ಬೆಂಗಳೂರು: ಸಿಸಿಬಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ, RBI ಹೆಸರಿನಲ್ಲಿ ಜನರನ್ನು ವಂಚನೆ ಮಾಡುತ್ತಿದ್ದ ಖತರ್ನಾಕ್ ಗ್ಯಾಂಗ್ ಅನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ರಕರಣ ಸಂಬಂಧ ಎಂಟು ಮಂದಿ ಆರೋಪಿಗಳಾದ ಅಶೋಕ್ ಕುಮಾರ್, ರಮೇಶ್ ಕುಮಾರ್, ಮಂಜುನಾಥ್, ರಾಜ್ ಕುಮಾರ್, ಗಂಗರಾಜು, ಕುಮಾರೇಶ್, ಮೂರ್ತಿ ನಾಯಕ್, ಸಿದ್ದರಾಜು ನಾಯಕ್ ಬಂಧಿತರು ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಸುಬ್ರಮಣ್ಯಪುರ ಪೊಲೀಸ್ ಠಾಣೆಯಲ್ಲಿ ಈ ಕುರಿತು ಕೇಸ್ ದಾಖಲು ಮಾಡಲಾಗಿದೆ. RBIನ ನಕಲಿ ದಾಖಲೆ ಸೃಷ್ಟಿ ಮಾಡಿಕೊಂಡು ಜನರಿಂದ ಸಾವಿರಾರು ಕೋಟಿ ರೂ. ವಂಚನೆ ಮಾಡಿದ್ದಾರೆ. ವಿದೇಶದಿಂದ 75 ಸಾವಿರ ಕೋಟಿ ರೂ. ಹಣ ಬಂದಿದೆ. ಅದನ್ನು ಡ್ರಾ ಮಾಡಿಕೊಳ್ಳಲು ಸುಮಾರು 150 ಕೋಟಿ ರೂ. ಹಣ ಬೇಕಾಗಿದೆ ಎಂದು ನಂಬಿಸಲಾಗಿದೆ.
ಬಳಿಕ ಹಣ ವಂಚನೆ ಮಾಡಲು ಪ್ಲಾನ್ ರೂಪಿಸಿದ್ದಾರೆ. ಈ ಕಥೆ ಪ್ರಕಾರ ಬಾಂಬೆ ಮತ್ತು ದೆಹಲಿಯ ಆರ್ಬಿಐ ಕಛೇರಿಗೆ ಕರೆದುಕೊಂಡು ಹೋಗಿದ್ದಾರೆ. ಆರ್ಬಿಐನಲ್ಲಿ ಫೋಟೋ ತೆಗೆಸಿ ಹಣ ಅಕೌಂಟ್ನಲ್ಲಿ ಇರುವ ರೀತಿ ಬಿಂಬಿಸಿದ್ದಾರೆ.
ನಕಲಿ ನೌಕರರನ್ನು ಸೃಷ್ಟಿ ಮಾಡಿದ್ದ ಗ್ಯಾಂಗ್, ಆರ್ಬಿಐ ಅಧಿಕಾರಿಗಳು ಹೇಳಿದ್ದಾರೆ ಎಂದು ಹಾಗೂ ಲ್ಯಾಪ್ ಟಾಪ್ನಲ್ಲಿ ನಕಲಿ ಲೆಟರ್ನ್ನು ತೋರಿಸಿದ್ದಾರೆ. ಹೀಗೆ ಹಲವಾರು ಜನರನ್ನು ಗ್ಯಾಂಗ್ ವಂಚಿಸಿದೆ.