ಕಲಘಟಗಿ( ಧಾರವಾಡ) : ಪಟ್ಟಣದಲ್ಲಿ ಕೇಲ ದಿನಗಳಿಂದ ವಿದ್ಯುತ್ ಇರದ ಕಾರಣ ಜನರು ತೊಂದರೆ ಅನುಭಸುತಿದ್ದು ಹೆಸ್ಕಾಂಗೆ ಹಿಡಿಶಾಪ ಹಾಕತಾ ಇದ್ದಾರೆ.
ಪ್ರತಿದಿನ ಬೆಳಗಿನ ಜಾವ ಮಧ್ಯಾಹ್ನ ಹಾಗೂ ಸಾಯಂಕಾಲ ಅರ್ಧ ಗಂಟೆಯಿಂದ ಹಿಡಿದು ಎರಡು ಗಂಟೆಗಳ ಕಟ್ ಆಗುವುದಿರಿಂದ ವಿದ್ಯಾರ್ಥಿಗಳಿಗೆ ಹಾಗೂ ಸಣ್ಣ ಪುಟ್ಟ ಕರಕುಶಲ ಕಾರ್ಮಿಕರಿಗೆ ಸಂಕಷ್ಟ ಅನುಭವಿಸುತ್ತಿದ್ದಾರೆ.
ಇಲ್ಲದೆ ಸಾರ್ವಜನಿಕರು ಪರಿತಪಿಸುತಿದ್ದಾರೆ. ಸರಕಾರ ಮಾತ್ರ ಗೃಹ ಜ್ಯೋತಿಯ ಭಾಗ್ಯ ಒದಗಿಸಿ ಸುಮ್ಮನೆ ಕುಳಿತಿಬಿಟ್ಟಿದೆ, ತಾಲೂಕಿನ ಸಾರ್ವಜನಿಕರ ಪರಿಸ್ಥಿತಿ ಕೇಳುವವರಿಲ್ಲ ಫೋನ್ ಮಾಡಿದ್ರೆ ಫ್ರೀ ಇದೆ ಅಲ್ರಿ ಬರುತ್ತೆ ತಡಿರಿ ಅನ್ನುವ ಮಾತು ಹೆಸ್ಕಾಂ ಅಧಿಕಾರಿಗಳಿಂದ ಸಾಮಾನ್ಯವಾಗಿದೆ.
ಮರ ಗಿಡಗಳು ವಿದ್ಯುತ್ ಲೈನಗಳ ಬಿದ್ದ ಕಾರಣ ವಿಳಂಬ ವಿದ್ಯುತ್ ಕಂಬಕ್ಕೆ ವಾಹನಗಳ ಡಿಕ್ಕಿ ಎಕ್ಸಿಡೆಂಟ್ ವಿದ್ಯುತ್ ಲೈನ್ ಸಂಚಾರದ ರಿಪೇರಿ ಹತ್ತು ಹಲವು ಸಮಸ್ಯೆ ಹೆಸ್ಕಾಂ ಸಿಬ್ಬಂದಿಗೆ ಕಾಡುತ್ತಿವೆ. ಕೆಲಸ ನಿರ್ವಹಿಸಿದರು ತಾಲೂಕಿಗೆ ಪ್ರತಿನಿತ್ಯ ಜನರಿಗೆ ವಿದ್ಯುತ್ ನಿಂದ ಬಹಳಷ್ಟು ಅನುಕೂಲಕರವಾಗಿದ್ರು ಕೆಲವೊಂದಿಷ್ಟು ಜನರು ಸೋಲಾರ್ ಬಳಕೆಯಲ್ಲಿದ್ದಾರೆ.
ತಾಲೂಕಿನ ಪ್ರತಿಯೊಂದು ಗ್ರಾಮದಲ್ಲಿ ಇದೇ ಸಮಸ್ಯೆ ಕಾಡುತ್ತಿದೆ ಸಮರ್ಪಕವಾದ ಟಿಸಿ ಕಾರ್ಯ ನಿರ್ವಹಿಸುತ್ತಿಲ್ಲ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಸಮರ್ಪಕವಾಗಿ ವಿದ್ಯುತ್ ನೀಡಲು ಅಧಿಕಾರಿಗಳು ಗಮನಹರಿಸಲು ಮುಂದಾಗುತ್ತಾರ ಕಾದು ನೋಡಬೇಕಾಗಿದೆ.