ಕಲಘಟಗಿ: ರಾಜ್ಯ ರೈತ ಸಂಘಟನೆ ಒಕ್ಕೂಟ, ರೈತರು ಸೇನಾ ಹಾಗೂ ನರಗುಂದ ಮಹದಾಯಿ ಹೋರಾಟ ವೇದಿಕೆ ನೇತೃತ್ವದಲ್ಲಿನ. 4ರಂದು ನರಗುಂದದಲ್ಲಿ ರೈತರ ಬೃಹತ್ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂ ದು ಜಿಲ್ಲಾ ಕಬ್ಬು ಬೆಳೆಗಾರರ ಸಂಘದ ಕಾರ್ಯ ದರ್ಶಿ ಪರಶುರಾಮ್ ಎತ್ತಿನಗುಡ್ಡ ತಿಳಿಸಿದರು.
ಸುದ್ದಿ ಗೋಷ್ಠಿ ಯಲ್ಲಿ ಮಾತನಾಡಿದ ಅವರು, ಹೋರಾಟದಲ್ಲಿ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬರ ಶಾಂತಕು ಮಾರ, ವೀರೇಶ ಸೊಬರದಮಠ ಹಾಗೂ ಹಲವು ರೈತ ಹೋರಾಟಗಾರರು,
ರೈತರು ಭಾಗವಹಿ ಸಲಿದ್ದಾರೆ ಎಂದರು. ಮಹದಾಯಿ ಯೋಜನೆಗೆ ವನ್ಯಜೀವಿ ಹಾ ಗೂ ಪರಿಸರ ಇಲಾಖೆಗಳ ಪರವಾನಗಿ ಯನ್ನು ಕೇಂದ್ರ ಸರ್ಕಾರ ನೀಡಬೇಕು. ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂ ಬಲ ಬೆಲೆ ಖಾತರಿ ಕಾನೂನು ಜಾರಿ, ಡಾ. ಸ್ವಾಮಿನಾ ಥನ ಆಯೋಗ ವರದಿಯಂತೆ ಕೃಷಿ ಉತ್ಪನ್ನಗಳಿಗೆ ಬೆಂಬಲ ಬೆಲೆ ನಿಗದಿಯಾಗಬೇಕು ಎಂದರು. ರೈತರ ಕೃಷಿ ಸಾಲ ಸಂಪೂರ್ಣ ಮನ್ನಾ, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ,
ಕೃಷಿ ಪಂಪಸೆಟ್ಗಳಿಗೆ ಆಧಾರ್ಲಿಂಕ್ ಮಾಡುವುದಕ್ಕೆ ತಡೆ, ಹಿಂದಿನ ವರ್ಷದ ಕಬ್ಬಿನ ಬಾಕಿ ಬಿಲ್ 150 ತಕ್ಷಣ ಬಿಡುಗಡೆ ಮಾಡಬೇ ಕೆಂದು ಒತ್ತಾಯಿಸಿದರು. ಮನುಷ್ಯನ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಮೇಲೆ ದುಷ್ಪರಿಣಾಮ ಬೀರುವ ಕುಲಾಂತರಿ ಬೀಜ ರಾಷ್ಟ್ರೀಯ ನೀತಿಯಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿ ಹೈದರಾಬಾದ್ನಲ್ಲಿ ನಡೆಯುತ್ತಿರುವ ದಕ್ಷಿಣ ಭಾರತ ರಾಜ್ಯಗಳ ರೈತ ಮುಖಂಡರ ಸಭೆಯಲ್ಲಿ ನಿಷೇಧಿಸಲು ಒತ್ತಾಯಿಸಲಾ ಗುವುದು ಎಂದರು.
ತಾಲೂಕಿನಲ್ಲಿ ಹಲವು ಸರ್ಕಾರಿ ಸ್ವಾಮ್ಯದ ಬ್ಯಾಂಕ್, ಖಾಸಗಿ ಫೈನಾನ್ಸ್ ರೈತರಿಂದ ಹಾಗೂ ಕೂಲಿ ಕಾರ್ಮಿಕರಿಂದ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಸಂಬಂಧಿಸಿದ ಇಲಾಖೆ ಅಧಿಕಾರಿಗಳ ಕ್ರಮಕೈಗೊಳ್ಳಬೇ ಕೆಂದು ಒತ್ತಾಯಿಸಿದರು. ರೈತ ಮುಖಂಡ ಉಳವಪ್ಪ ಬಳಿಗೇರ ಮಾತನಾಡಿ, ತಾಲೂಕಿನಲ್ಲಿ ಈ ವರ್ಷ ನಿರಂತರ ಮಳೆಗೆ ಬೆಳೆಗಳ ಇಳುವರಿ ಕುಂಠಿತಗೊಂಡಿದ್ದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಬೆಳೆ ಪರಿಶೀಲನೆ ಮಾಡದೆ ಸರ್ಕಾರಕ್ಕೆ ಬೆಳೆಹಾನಿ ವರದಿ ಸಲ್ಲಿಸಿದ್ದಾರೆ. ಇದರಿಂದ ಅರ್ಹ ರೈತರಿಗೆ ಅನ್ಯಾಯವಾಗುತ್ತಿದೆ. ಬೆಳೆಗಳು ಹಸಿರಿ ದ್ದರೂ ಕಾಳು ಕಟ್ಟಿಲ್ಲ ಎಂದರು. ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡರಾದ ಗದಿಗೆಪ್ಪಗೌಡ ಪಾಟೀಲ, ಸಿದ್ದಪ್ಪಬೆಟಗೇರಿ, ಫಕ್ಕೀರಪ್ಪ ತಡಸ, ನಾರಾಯಣ ನೆಸ್ತೆಕರ, ಬಸವಣ್ಣೆಪ್ಪ ಬಸನಕೊಪ್ಪ, ಚನ್ನಪ್ಪ ಸವಣೂರ ಉಪಸ್ಥಿತರಿದ್ದರು.