ಬಿಗ್ ಬಿ ಅಮಿತಾಬ್ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿ ಇಲ್ಲ. ಐಶ್ವರ್ಯಾ ರೈ ಹಾಗೂ ಅವರ ಮಾವ ಅಮಿತಾಭ್ ಬಚ್ಚನ್ ಮಧ್ಯೆ ಸರಿ ಇಲ್ಲ ಎನ್ನುವ ಮಾತು ಕೇಳಿ ಬಂದಿದೆ. ಐಶ್ವರ್ಯಾ ಹಾಗೂ ಅಮಿತಾಭ್ ಮಧ್ಯೆ ಏನೋ ಕಿರಿಕ್ ಆಗಿದೆ. ಅಮಿತಾಭ್ ಅವರು ಮಗಳು ಶ್ವೇತಾ, ಮಗ ಅಭಿಷೇಕ್, ಮೊಮ್ಮೊಗಳು ನವ್ಯಾ ಬಗ್ಗೆ ಪೋಸ್ಟ್ ಹಾಗು ಕಮೆಂಟ್ ಮಾಡುತ್ತಾರೆ. ಆದರೆ ಐಶ್ವರ್ಯಾ ಅವರನ್ನು ಕಂಡರೆ ಅವರಿಗೆ ಅಷ್ಟಕ್ಕಷ್ಟೆ. ಉದ್ದೇಶ ಪೂರ್ವಕವಾಗಿ ಅವರು ಐಶ್ವರ್ಯಾನ ದೂರವಿಡುತ್ತಿರುವಂತೆ ಕಂಡು ಬರುತ್ತಿದೆ ಎನ್ನಲಾಗುತ್ತಿದೆ.
ಐಶ್ವರ್ಯಾ ಹಾಗೂ ಅಮಿತಾಭ್ ಮಧ್ಯೆ ಯಾವುದೂ ಸರಿ ಇಲ್ಲ. ಜೊತೆಗೆ ಜಯ ಬಚ್ಚನ್ ಗೆ ಸೊಸೆಯನ್ನು ಕಂಡರೆ ಅಷ್ಟಕಷ್ಟೇ ಎನ್ನಲಾಗಿದೆ. ಈ ಎಲ್ಲಾ ಕಾರಣದಿಂದಲೇ ಐಶ್ವರ್ಯಾ ಹಾಗೂ ಪತಿ ಅಭಿಷೇಕ್ ಇಂದ ದೂರ ಆಗುವ ಪ್ರಯತ್ನದಲ್ಲಿ ಇದ್ದಾರೆ. ಇತ್ತೀಚೆಗೆ ‘ಜಾಗರೂಕ್ ಜನತಾ’ ಹೆಸರಿನ ಇನ್ಸ್ಟಾಗ್ರಾಮ್ ಖಾತೆ ಮೂಲಕ ಮಹಿಳೆಯೊಬ್ಬರು ವಿಡಿಯೋ ಪೋಸ್ಟ್ ಮಾಡಿದ್ದರು. ಇದರಲ್ಲಿ ಅವರು ಐಶ್ವರ್ಯಾನ ನಿರ್ಲಕ್ಷಿಸಿದ ಅಮಿತಾಭ್ ಅವರನ್ನು ಟೀಕಿಸಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ಹಿರಿಯ ನಟಿ ಸಿಮಿ ಗರೇವಾಲ್, ‘ನಿಮಗೇನು ಗೊತ್ತಿಲ್ಲ. ಇದನ್ನು ನಿಲ್ಲಿಸಿ’ ಎಂದಿದ್ದಾರೆ. ಈ ಮೂಲಕ ಬಚ್ಚನ್ ಕುಟುಂಬದಲ್ಲಿ ಎಲ್ಲವೂ ಸರಿಯಾಗಿಯೇ ಇದೆ ಎಂದು ಹೇಳಿದ್ದಾರೆ. ಇತ್ತೀಚೆಗೆ ಐಶ್ವರ್ಯಾ ಹಾಗೂ ಮಗಳು ಆರಾಧ್ಯಾ ಪ್ಯಾರಿಸ್ ತೆರಳಿದ್ದಾರೆ. ಅಲ್ಲಿ ‘ಪ್ಯಾರಿಸ್ ಫ್ಯಾಷನ್ ವೀಕ್’ನಲ್ಲಿ ಭಾಗಿ ಆಗಿ ಗಮನ ಸೆಳೆದಿದ್ದಾರೆ. ಈ ವೇಳೆ ಐಶ್ವರ್ಯಾ ಕೈಯಲ್ಲಿ ಅಭಿಷೇಕ್ ಈ ಮೊದಲು ಹಾಕಿದ್ದ ರಿಂಗ್ ಇತ್ತು. ಇದು ಅಭಿಮಾನಿಗಳ ಗೊಂದಲಕ್ಕೆ ಕಾರಣವಾಗಿದೆ.
ಐಶ್ವರ್ಯಾ ರೈ ಹಾಗೂ ಅಭಿಷೇಕ್ ಬಚ್ಚನ್ 2007ರ ಏಪ್ರಿಲ್ 20ರಂದು ವೈವಾಹಿಕ ಜೀವನಕ್ಕೆ ಕಾಲಿಟ್ಟರು. ಈ ದಂಪತಿಗೆ ಆರಾಧ್ಯಾ ಬಚ್ಚನ್ ಹೆಸರಿನ ಮಗಳು ಇದ್ದಾರೆ. ಐಶ್ವರ್ಯಾ ಹಾಗೂ ಆರಾಧ್ಯಾ ಮಾತ್ರ ಒಟ್ಟಾಗಿ ಕಾಣಿಸಿಕೊಳ್ಳುತ್ತಿರುವುದರಿಂದ ಸಹಜವಾಗಿಯೇ ಚರ್ಚೆಗಳು ಸೃಷ್ಟಿ ಆಗಿವೆ. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆ ಬಚ್ಚನ್ ಕುಟುಂಬದ ಕಡೆಯಿಂದ ಬಂದಿಲ್ಲ.