ಹುಬ್ಬಳ್ಳಿ: ಕರ್ನಾಟಕ ರಾಜಕಾರಣದಲ್ಲಿ ಮುಖ್ಯಮಂತ್ರಿ ಸಿದ್ಧರಾಮಯ್ಯಾ ನವರಿಗೆ ತಮ್ಮದೇ ಆದ ಮಹತ್ವ ಹೆಜ್ಜೆ ಗುರುತು ಇದ್ದು ಅವರಿಗೆ ಒಂದು ಒಳ್ಳೆಯ ನೈತಿಕತೆ ಸಹ ಇದೆ ಆದ್ದರಿಂದ ಆ ನೈತಿಕತೆ ಇದ್ದರೆ ಕೂಡಲೇ ಅವರು ಮೈಸೂರು ನಗರಾಭಿವೃದ್ಧಿ ಇಲಾಖೆ( ಮುಡಾ) ದಲ್ಲಿ ಸೈಟ್ ಹಂಚಿಕೆಯಲ್ಲಿ ಆದ ಹಗರಣದಲ್ಲಿ ರಾಜೀನಾಮೆ ಕೊಡಬೇಕು ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದಲ್ಲಿಂದು ಅವರು ಸುದ್ದಿಗಾರರ ಮಾತನಾಡಿದರು. ಅವರು ರಾಜೀನಾಮೆ ಕೊಟ್ಟಿಲ್ಲ ಇವರು ಕೊಟ್ಟಿಲ್ಲ ಅಂತಾ ಹೇಳಿದರೆ ಅವರ ಸಾಲಿಗೆ ಇವರು ಸಹ ಸೇರಬೇಕಾಗುತ್ತದೆ ಎಂದ ಅವರು ಯಾವತ್ತು ಅವರ ಮೇಲೆ ಆರೋಪ ಬಂತು ದೂರು ಕೊಡಲಾಯಿತು, ರಾಜ್ಯಪಾಲರು ಪ್ರಾಸಿಕ್ಯೂಷನ್ ಗೆ ಅನುಮತಿ ಕೊಡಲಾಯಿತು ಸೇಷೇನ್ ಕೋರ್ಟ್ ಹಾಗೂ ಹೈಕೋರ್ಟ್ ಅನುಮತಿ ಕೊಟ್ಟಿತು ಇದು ಇನ್ನಷ್ಟು ಬಿಗಿಗೊಳಿತು ಏನಾದರೂ ಬೆಳವಣಿಗೆ ಆಗುವ ಮುನ್ನ ಅಥವಾ ಅವರು ಹೋರಾಟ ಮಾಡುವುದಾದರೆ ಮೊದಲು ರಾಜೀನಾಮೆ ಕೊಡಬೇಕು. ರಾಜೀನಾಮೆ ಕೊಟ್ಟು ತನಿಖೆ ಎದರುಸಬೇಕು ಎಂದು ಆಗ್ರಹಿಸಿದರು.
ನಮಗೂ ವಿಶ್ವಾಸ ಇದೆ ಅವರು ರಾಜೀನಾಮೆ ಕೊಡತಾರೆ ಅಂತಾ. ಇನ್ಮು ವಾಲ್ಮೀಕಿ, ಅರ್ಕಾವತಿ ಡಿನೋಟಿಪೈ ಪ್ರಕರಣವನ್ನ ತಾರ್ಕಿಕ ಅಂತ್ಯ ಕೊಂಡುಕೊಂಡು ಹೋಗುವಲ್ಲಿ ಸಹ ನಾವು ಹೋರಾಟ ಮಾಡುತ್ತೇವೆ ಎಂದರು. ಭಾರತೀಯ ಜನತಾ ಪಕ್ಷದ ಯಾವೊಬ್ಬ ಆರೋಪ ಮುಕ್ತವಾಗಿಲ್ಲ ಎಂಬ ಪ್ರಶ್ನೆಗೆ ಉತ್ತರ ಕೊಟ್ಟ ಅವರು ಮೊದಲು ಯಾರ ಮೇಲೆ ಆರೋಪ ಬಂದಿದ್ದು ಅವರು ರಾಜೀನಾಮೆ ಕೊಡಬೇಕು.
ಈಗ ಅವರ ಮೇಲೆ ಇವರ ಮೇಲೆ ಆರೋಪ ಬಂದಿದೆ ಅಂತಾ ಹೇಳುವುದು ಸರಿಯಲ್ಲ ಎಂದರು. ಇನ್ನು ಹಾವೇರಿ ಜಿಲ್ಲೆಯ ಶಿಗ್ಗಾಂವಿ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆ ಕುರಿತು ಈಗಾಗಲೇ ನಾವು ಎರಡೂ ಸಭೆ ಮಾಡಲಾಗಿದ್ದು ಯಾರು ಯಾರು ಟಿಕೆಟ್ ಕೇಳಿದ್ದಾರೆ ಅವರ ಜೊತೆ ಸಭೆ ಆಗಿದೆ ಚುನಾವಣಾ ನೋಟಿಪೇಷನ್ ಆಗಲಿ ಎಂದ ಅವರು ಇದೇ ವೇಳೆ ಹೊಂದಾಣಿಕೆ ರಾಜಕಾರಣ ಕುರಿತು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ಕೊಡಲಿಲ್ಲ ಎಂದರು