ಕೆಲಸದ ಒತ್ತಡದಿಂದ ಮನನೊಂದು ಗ್ರಾಮ ಲೆಕ್ಕಿಗರು ಅನಿರ್ದಿಷ್ಟಾವಧಿಯ ಧರಣಿ ಆರಂಭಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ.
ಕೈಗೆ ಕಪ್ಪು ಬಟ್ಟೆ ಕಟ್ಟಿಕೊಂಡು ರಾಜ್ಯಾದ್ಯಂತ ಇರುವ ಗ್ರಾಮ ಲೆಕ್ಕಿಗರಿಗೆ ಮೂಲಭೂತ ಸೌಲಭ್ಯಗಳನ್ನು ಸರ್ಕಾರ ಒದಗಿಸುತ್ತಿಲ್ಲ ಮತ್ತು ತಾಂತ್ರಿಕ ಕೆಲಸಗಳ ಒತ್ತಡ ಹೆಚ್ಚಾಗುತ್ತಿದ್ದು,
ಮೊಬೈಲ್ ಆ್ಯಪ್ ಮೂಲಕ ಕೆಲಸ ನಿರ್ವಹಿಸಲು ಯಾವುದೇ ಸೌಲಭ್ಯವಿಲ್ಲ ಹಾಗು ಅಂತರ್ಜಿಲ್ಲಾ ವರ್ಗಾವಣೆ ಕಳೆದ ಐದಾರು ವರ್ಷಗಳಿಂದ ಆಗಿಲ್ಲ ಕಾರ್ಯದ ಒತ್ತಡದಿಂದಾಗಿ ಈಗಾಗಲೇ 40 ಕ್ಕೂ ಹೆಚ್ಚು ಗ್ರಾಮಲೆಕ್ಕಿಗರು ಸಾವನಪ್ಪಿದ್ದಾರೆ ಕೂಡಲೇ ಸರ್ಕಾರ ತಮ್ಮ ಸಹಾಯಕ್ಕೆ ಮುಂದಾಗಬೇಕು ಇಲ್ಲದಿದ್ದಲ್ಲಿ ಅನಿರ್ದಿಷ್ಟಾವಧಿಯ ಪ್ರತಿಭಟನೆ ಮುಂದುವರಿಸಬೇಕಾಗುತ್ತದೆ ಎಂದು ವಿಲೇಜ್ ಅಕೌಂಟೆಂಟ್ ಗಳು ಪ್ರತಿಭಟನೆ ನಡೆಸಿದರು.
ಈ ವೇಳೆ ಅಥಣಿ ಶಾಸಕ ಲಕ್ಷ್ಮಣ ಸವದಿ ಪ್ರತಿಭಟನಾ ನಿರತರ ಮನ ಒಳೈಸುವ ಪ್ರಯತ್ನ ಮಾಡಿದರಲ್ಲದೆ ಗ್ರಾಮಲೆಕ್ಕಿಗರ ಮೂಲಭೂತ ಸೌಲಭ್ಯಗಳ ಕೊರತೆ,ಹಾಗೂ ಅಗತ್ಯ ಇರುವ ತುರ್ತು ಸ್ಪಂದನೆಯ ಕುರಿತು ಸರ್ಕಾರದ ಗಮನ ಸೆಳೆಯುವದಾಗಿ ಭರವಸೆ ನೀಡಿದರು