ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣ ಸಂಬಂಧ ಇಂದು 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಜೈಲೋ ಅಥವಾ ಬೇಲು ಸಿಗಬಹುದು ಎಂದು ಗೊತ್ತಾಗಲಿದೆ.
ಹೌದು .. ಬೆಂಗಳೂರಿನ 57ನೇ ಸಿಟಿ ಸಿವಿಲ್ ಕೋರ್ಟ್ ನಲ್ಲಿ ನಡೆಯಲಿರೋ ಜಾಮೀನು ಅರ್ಜಿ ವಿಚಾರಣೆ ನಟ ದರ್ಶನ್, ಪವಿತ್ರಾಗೌಡ ಸೇರಿ 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಯಲಿದೆ.
ದರ್ಶನ್, ಪವಿತ್ರಾಗೌಡ , ಲಕ್ಷ್ಮಣ್, ನಾಗರಾಜ್, ವಿನಯ್, ರವಿಶಂಕರ್ ಹಾಗೂ ಪವನ್ ಜಾಮೀನು ಅರ್ಜಿ ವಿಚಾರಣೆ ನಡೆಯಲಿದ್ದು ಕೊಲೆ ಪ್ರಕರಣದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ ಆರೋಪಿಗಳು.
ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾಗೌಡ, ಎ2 ಆರೋಪಿಯಾಗಿರುವ ದರ್ಶನ್ ಇಂದು ದರ್ಶನ್ ಜಾಮೀನು ಅರ್ಜಿಗೆ ಆಕ್ಷೇಪಣೆ ಸಲ್ಲಿಕೆ ಸಾಧ್ಯತೆ. ಎಸ್ ಪಿಪಿ ಪ್ರಸನ್ನ ಕುಮಾರ್ ರಿಂದ ಆಕ್ಷೇಪಣೆ ಸಲ್ಲಿಕೆ
ಜಾಮೀನು ಅರ್ಜಿ ಸಂಬಂಧ ಈಗಾಗಲೇ ಪೊಲೀಸರಿಗೆ ನೋಟಿಸ್ ನೀಡಿರುವ ಕೋರ್ಟ್ ಇಂದು 7 ಆರೋಪಿಗಳ ಜಾಮೀನು ಅರ್ಜಿ ವಿಚಾರಣೆ ನಡೆಸಲಿರೋ ಕೋರ್ಟ್