನಗೆ ನಿಜವಾಗಿಯೂ ತಿಳಿದಿಲ್ಲ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ.
ಐ ರಿಯಲೀ ಲವ್ ಯೂ ಮ್ಯಾಮ್. ಇವತ್ತಿನ ಆಹಾರ, ಅಲಂಕಾರ, ವ್ಯವಸ್ಥೆಗಳು, ಆಹ್ವಾನಿತರು ಎಲ್ಲವೂ ಪರ್ಫೆಕ್ಟ್ ಆಗಿತ್ತು. ಮತ್ತೊಮ್ಮೆ ಧನ್ಯವಾದಗಳು. ಗಣೇಶ್ ಸರ್ ಅತ್ಯುತ್ತಮ ಹೋಸ್ಟ್ ಆಗಿದ್ದಕ್ಕಾಗಿ ಧನ್ಯವಾದಗಳು. ನಿಮ್ಮಿಂದಾಗಿ ನಾವು ತುಂಬಾ ನಕ್ಕೆವು ಎಂದಿದ್ದಾರೆ.
ಅಷ್ಟೇ ಅಲ್ಲ ನಾನು ನಿಮ್ಮನ್ನು ಯಾವಾಗಿನಿಂದ ತಿಳಿದಿರುವೆನೋ ಆವಾಗಿನಿಂದ ನಿಮ್ಮ ಸಿಂಪ್ಲಿಸಿಟಿಯಿಂದ ನಾನು ಪ್ರೇರಣೆ ಪಡೆದಿದ್ದೇನೆ ಗಣೇಶ್ ಸರ್. ಲವ್ ಯು ಟೂ. ನನಗೆ ಮತ್ತು ಮಗುವಿಗೆ ಶುಭ ಹಾರೈಸಲು ಬಂದ ಎಲ್ಲರಿಗೂ ಧನ್ಯವಾದಗಳು. ನಾನು ಇದನ್ನು ಎಂದೆಂದಿಗೂ ನೆನಪಿಸಿಕೊಳ್ಳುತ್ತೇನೆ. ನನ್ನ ಜೀವನದಲ್ಲಿ ಇಂತಹ ಜನರನ್ನ ಕೊಟ್ಟಿದ್ದಕ್ಕಾಗಿ, ಆ ದೇವರಿಗೆ ಥ್ಯಾಂಕ್ಸ್ ಎಂದು ಹರ್ಷಿಕಾ ಬರೆದುಕೊಂಡಿದ್ದಾರೆ.