ಮಂಡ್ಯದ ಕೆರಗೋಡು ಹನುಮ ಧ್ವಜ ವಿವಾದ ಪ್ರಕರಣದ ಹಿನ್ನಲೆ, ಅರ್ಜಿದಾರರು ವಿವಾದದಿಂದ ಹಿಂದೆ ಸರಿದಿದ್ದಾರೆ.ಗ್ರಾಮಸ್ಥರು ತಾರ್ಕಿಕ ಅಂತ್ಯಕ್ಕೆ ಮುನ್ನುಡಿ ಬರೆದಿದ್ದಾರೆ.ಶಾಸಕರ ವಿರುದ್ದ ತೊಡೆತಟ್ಟಿದವರಿಂದಲೇ ಶಾಸಕರಿಗೆ ಬೆಂಬಲ ನೀಡಿದ್ದು,ಅಭಿವೃದ್ಧಿಗಾಗಿ ಹನುಮ ಧ್ವಜ ಪ್ರಕರಣ ಕೈಬಿಡಲು ಮನವಿ ಮಾಡಿಕೊಂಡಿದ್ದಾರೆ.
ಕೊನೆಗೂ ಹನುಮ ಧ್ವಜ ವಿವಾದಕ್ಕೆ ಪೂರ್ಣ ವಿರಾಮ ನೀಡಿದ್ದು, ಗ್ರಾ.ಪಂ.ಸದಸ್ಯರಾರದ ಯೋಗೇಶ್, ರಾಜೇಶ್ ಸುದ್ದಿಗೋಷ್ಟಿ ನಡೆಸಿದ್ದರು.ಶಾಸಕರ ಅಭಿವೃದ್ಧಿ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿ, ಗ್ರಾ.ಪಂ.ಸದಸ್ಯ ಹಾಗೂ ಹನುಮ ಧ್ವಜ ಪರವಾದ ಅರ್ಜಿದಾರ ಯೋಗೇಶ್ ಹೇಳಿಕೆ ಕೊಟ್ಟಿದ್ದಾರೆ.ಕಳೆದ ವರ್ಷ ಹನುಮ ಧ್ವಜದ ಪರವಾಗಿ ಗ್ರಾ.ಪಂ ಗೆ ಅರ್ಜಿ ಕೊಟ್ಟಿದೆ.ಗ್ರಾ.ಪಂ.ಯ ಕಾರ್ಯಾಂಗದ ಮುಖ್ಯಸ್ಥರು ಸಾರ್ವಜನಿಕ ಜಾಗದಲ್ಲಿ ಹನುಮಧ್ವಜ ಹಾಕುವ ಬಗ್ಗೆ ಮಾಹಿತಿ ಕೊಟ್ಟಿಲ್ಲ ಎಂದಿದ್ದಾರೆ.ಅರ್ಜಿ ಪಡೆದಿದ್ದರು, ಸದಸ್ಯರು ಅನುಮತಿ ಕೊಟ್ಟ ನಂತರ ಹನುಮ ಧ್ವಜ ಹಾರಿಸಲಾಗಿತ್ತು.ಹನುಮ ಧ್ವಜದ ಬಗ್ಗೆ ಪ್ರತಿಭಟನೆ ನಡೆಸಲಾಗಿತ್ತು ಎಂದು ತಿಳಿಸಿದ್ದಾರೆ