ಕಲಘಟಗಿ: ಕಲಘಟಗಿ ತಾಲೂಕಿನಲ್ಲಿ ಬಡ್ಡಿ ದಂಧೆ ಹೆಚ್ಚಾಗಿದ್ದು, ಬಡ್ಡಿ, ಮೀಟರ್ ಬಡ್ಡಿ ಕೊಡೋಕೆ ಆಗದೆ ಜನರು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ.ಕಲಘಟಗಿ ತಾಲ್ಲೂಕಿನ ಮಿಶ್ರಿಕೋಟಿ ಗ್ರಾಮದಲ್ಲಿ ಸದ್ದಾಂ ಕಟನೂರ್ ಎಂಬ 23 ವಯಸ್ಸಿನ ಯುವಕ ಸಾಲದ ಕಿರುಕುಳ ತಾಳಲಾರದೆ ನಿನ್ನೆ (ಮಂಗಳವಾರ) ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜರುಗಿದೆ.
ಸದ್ದಾಂ ಕಟನೂರ್ ಮನೆ ಕಟ್ಟಲು ಬ್ಯಾಂಕ್ ಹಾಗೂ ಗ್ರಾಮದಲ್ಲಿ ಬಡ್ಡಿ ಸಾಲ ತೆಗೆದುಕೊಂಡಿದ್ದ. ಸಾಲಗಾರರ ಕಿರುಕುಳ ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡಿರೋದಾಗಿ ಮೃತನ ಪತ್ನಿ ತಿಳಿಸಿದ್ದಾರೆ.ಕಲಘಟಗಿ ಪಟ್ಟಣ ಹಾಗೂ ತಾಲ್ಲೂಕಿನಲ್ಲಿ ಸಂಜೆ ಆದ್ರೆ ಸಾಕು ಕೈಯಲ್ಲಿ ಬುಕ್ ಹಾಗೂ ಪೆನ್ನು ಹಿಡಿದು ರಾಜಾರೋಷವಾಗಿ ಹಣ ವಸೂಲಿಗಾಗಿ ಓಡಾಡುವುದು ಸರ್ವೆ ಸಾಮಾನ್ಯವಾಗಿದೆ.
ಅಕ್ರಮ ಫೈನಾನ್ಸ್ ಹಾಗೂ ಬಡ್ಡಿ ದಂಧೆ ಹೆಚ್ಚಾಗಿದ್ದು ಸಾಲ ಪಡೆದ ಯುವಕರು ತಮ್ಮ ಆಸ್ತಿ ಪಾಸ್ತಿ ಮಾರಿಕೊಂಡು ಹಾಗೂ ಕುಟುಂಬಗಳನ್ನೇ ತೊರೆದು ಹೋಗಿದ್ದಾರೆ. ಕೂಡಲೆ ಸಂಬಂಧಪಟ್ಟ ಮೇಲಾಧಿಕಾರಿಗಳು ಇತ್ತಕಡೆ ಗಮನ ಹರಿಸಿ ಇಲ್ಲಿ ನಡೆಯುತ್ತಿರುವ ಬಡ್ಡಿ ದಂಧೆ ಹಾಗೂ ಅಕ್ರಮ ಫೈನಾನ್ಸ್ಗಳಿಗೆ ಕಡಿವಾಣ ಹಾಕುತ್ತಾರಾ ಎಂದು ಕಾದು ನೋಡಬೇಕಾಗಿದೆ.