ಗಲ್ಲು ಶಿಕ್ಷೆಗೆ ಗುರಿಯಾಗಿ ಅತೀ ಹೆಚ್ಚು ವರ್ಷಗಳ ಕಾಲ ಜೈಲಿನಲ್ಲಿದ್ದ ಕೈದಿಗೆ ಜಪಾನ್ನಲ್ಲಿ ಕೊನೆಗೂ ಬಿಡುಗಡೆ ಭಾಗ್ಯ ಸಿಕ್ಕಿದೆ.
ಬಾಕ್ಸರ್ ಆಗಿದ್ದ ಜಪಾನ್ನ ಐವೋ ಹಕ ಮಡಾ ಎಂಬಾತ ತನ್ನ 45ನೇ ವಯಸ್ಸಿನಲ್ಲಿ ಅಂದರೆ 1966ರಲ್ಲಿ ತನ್ನ ಕಂಪೆನಿ ಮಾಲಕ ಆತನ ಪತ್ನಿ ಹಾಗೂ ಇಬ್ಬರು ಚಿಕ್ಕ ಮಕ್ಕಳನ್ನು ಹತ್ಯೆ ಮಾಡಿ ಜೈಲು ಪಾಲಾಗಿದ್ದ.
ಈತನ ಮೇಲಿದ್ದ ಆರೋಪ ಸಾಭೀತಾದ ಬಳಿಕ 1968ರಲ್ಲಿ ಈತನಿಗೆ ಜಪಾನ್ನ ಸುಪ್ರೀಂ ಕೋರ್ಟ್ ಗಲ್ಲು ಶಿಕ್ಷೆಯನ್ನು ವಿಧಿಸಿತ್ತು. ಆದರೂ ಆತನನ್ನು ಗಲ್ಲಿಗೆ ಏರಿಸಿರಲಿಲ್ಲ. ಈತ ಸುಮಾರು 48 ವರ್ಷ ಕಳೆದ ಬಳಿಕ ತನ್ನ 88ನೇ ವಯಸ್ಸಿನಲ್ಲಿ ಬಿಡುಗಡೆಯಾಗಿದ್ದಾನೆ.