ಬಿಗ್ ಬಾಸ್ ಕನ್ನಡ ಸೀಸನ್ 11ಕ್ಕೆ ಕೌಂಟ್ ಡೌನ್ ಶುರುವಾಗಿದೆ. ಇದೇ ಸೆ.29ರಂದು ಗ್ರ್ಯಾಂಡ್ ಓಪನಿಂಗ್ ಆಗಲಿದ್ದು ಈ ಮಧ್ಯೆ ಬಿಗ್ ಬಾಸ್ ಟೀಂ ಪ್ರೇಕ್ಷಕರಿಗೆ ಸಿಹಿಸುದ್ದಿಯೊಂದು ನೀಡಿದೆ. ದೊಡ್ಮನೆ ಆಟ ಶುರುವಾಗುವ ಮೊದಲೇ ಬಿಗ್ ಬಾಸ್ ಗೆ ಕಾಲಿಡುವ ಸ್ಪರ್ಧಿಯ ಹೆಸರನ್ನು ರಿವೀಲ್ ಮಾಡಲು ವಾಹಿನಿ ನಿರ್ಧರಿಸಿದೆ.
ಬಿಗ್ ಬಾಸ್ ಲಾಂಚ್ ಗೂ ಮೊದಲೇ ಕಂಟೆಸ್ಟೆಂಟ್ ಗಳ ಹೆಸರನ್ನು ರಿವೀಲ್ ಮಾಡುವ ಪ್ಲ್ಯಾನ್ ಇದೆ ಎಂದು ಕಲರ್ಸ್ ವಾಹಿನಿಯ ಬ್ಯುಸಿನೆಸ್ ಹೆಡ್ ಪ್ರಶಾಂತ್ ನಾಯಕ್ ತಿಳಿಸಿದ್ದಾರೆ. ಸೆ.28ರಂದು ಸಂಜೆ 6ಕ್ಕೆ ‘ರಾಜಾ ರಾಣಿ ರೀಲೋಡ್’ ಗ್ರ್ಯಾಂಡ್ ಫಿನಾಲೆ ನಡೆಯುತ್ತಿದ್ದು, ಇದರಲ್ಲಿ ಕೆಲ ಸ್ಪರ್ಧಿಗಳ ಹೆಸರನ್ನು ರಿವೀಲ್ ಮಾಡೋದಾಗಿ ತಿಳಿಸಿದ್ದಾರೆ.
ಬಿಗ್ ಬಾಸ್ ಲಾಂಚ್ ಗಿಂತ ಮೊದಲೇ ಸ್ಪರ್ಧಿಗಳ ಹೆಸರು ರಿವೀಲ್ ಆಗುತ್ತಿರೋದು ಈ ಸೀಸನ್ ಸ್ಪೆಷಾಲಿಟಿ ಎಂದಿದ್ದಾರೆ. ಕಳೆದ ಸೀಸನ್ ಗಿಂತ ಭಿನ್ನವಾಗಿರುವ ಸ್ಪರ್ಧಿಗಳೇ ಬರಲಿದ್ದಾರೆ ಎಂದು ತಿಳಿಸಿದ್ದಾರೆ.
ಇನ್ನೂ ಸೆ.29ರಂದು ಸಂಜೆ 6ಕ್ಕೆ ಗ್ರ್ಯಾಂಡ್ ಆಗಿ ಲಾಂಚ್ ಆಗುತ್ತಿದ್ದು, ಪ್ರತಿದಿನ ರಾತ್ರಿ 9:30ಕ್ಕೆ ಶೋ ಪ್ರಸಾರವಾಗಲಿದೆ ಎಂದು ವಾಹಿನಿ ತಿಳಿಸಿದೆ. ಕಿಚ್ಚನ ನಿರೂಪಣೆಯಲ್ಲಿ ಮತ್ತೊಮ್ಮೆ ಬಿಗ್ ಬಾಸ್ ಕಣ್ಮುಂಬಿಕೊಳ್ಳೋಕೆ ಅಭಿಮಾನಿಗಳು ಕಾಯ್ತಿದ್ದಾರೆ.